ನಿನ್ನೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ‘ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2022’ ಸಮಾರಂಭದಲ್ಲಿ ‘ACT 1978’ ಚಿತ್ರ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಜೀವಮಾನ ಸಾಧನೆಯ ಗೌರವ ಸಂದಿದ್ದು, ದಕ್ಷಿಣ ಭಾರತ ಸಿನಿಮಾರಂಗಗಳ ಕಲಾವಿದರು ಹಾಗೂ ತಂತ್ರಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನಲ್ಲಿ ನಿನ್ನೆ 67ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ (ದಕ್ಷಿಣ ಭಾರತ) ಅದ್ಧೂರಿಯಾಗಿ ನಡೆದಿದೆ. ದಕ್ಷಿಣ ಭಾರತ ಸಿನಿಮಾರಂಗದ ಕಲಾವಿದರು ಹಾಗೂ ತಂತ್ರಜ್ಞರು ಗೌರವಕ್ಕೆ ಪಾತ್ರರಾಗಿದ್ದಾರೆ. ಶ್ರೇಷ್ಠ ನಟನೆ, ನಿರ್ದೇಶನ, ಬರವಣಿಗೆ, ತಾಂತ್ರಿಕ ವಿಭಾಗಗಳಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಪ್ರಶಸ್ತಿಗಳು ಸಂದಿವೆ. ನಟರಾದ ರಮೇಶ್ ಅರವಿಂದ್ ಮತ್ತು ದಿಗಂತ್ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಕೃತಿ ಶೆಟ್ಟಿ, ಸಾನಿಯಾ ಅಯ್ಯಪ್ಪನ್, ಐಂದ್ರಿತಾ ರೇ ತಮ್ಮ ಡ್ಯಾನ್ಸ್ ಮೂಲಕ ಸಮಾರಂಭದ ಗ್ಲ್ಯಾಮರ್ ಹೆಚ್ಚಿಸಿದರು.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ..
ಕನ್ನಡ
ಅತ್ಯುತ್ತಮ ನಟ – ಧನಂಜಯ (ಬಡವ ರಾಸ್ಕಲ್)
ಅತ್ಯುತ್ತಮ ನಟಿ – ಯಜ್ಞಾ ಶೆಟ್ಟಿ (ACT 1978)
ಅತ್ಯುತ್ತಮ ಸಿನಿಮಾ – ACT 1978
ಅತ್ಯುತ್ತಮ ನಿರ್ದೇಶನ – ರಾಜ್ ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಅತ್ಯುತ್ತಮ ಪೋಷಕ ನಟ – ಬಿ.ಸುರೇಶ (ACT 1978)
ಅತ್ಯುತ್ತಮ ಪೋಷಕ ನಟಿ – ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ – ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಗೀತಸಾಹಿತ್ಯ – ಜಯಂತ ಕಾಯ್ಕಿಣಿ (ತೇಲದು ಮುಗಿಲು, ACT 1978)
ಅತ್ಯುತ್ತಮ ಗಾಯಕ – ರಘು ದೀಕ್ಷಿತ್ (ಮಳೆಯೇ ಮಳೆಯೇ ಮಳೆಯೇ, ನಿನ್ನ ಸನಿಹಕೆ)
ಅತ್ಯುತ್ತಮ ಗಾಯಕಿ – ಅನುರಾಧಾ ಭಟ್ (ಧೀರ ಸಮ್ಮೋಹಗಾರ, ಬಿಚ್ಚುಗತ್ತಿ)
ಅತ್ಯುತ್ತಮ ಛಾಯಾಗ್ರಾಹಕ – ಶ್ರೀಶ ಕೂಡುವಳ್ಳಿ (ರತ್ನನ್ ಪ್ರಪಂಚ)
ಅತ್ಯುತ್ತಮ ನೃತ್ಯ ಸಂಯೋಜನೆ – ಜಾನಿ ಮಾಸ್ಟರ್ (ಫೀಲ್ ದಿ ಪವರ್, ಯುವರತ್ನ)
ಅತ್ಯುತ್ತಮ ಪದಾರ್ಪಣೆ ನಟಿ – ಧನ್ಯ ರಾಮಕುಮಾರ್ (ನಿನ್ನ ಸನಿಹಕೆ)
ಜೀವಮಾನ ಸಾಧನೆ ಪ್ರಶಸ್ತಿ – ಪುನೀತ್ ರಾಜಕುಮಾರ್
ತೆಲುಗು
ಅತ್ಯುತ್ತಮ ನಟ – ಅಲ್ಲು ಅರ್ಜುನ್ (ಪುಷ್ಪ)
ಅತ್ಯುತ್ತಮ ನಟಿ – ಸಾಯಿ ಪಲ್ಲವಿ (ಲವ್ ಸ್ಟೋರಿ)
ಅತ್ಯುತ್ತಮ ಸಿನಿಮಾ – ಪುಷ್ಪ
ಅತ್ಯುತ್ತಮ ನಿರ್ದೇಶನ – ಸುಕುಮಾರ್ (ಪುಷ್ಪ)
ಅತ್ಯುತ್ತಮ ಪೋಷಕ ನಟ – ಮುರಳಿ ಶರ್ಮ (ಅಲಾ ವೈಕುಂಠಪುರಮುಲೊ)
ಅತ್ಯುತ್ತಮ ಪೋಷಕ ನಟಿ – ತಬು (ಅಲಾ ವೈಕುಂಠಪುರಮುಲೊ)
ಅತ್ಯುತ್ತಮ ಗೀತಸಾಹಿತ್ಯ – ಸೀತಾರಾಂ ಶಾಸ್ತ್ರಿ (ಲೈಫ್ ಆಫ್ ರಾಮ್, ಜಾನು)
ಅತ್ಯುತ್ತಮ ಗಾಯಕ – ಸಿದ್ ಶ್ರೀರಾಮ್ (ಶ್ರೀವಲ್ಲಿ, ಪುಷ್ಪ)
ಅತ್ಯುತ್ತಮ ಗಾಯಕಿ – ಇಂದ್ರಾವತಿ ಚೌವ್ಹಾಣ್ (ಊ ಅಂಟಾವಾ, ಪುಷ್ಪ)
ಅತ್ಯುತ್ತಮ ಛಾಯಾಗ್ರಾಹಕ – MIROSLAW KUBA BROZEK (ಪುಷ್ಪ)
ಅತ್ಯುತ್ತಮ ನೃತ್ಯ ಸಂಯೋಜನೆ – ಶೇಖರ್ ಮಾಸ್ಟರ್ (ರಾಮುಲೊ ರಾಮುಲಾ, ಅಲಾ ವೈಕುಂಠಪುರಮುಲೊ)
ಅತ್ಯುತ್ತಮ ಪದಾರ್ಪಣೆ ನಟ – ಪಂಜಾ ವೈಷ್ಣವ್ ತೇಜ್ (ಉಪ್ಪೆನಾ)
ಅತ್ಯುತ್ತಮ ಪದಾರ್ಪಣೆ ನಟಿ – ಕೃತಿ ಶೆಟ್ಟಿ (ಉಪ್ಪೆನಾ)
ಜೀವಮಾನ ಸಾಧನೆ ಪುರಸ್ಕಾರ – ಅಲ್ಲು ಅರವಿಂದ್
ತಮಿಳು
ಅತ್ಯುತ್ತಮ ನಟ – ಸೂರ್ಯ (ಸೂರರೈ ಪೋಟ್ರು)
ಅತ್ಯುತ್ತಮ ನಟಿ – ಲಿಜಮೋಲ್ ಜೋಸ್ (ಜೈಭೀಮ್)
ಅತ್ಯುತ್ತಮ ಸಿನಿಮಾ – ಜೈಭೀಮ್
ಅತ್ಯುತ್ತಮ ನಿರ್ದೇಶನ – ಸುಧಾ ಕೊಂಗರಾ (ಸೂರರೈ ಪೋಟ್ರು)
ಅತ್ಯುತ್ತಮ ಪೋಷಕ ನಟ – ಪಶುಪತಿ (ಸರ್ಪಟ್ಟ ಪರಾಂಬರೈ)
ಅತ್ಯುತ್ತಮ ಪೋಷಕ ನಟಿ – ಊರ್ವಶಿ (ಸೂರರೈ ಪೋಟ್ರು)
ಅತ್ಯುತ್ತಮ ಗಾಯಕ – ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ್ ವಸಂತ (ಆಗಸಂ, ಸೂರರೈ ಪೋಟ್ರು)
ಅತ್ಯುತ್ತಮ ಗಾಯಕಿ – ಧೀ (ಕಾಟ್ಟು ಪಯಲೇ, ಸೂರರೈ ಪೋಟ್ರು)
ಅತ್ಯುತ್ತಮ ಛಾಯಾಗ್ರಾಹಕ – ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೋಟ್ರು)
ಅತ್ಯುತ್ತಮ ನೃತ್ಯ ಸಂಯೋಜನೆ – ದಿನೇಶ್ ಕುಮಾರ್ (ವಾಥಿ ಕಮಿಂಗ್, ಮಾಸ್ಟರ್)
ಮಲಯಾಳಂ
ಅತ್ಯುತ್ತಮ ನಟ – ಬಿಜು ಮೆನನ್ (ಅಯ್ಯಪ್ಪನಮ್ ಕೋಶಿಯಮ್)
ಅತ್ಯುತ್ತಮ ನಟಿ – ನಿಮಿಷಾ ಸಜಯನ್ (ದಿ ಗ್ರೇಟ್ ಇಂಡಿಯನ್ ಕಿಚನ್)
ಅತ್ಯುತ್ತಮ ಸಿನಿಮಾ – ಅಯ್ಯಪ್ಪನಮ್ ಕೋಶಿಯಮ್
ಅತ್ಯುತ್ತಮ ನಿರ್ದೇಶನ – ಸೆನ್ನಾ ಹೆಗ್ಡೆ (Thinkalazhcha Nishchayam)
ಅತ್ಯುತ್ತಮ ಪೋಷಕ ನಟ – ಜೋಜು ಜಾರ್ಜ್ (ನಾಯಟ್ಟು)
ಅತ್ಯುತ್ತಮ ಪೋಷಕ ನಟಿ – ಗೌರಿ ನಂದಾ (ಅಯ್ಯಪ್ಪಮ್ ಕೋಶಿಯಮ್)
ಅತ್ಯುತ್ತಮ ಸಂಗೀತ – ಎಂ.ಜಯಚಂದ್ರನ್ (ಸೂಫಿಯಂ ಸುಜಾತಯಂ)
ಅತ್ಯುತ್ತಮ ಗೀತಸಾಹಿತ್ಯ – ರಫೀಕ್ ಅಹ್ಮದ್ (ಅರಿಯಥರಿಯಥೆ, ಅಯ್ಯಪ್ಪಮ್ ಕೋಶಿಯಮ್)
ಅತ್ಯುತ್ತಮ ಗಾಯಕ – ಶಹಬಾಜ್ ಅಮಾನ್ (ಆಕಾಶಮಾಯವಾಲೆ, ವೆಲ್ಲಂ)
ಅತ್ಯುತ್ತಮ ಗಾಯಕಿ – ಕೆ.ಎಸ್.ಚಿತ್ರಾ (ಧೀರಮೆ, ಮಾಲಿಕ್)