‘ಜವಾನ್‌’ ಚಿತ್ರದಲ್ಲಿನ ನಟಿ ನಯನತಾರಾ ಪಾತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಸಾಕಷ್ಟು ಆಕ್ಷನ್‌ ಸೀನ್‌ಗಳಿವೆ ಎನ್ನಲಾಗಿದೆ. ಅಟ್ಲೀ ನಿರ್ದೇಶನದ ಸಿನಿಮಾ ಸೆಪ್ಟೆಂಬರ್‌ 7ರಂದು ಬಿಡುಗಡೆಯಾಗಲಿದೆ.

ಶಾರುಖ್‌ ಖಾನ್ ‘ಜವಾನ್‌’ ಚಿತ್ರದ ಮತ್ತೊಂದು ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದ ನಾಯಕಿ ನಯನ ತಾರಾ ಪಾತ್ರದ ಪೋಸ್ಟರ್‌ ಅನ್ನು ಟ್ವೀಟ್‌ ಮಾಡಿದ್ದಾರೆ ಶಾರುಖ್‌. ಪೋಸ್ಟರ್‌ಗೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ನಯನತಾರಾ ಅವರ ಆಕ್ಷನ್ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಈಗ ಅವರ ಪೋಸ್ಟರ್‌ ಕೂಡ ಸಿನಿಪ್ರಿಯರಿಗೆ ಇಷ್ಟವಾಗಿದೆ. ನಯನ ತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಬಣ್ಣಿಸಿದ್ದಾರೆ. ಹಾಗಾಗಿ ನಟಿಯ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಶಾರುಖ್‌ ಮತ್ತು ನಯನತಾರಾ ಸ್ಕ್ರೀನ್‌ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದು, ನಯನತಾರಾ ʼಜವಾನ್‌ʼ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಿದ್ದು, ಅವರ ಈ ಪಾತ್ರ ಇಡೀ ಚಿತ್ರದ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ನಯನ ತಾರಾ ಆಕ್ಷನ್‌ ಮಾಸ್‌ ಲುಕ್‌ನಲ್ಲಿ ಪೇಕ್ಷಕರನ್ನು ರಂಜಿಸಲಿದ್ದಾರೆ. ಸಿನಿಮಾದಲ್ಲಿ ಬಹುತೇಕ ದಕ್ಷಿಣ ಭಾರತದ ಕಲಾವಿದರು ಕಾಣಿಸಿಕೊಂಡಿದ್ದು, ಕನ್ನಡಿಗರ ಸಹ ನಟಿಸಿದ್ದಾರೆ. ಇದು ಅಟ್ಲಿ ನಿರ್ದೇಶನದ ಮೊದಲ ಬಾಲಿವುಡ್‌ ಚಿತ್ರ. ಬ್ಲಾಕ್‌ ಬಸ್ಟರ್‌ ‘ಪಠಾನ್‌’ ನಂತರ ಶಾರುಖ್‌ ಅವರ ಈ ವರ್ಷದ ಎರಡನೇ ಆಕ್ಷನ್‌ ಥ್ರಿಲ್ಲರ್‌ ಚಿತ್ರವಿದು. ದೀಪಿಕಾ ಪಡುಕೋಣೆ, ವಿಜಯ್‌ ಸೇತುಪತಿ, ಪ್ರಿಯಾಮಣಿ, ಸಂಜಯ್‌ ದತ್‌ ಇತರೆ ಪ್ರಮುಖ ಕಲಾವಿದರು. ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಗೌರಿ ಖಾನ್‌ ಮತ್ತು ಗೌರವ್ ವರ್ಮಾ ಸಿನಿಮಾ ನಿರ್ಮಿಸುತ್ತಿದ್ದಾರೆ. ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮೂಲ ಹಿಂದಿ ಸೇರಿದಂತೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸೆಪ್ಟೆಂಬರ್‌ 7ರಂದು ಸಿನಿಮಾ ತೆರೆಕಾಣಲಿದೆ.

Previous articleಕರಣ್‌ ಜೋಹರ್‌ಗೆ IFFM ಗೌರವ | ನಿರ್ಮಾಪಕನ ವೃತ್ತಿ ಬದುಕಿಗೆ ಬೆಳ್ಳಿಮಹೋತ್ಸವದ ಸಂಭ್ರಮ
Next articleಮಹೇಶ್‌ ಬಾಬು ಪುತ್ರಿ ಸಿತಾರ ಜಾಹೀರಾತು | ‘Barbie’ ಎಂದ ನಟನ ಅಭಿಮಾನಿಗಳು

LEAVE A REPLY

Connect with

Please enter your comment!
Please enter your name here