ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’, ವಿಜಯ ರಾಘವೇಂದ್ರ ಅವರ ‘ಮರೀಚಿ’, ವೆಂಕಟೇಶ್ ಅಭಿನಯದ 75ನೇ ತೆಲುಗು ಸಿನಿಮಾ ‘ಸೈಂಧವ’ ಸೇರಿದಂತೆ ಹಲವು ಸಿನಿಮಾಗಳು ಈಗಾಗಲೇ ಸ್ಟ್ರೀಮಿಂಗ್ ಆರಂಭಿಸಿವೆ. ಹಲವು ಇಂಗ್ಲಿಷ್ ಸರಣಿ ಮತ್ತು ಸಿನಿಮಾಗಳು ಇಂದಿನಿಂದ (ಫೆಬ್ರವರಿ 2) ಸ್ಟ್ರೀಮಿಂಗ್ ಆರಂಭಿಸಿವೆ.
ಗರಡಿ | ಕನ್ನಡ | ಸಿನಿಮಾ | ಚಿತ್ರದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸಿದ್ದು, ಸೋನಲ್ ಮೊಂತೇರೊ, ಧರ್ಮಣ್ಣ ಕಡೂರು, ಸುಜಯ್ ಬೇಲೂರು, ಪೃಥ್ವಿ ಶಾಮನೂರು, ರಘು ಹೊಂಡದಕೇರಿ, ಚೆಲುವರಾಜ್, ಬಾಲ ರಾಜವಾಡಿ, ತೇಜಸ್ವಿನಿ ಪ್ರಕಾಶ್, ನಯನಾ ಶರತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಮನರಂಜನೆಯೊಂದಿಗೆ ಸಾಹಸ, ಕನ್ನಡ ನಾಡಿನ ನೆಲದ ಸೊಗಡು, ಕೌತುಕದ ಕಥೆಯೂ ಇದೆ. ಹಾಗೂ ಒಂದು ಪ್ರೇಮಕಥೆಯೂ ಇದೆ. ‘ಒಂದು ಕಾಲದಲ್ಲಿ ಗರಡಿ ಮನೆಯನ್ನು ಪೊಲೀಸ್ ಸ್ಟೇಷನ್ ಅನ್ನುತ್ತಿದ್ದರು. ಗರಡಿ ಊರು ಕಾಯುತ್ತಿತ್ತು’ ಎಂದು ಬಿ ಸಿ ಪಾಟೀಲ್ ಹೇಳುವುದನ್ನು ಕಾಣಬಹುದು. ಗರಡಿ ಮನೆಯೊಳಗಿನ ಕುಸ್ತಿಯೇ ಪ್ರಮುಖ ಕಥಾವಸ್ತುವಾಗಿ ಮೂಡಿಬಂದಿದೆ. ರವಿಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. Sowmya Films ಮತ್ತು Kourava Production House ಬ್ಯಾನರ್‌ನಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಬಿ ಸಿ ಪಾಟೀಲ್ ಮತ್ತು ರವಿಶಂಕರ್ ನಟಿಸಿದ್ದಾರೆ. ಜನವರಿ 31ರಿಂದ Prime Videoದಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತಿದೆ.
ಮರೀಚಿ | ಕನ್ನಡ | ಸಿನಿಮಾ | ವಿಜಯ ರಾಘವೇಂದ್ರ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಸ್ಪೆನ್ಸ್-ಥ್ರಿಲ್ಲರ್ ಚಲನಚಿತ್ರ. ಸಿದ್ಧ್ರುವ್ ನಿರ್ದೇಶನದ ಸಿನಿಮಾ ಡಿಸೆಂಬರ್ 8, 2023ರಂದು ತೆರೆಕಂಡಿತ್ತು. ವಿಜಯ ರಾಘವೇಂದ್ರ ಪೊಲೀಸ್ ಆಫೀಸರ್ ಭೈರವ ನಾಯ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತನಿಖೆ, ಕೊಲೆಯಂತಹ ಅಂಶಗಳನ್ನು ತೋರಿಸಲಾಗಿದೆ. ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿರುವ ಸಿನಿಮಾ ಸದ್ಯ Prime Videoದಲ್ಲಿ ಸ್ಟ್ರೀಮ್ ಆಗುತ್ತಿದೆ.
ಸೈಂಧವ | ತೆಲುಗು | ಸಿನಿಮಾ | ವೆಂಕಟೇಶ್ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ಈ ಚಿತ್ರವನ್ನು ಸೈಲೇಶ್ ಕೋಲನು ಬರೆದು ನಿರ್ದೇಶಿಸಿದ್ದಾರೆ. ಚಿತ್ರ, ಅನಾರೋಗ್ಯಕ್ಕೆ ತುತ್ತಾದ ಮಗಳನ್ನು ಉಳಿಸಲು ಸೆಣೆಸಾಡುವ ಅಪ್ಪನ ಕತೆ ಹೇಳುತ್ತದೆ. ತನ್ನ ಮಗಳನ್ನು ಉಳಿಸಿಕೊಳ್ಳಲು ಹೋರಾಡುವ ವೆಂಕಟೇಶ್ ಆಕೆಯ ವೈದ್ಯಕೀಯ ವೆಚ್ಚಕ್ಕೆ ರೂ 17 ಕೋಟಿ ರೂ.ಗಳ ಅವಶ್ಯಕತೆ ಇರುವುದನ್ನು ತಿಳಿದಾಗ ಹಣವನ್ನು ಹೊಂದಿಸಲು ಹರ ಸಾಹಸ ಪಡುವುದನ್ನು ಈ ಚಿತ್ರ ಒಳಗೊಂಡಿದೆ. ಚಿತ್ರ ಜನವರಿ 31ರಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರದಲ್ಲಿ ರುಹಾನಿ ಶರ್ಮಾ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಆರ್ಯ, ಆಂಡ್ರಿಯಾ ಜೆರೆಮಿಯಾ, ಜಿಶು ಸೆಂಗುಪ್ತಾ ಮತ್ತು ಮುಖೇಶ್ ರಿಷಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಖಳಪಾತ್ರದಲ್ಲಿ ನಟಿಸಿದ್ದು, ಇದು ಅವರ ಮೊದಲ ತೆಲುಗು ಸಿನಿಮಾ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿ ಅವರ ಸಂಕಲನವಿದೆ. ಸಿನಿಮಾ ಜನವರಿ 13ರಂದು ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿತ್ತು.
ಪಿಂಡಮ್ | ತೆಲುಗು | ಸಿನಿಮಾ | ‘ರೋಜಾ ಪೂಲು’, ‘ಒಕರಿಕಿ ಒಕರು’ ಸಿನಿಮಾ ಖ್ಯಾತಿಯ ಶ್ರೀರಾಮ್ ಮತ್ತು ಕನ್ನಡತಿ ಖುಷಿ ರವಿ (ದಿಯಾ) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ. ಈಶ್ವರಿ ರಾವ್ ಮತ್ತು ಶ್ರೀನಿವಾಸ್ ಅವಸರಾಳ ಒಂದು ಪಾಳು ಮನೆಯನ್ನು ಖರೀದಿಸುತ್ತಾರೆ. ಆ ಪಾಳು ಮನೆಗೆ ವಾಸಿಸಲೆಂದು ಬರುವ ಒಂದು ಮಧ್ಯಮ ಕುಟುಂಬದ ದಂಪತಿಯ ಮಗುವಿನ ದೇಹದೊಳಗೆ ಒಂದು ಆತ್ಮ ಬಂದು ಸೇರಿಕೊಳ್ಳುತ್ತದೆ. ಇದರಿಂದ ಅವರು ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಚಲನಚಿತ್ರವನ್ನು Kalaahi Media ಬ್ಯಾನರ್ ಅಡಿಯಲ್ಲಿ ಯಶವಂತ ದಗ್ಗುಮಟಿ ನಿರ್ಮಿಸಿದ್ದಾರೆ. ಸಾಯಿಕಿರಣ್ ದೈದಾ, ಕವಿ ಸಿದ್ಧಾರ್ಥ ಮತ್ತು ಟೋಬಿ ಓಸ್ಬೋರ್ನ್ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ರವಿವರ್ಮ, ಮಾಣಿಕ್ ರೆಡ್ಡಿ, ಬೇಬಿ ಚೈತ್ರ, ಬೇಬಿ ಈಶಾ, ವಿಜಯಲಕ್ಷ್ಮಿ ಮತ್ತು ಶ್ರೀಲತಾ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೃಷ್ಣ ಸೌರಭ್ ಸೂರಂಪಳ್ಳಿ ಸಂಗೀತ ಸಂಯೋಜಿಸಿದ್ದು, ಸತೀಶ್ ಮನೋಹರನ್ ಛಾಯಾಗ್ರಹಣ ಮತ್ತು ಸಿರೀಶ್ ಪ್ರಸಾದ್ ಸಂಕಲನ ನಿರ್ವಹಿಸಿದ್ದಾರೆ. ಸಿನಿಮಾ Ahaದಲ್ಲಿ ಇಂದಿನಿಂದ (ಫೆಬ್ರುವರಿ 2) ಸ್ಟ್ರೀಮಿಂಗ್ ಆರಂಭಿಸಿದೆ.
ಮಿಸ್ ಪರ್ಫೆಕ್ಟ್ | ತೆಲುಗು | ಸರಣಿ | ಸದಾ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಲಾವಣ್ಯ ತೃಪ್ತಿ ಉದ್ಯೋಗಕ್ಕಾಗಿ ನಗರವೊಂದಕ್ಕೆ ಆಗಮಿಸುತ್ತಾಳೆ. ಅವಳ ಸಹೋದ್ಯೋಗಿಯೊಬ್ಬನು ಅವಳ ಪಕ್ಕದ ಪ್ಲಾಟ್‌ನಲ್ಲೇ ವಾಸವಿರುತ್ತಾನೆ. ಅವನು ಸ್ವಚ್ಚತೆಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಲಾವಣ್ಯ ತಾಯಿ ಅವನ ಮೇಲೆ ಒಂದು ಕಣ್ಣಿಟ್ಟಿರುವಂತೆ ಹೇಳಿರುತ್ತಾಳೆ. ಅವನು ಲಾವಣ್ಯಳೊಟ್ಟಿಗೆ ಸೇರಿ ಸ್ವಚ್ಚತೆಯನ್ನು ಕಲಿಯುತ್ತಾನೆ. ಸರಣಿಯಲ್ಲಿ ಲಾವಣ್ಯ ತ್ರಿಪಾಠಿ, ಅಭಿಜಿತ್ ದದ್ದಾಳ, ಅಭಿಜ್ಞ ವೂತಲೂರು, ಝಾನ್ಸಿ, ಹರ್ಷ ವರ್ಧನ್, ಮಹೇಶ ವಿಟ್ಟಾ ಮತ್ತು ಹರ್ಷ ರೋಶನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸರಣಿ Hotstarನಲ್ಲಿ ಇಂದಿನಿಂದ (ಫೆಬ್ರವರಿ 2ರಿಂದ) ಸ್ಟ್ರೀಮಿಂಗ್ ಆರಂಭಿಸಿದೆ.
ಓ ಮೈ ಡಾರ್ಲಿಂಗ್ | ಸಿನಿಮಾ | ಮಲಯಾಳಂ | ಅನಿಖಾ ಸುರೇಂದ್ರನ್ ಮತ್ತು ಮೆಲ್ವಿನ್ ಜಿ ಬಾಬು ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ. ಜೋಯಿಲ್ ಎಂಬವವ ಅಮೇರಿಕಾ ಮೂಲದ ಸಾಪ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಅವಳಿನ್ನೂ ಮೈನರ್ ಆಗಿರುವುದರಿಂದ ಅವರ ತಂದೆ ತಾಯಿಯ ಬಳಿ ತಮ್ಮ ವಿಷಯವನ್ನೆಲ್ಲಾ ತಿಳಿಸಿ ತಮ್ಮ ಪ್ರೀತಿಯನ್ನು ಮುಂದುವರೆಸುತ್ತಾರೆ. ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವನ್ನು ಆಲ್ಫ್ರೆಡ್ ಡಿ ಸ್ಯಾಮ್ಯುಯೆಲ್ ನಿರ್ದೇಶಿಸಿದ್ದಾರೆ. Ash Tree Ventures ಬ್ಯಾನರ್ ಅಡಿಯಲ್ಲಿ ಮನೋಜ್ ಶ್ರೀಕಾಂತ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಾನಿ ಆಂಟೋನಿ, ಮಂಜು ಪಿಳ್ಳೈ, ವಿಜಯರಾಘವನ್, ನಂದು ಮತ್ತು ಅರ್ಚನಾ ಮೆನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇಂದಿನಿಂದ (ಫೆಬುವರಿ 2) Netflixನಲ್ಲಿ ಸ್ಟ್ರಿಮಿಂಗ್ ಆರಂಭಿಸಿದೆ.
ಆರ್ಯ – Season 3 | ಹಿಂದಿ | ಸರಣಿ | ರಷ್ಯಾದ ಮಾಫಿಯಾದೊಂದಿಗೆ ಯೋಜನೆಯನ್ನು ರೂಪಿಸುವ ಆರ್ಯಾಳ ಕಂಪನಿಯ ಸದಸ್ಯರು ಇದರ ವಿರುದ್ದ ಹೋದ ಅವಳ ಗಂಡನನ್ನು ಕೊಲ್ಲುತ್ತಾರೆ. ನಂತರ ಆರ್ಯ ತನ್ನ ಪಾರ್ಮಾ ಕಂಪನಿಯ ವ್ಯಾಪಾರದಲ್ಲಿ ಹೊಸ ವಿರೋಧಿಗಳಿಂದ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಇದರಿಂದ ಅವಳ ಜೀವನವೇ ಬದಲಾಯಿಸುವ ಕೆಲವು ಘಟನೆಗಳು ನಡೆಯುತ್ತವೆ. ಸರಣಿಯಲ್ಲಿ ಸುಶ್ಮಿತಾ ಸೇನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಮ್ ಮಾಧವನಿ ನಿರ್ದೇಶಿಸಿದ್ದಾರೆ. ಸರಣಿ ಫೆಬ್ರುವರಿ 9ರಿಂದ Hotstar ನಲ್ಲಿ ಸ್ಟ್ರೀಮ್ ಆಗಲಿದೆ.
Mr & Mrs Smith | ಇಂಗ್ಲಿಷ್ | ಸರಣಿ | ಇದೊಂದು ಅಮೇರಿಕನ್ ಸ್ಪೈ ಹಾಸ್ಯ ಸರಣಿಯಾಗಿದ್ದು, ವಿವಾಹಿತ ದಂಪತಿ, ಬಾಡಿಗೆ ಹಂತಕರಾಗಿ ಏಜನ್ಸಿಯೊಂದರಿಂದ ನೇಮಿಸಲ್ಪಡುತ್ತಾರೆ. ಏಜೆನ್ಸಿ ಆದೇಶದಂತೆ ಸರಣಿ ಕೊಲೆಗಳನ್ನು ಮಾಡುತ್ತಾ ಹೋಗುತ್ತಾರೆ. ಇಂದಿನಿಂದ (ಫೆಬ್ರವರಿ 2) ಸ್ಟ್ರೀಮಿಂಗ್ ಆರಂಭಿಸಿರುವ ಸರಣಿ ‘Mr & Mrs ಸ್ಮಿತ್’ 2005ರ ಚಲನಚಿತ್ರವನ್ನು ಆಧರಿಸಿದೆ. ಸರಣಿಯನ್ನು ಫ್ರಾನ್ಸೆಸ್ಕಾ ಸ್ಲೋನೆ ಮತ್ತು ಡೊನಾಲ್ಡ್ ಗ್ಲೋವರ್ ರಚಿಸಿದ್ದಾರೆ. ಗ್ಲೋವರ್ ಮತ್ತು ಮಾಯಾ ಎರ್ಸ್ಕಿನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
The Greatest Night in Pop | ಇಂಗ್ಲಿಷ್ ಕಿರುಚಿತ್ರ | 1985ರ ಜನವರಿ ರಾತ್ರಿಯೊಂದರಲ್ಲಿ ಸಂಗೀತದ ದೊಡ್ಡ ತಾರೆಗಳು ‘ವಿ ಆರ್ ದಿ ವರ್ಲ್ಡ್’ ಆಲ್ಬಮ್ ಅನ್ನು ರೆಕಾರ್ಡ್ ಮಾಡಲು ಸೇರುತ್ತಾರೆ. ಎಲ್ಲಾ ಕಲಾವಿದರು ಸಂಗೀತದ ದಾಖಲೆಯನ್ನು ನಿರ್ಮಿಸಲು ಒಟ್ಟುಗೂಡಿದ್ದ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವ ಕಿರು ಸರಣಿ ಇದಾಗಿದೆ. ಸರಣಿಯನ್ನು Bao Nguyen ನಿರ್ದೇಶಿಸಿದ್ದಾರೆ. ಸರಣಿಯಲ್ಲಿ ಲಿಯೋನೆಲ್ ರಿಚಿ, ಬ್ರೂಸ್ ಸ್ಪ್ರಿಂಗ್‌ಸ್ಟೀನ್, ಸಿಂಡಿ ಲಾಪರ್, ಡಿಯೋನ್ನೆ ವಾರ್ವಿಕ್, ಸ್ಮೋಕಿ ರಾಬಿನ್ಸನ್, ಕೆನ್ನಿ ಲಾಗಿನ್ಸ್ ಮತ್ತು ಹ್ಯೂ ಲೆವಿಸ್ ನಟಿಸಿದ್ದಾರೆ. ಜನವರಿ 29ರಿಂದ Hotstarನಲ್ಲಿ ಕಿರುಚಿತ್ರ ಸ್ಟ್ರೀಮಿಂಗ್ ಆರಂಭಿಸಿದೆ.
Baby Bandito | ಇಂಗ್ಲೀಷ್ – ಫ್ರೆಂಚ್ ಸರಣಿ | ‘ಬೇಬಿ ಬ್ಯಾಂಡಿಟೊ’ ಒಂದು ರೋಮಾಂಚನ ಸರಣಿಯಾಗಿದ್ದು, ಸ್ಕೇಟರ್ ಕೆವಿನ್ ತಾಪಿಯಾ ಕಥೆಯನ್ನು ಹೇಳುತ್ತದೆ. ಅವನು ದರೋಡೆಕೋರನಾಗಿ ಸಿಕ್ಕಿಬಿದ್ದು, ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದು ಪ್ರೀತಿಯಲ್ಲಿ ಬೀಳುತ್ತಾನೆ. ನಂತರದ ಅವರ ಬದುಕಿನ ಕತೆಯಿದು. ಸರಣಿ ಜನವರಿ 31ರಿಂದ Netflix ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸರಣಿಯನ್ನು ಜೂಲಿಯೊ ಜಾರ್ಕ್ವೆರಾ ನಿರ್ದೇಶಿಸಿದ್ದು, ಮಾರಿಯೋ ಹಾರ್ಟನ್, ಮಾರ್ಸೆಲೊ ಅಲೋನ್ಸೊ ಮತ್ತು ಅಂಪಾರೊ ನೊಗುರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Nascar Full Speed | ಇಂಗ್ಲೀಷ್ ಸರಣಿ | ಇದೊಂದು ಕ್ರೀಡಾ ಸರಣಿಯಾಗಿದ್ದು, 2023 ರ NASCAR ಕಪ್ ಸರಣಿಯ ಪ್ಲೇ ಆಫ್‌ಗಳು ಮತ್ತು ಚಾಂಪಿಯನ್‌ಶಿಪ್ ಓಟವನ್ನು ಸೆರೆಹಿಡಿದಿದೆ. ಕಾರ್ ರೇಸರ್ ಒಬ್ಬನ ಕುರಿತಾಗಿ ಈ ಸರಣಿ ಹೇಳಲಿದೆ. ಕಾರು ರೇಸಿನಲ್ಲಿ ಅವನು ಎದುರಿಸುವ ತೊಂದರೆ ಮತ್ತು ಕುಟುಂಬವನ್ನು ನಿರ್ವಹಿಸುವ ಪರಿಯನ್ನು ಇದರಲ್ಲಿ ತೋರಿಸಲಾಗಿದೆ. ತನ್ನ ಜೀವವನ್ನೇ ಒತ್ತೆಯಾಗಿಟ್ಟು ಕಾರು ರೇಸಿಗೆ ಇಳಿದು ಸ್ಪರ್ಧೆಯಲ್ಲಿ ಗೆಲ್ಲುವ ರೋಮಾಂಚನಕಾರಿ ದೃಶ್ಯಗಳನ್ನು ಈ ಸರಣಿ ಒಳಗೊಂಡಿದೆ. ಇದು ಜನವರಿ 30ರಿಂದ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ. ಸರಣಿಯಲ್ಲಿ ರಿಯಾನ್ ಬ್ಲೇನಿ, ವಿಲಿಯಂ ಬೈರಾನ್, ರಾಸ್ ಚಾಸ್ಟೇನ್, ಡೆನ್ನಿ ಹ್ಯಾಮ್ಲಿನ್, ಬುಬ್ಬಾ ವ್ಯಾಲೇಸ್, ಕೈಲ್ ಲಾರ್ಸನ್, ಕ್ರಿಸ್ಟೋಫರ್ ಬೆಲ್, ಜೋಯ್ ಲೋಗಾನೊ ಮತ್ತು ಟೈಲರ್ ರೆಡ್ಡಿಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Alexander: The Making of a God | ಇಂಗ್ಲಿಷ್ | ಸರಣಿ | ‘ಅಲೆಕ್ಸಾಂಡರ್: ದಿ ಮೇಕಿಂಗ್ ಆಫ್ ಎ ಗಾಡ್’ ಆರು ಭಾಗಗಳ ಡಾಕ್ಯು ಡ್ರಾಮಾ ಸರಣಿಯಾಗಿದ್ದು, ಇದು ಅಲೆಕ್ಸಾಂಡರ್ ದಿ ಗ್ರೇಟ್‌ನ ಜೀವನವನ್ನು ಹೇಳಲಿದೆ. ಕೇವಲ ಆರು ವರ್ಷದವನಿದ್ದಾಗಲೇ ಜಗತ್ತನ್ನು ವಶಪಡಿಸಿಕೊಳ್ಳಲು ಯೋಜನೆ ರೂಪಿಸುವ ಪ್ರಬಲ ಪರ್ಷಿಯನ್ ಚಕ್ರವರ್ತಿ ಡೇರಿಯಸ್ ಕಥೆಯನ್ನು ಈ ಸರಣಿ ಹೇಳಲಿದೆ. ಸರಣಿಯು ಜನವರಿ 31ರಿಂದ Netflixನಲ್ಲಿ ಸ್ಟೀಮಿಂಗ್ ಆರಂಭಿಸಿದೆ. ಸರಣಿಯಲ್ಲಿ ಬಕ್ ಬ್ರೈತ್‌ವೈಟ್, ಅಲೆಕ್ಸಾಂಡರ್ ಆಗಿ ಮಿಡೋ ಹಮದಾ, ಕಿಂಗ್ ಡೇರಿಯಸ್ ಆಗಿ ಡಿನೋ ಕೆಲ್ಲಿ, ಟಾಲೆಮಿ ಆಗಿ ನಾಡಾ ಎಲ್ ಬೆಲ್ಕಾಸ್ಮಿ, ಬಾರ್ಸಿನ್ ಆಗಿ ಅಲೈನ್ ಅಲಿ ವಾಶ್ನೆವ್ಸ್ಕಿ ಮತ್ತು ಮಜಯಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
The Seven Deadly Sins | ಇಂಗ್ಲಿಷ್ | ಸರಣಿ | ಇದೊಂದು Anime ಸರಣಿಯಾಗಿದ್ದು, ರಾಜಕುಮಾರಿಯೊಬ್ಬಳ ರಾಜ್ಯವನ್ನು ನಿರಂಕುಶಾಧಿಕಾರಿಗಳು ಸ್ವಾಧೀನಪಡಿಸಿಕೊಳ್ಳುತ್ತಾರೆ. ಅಧಿಕಾರ ಕಳೆದುಕೊಂಡ ರಾಜಕುಮಾರಿಯು ತನ್ನ ಸಾಮ್ರಾಜ್ಯವನ್ನು ಮರಳಿ ಪಡೆಯುವ ಸಲುವಾಗಿ ಸಹಾಯ ಪಡೆಯಲು Holy Knight ಸೈನಿಕ ಗುಂಪನ್ನು ಹುಡುಕಲು ಪ್ರಾರಂಭಿಸುತ್ತಾಳೆ. ಸರಣಿಯನ್ನು ಟೆನ್ಸೈ ಒಕಮುರಾ ನಿರ್ದೇಶಿಸಿದ್ದು, ಶೊಟಾರೊ ಸುಗಾ ನಿರ್ಮಿಸಿದ್ದಾರೆ. ಹಿರೋಯುಕಿ ಸಾವನೋ ತಕಫುಮಿ ವಾಡಾ ಸರಣಿಗೆ ಸಂಗೀತ ಸಂಯೋಜಿಸಿದ್ದಾರೆ. ಸರಣಿಯು ಜನವರಿ 31ರಿಂದ Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
After Everything | ಇಂಗ್ಲೀಷ್ | ಸಿನಿಮಾ | ಚಿತ್ರದಲ್ಲಿ ತನ್ನ ಪ್ರೇಯಸಿಯೊಟ್ಟಿಗೆ ಬ್ರೇಕ್ ಅಪ್ ಮಾಡಿಕೊಂಡು ಪೋರ್ಚುಗಲ್ ಪ್ರವಾಸಕ್ಕೆ ತೆರಳುವ ನಾಯಕ ತನ್ನ ಪ್ರವಾಸವನ್ನೆಲ್ಲಾ ಮುಗಿಸಿದ ಮೇಲೆ ಅವಳೊಟ್ಟಿಗೆ ಮತ್ತೆ ಒಂದಾಗಲು ಬಯಸುತ್ತಾನೆ. ಅದರ ಮಧ್ಯದಲ್ಲಿ ಕೆಲವು ಸಮಸ್ಯೆಗಳಿಗೆ ಸಿಲುಕಿ ಜೈಲು ಸೇರುತ್ತಾನೆ. ಸಿನಿಮಾವನ್ನು ಕ್ಯಾಸ್ಟಿಲ್ ಲಂಡನ್ ನಿರ್ದೇಶಿಸಿದ್ದು, Voltage Pictures ವಿತರಿಸಿದೆ. ಈ ಚಿತ್ರ ‘After; by Anna Todd’ ಕಾದಂಬರಿಯ ಪಾತ್ರಗಳನ್ನು ಆಧರಿಸಿದೆ. ಚಿತ್ರದಲ್ಲಿ ಜೋಸೆಫೀನ್ ಲ್ಯಾಂಗ್‌ಫೋರ್ಡ್, ಹೀರೋ ಫಿಯೆನ್ನೆಸ್ ಟಿಫಿನ್, ಮಿಮಿ ಕೀನ್, ಬೆಂಜಮಿನ್ ಮಾಸ್ಕೋಲೊ, ಚಾನ್ಸ್ ಪೆರ್ಡೊಮೊ, ಏರಿಯಲ್ ಕೆಬೆಲ್, ಕಿಯಾನಾ ಮಡೈರಾ, ಸ್ಟೀಫನ್ ಮೋಯರ್, ಕೋರಾ ಕಿರ್ಕ್ ಮತ್ತು ಜೆಸ್ಸಿಕಾ ವೆಬ್ಬರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಫೆಬ್ರವರಿ 1ರಿಂದ Prime Videoದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
Let’s Talk About Chu | ಮ್ಯಾಂಡರಿನ್ ಸರಣಿ | ಛೂ ಕುಟುಂಬದ ವಿವಿಧ ತಲೆಮಾರುಗಳಿಂದ ಬೆಳೆಸಿಕೊಂಡು ಬಂದಿರುವ ಪ್ರೀತಿ ಮತ್ತು ಸಂಬಂಧಗಳ ಕುರಿತಾಗಿ ಸರಣಿ ಹೇಳಲಿದೆ. ಈ ಕಥೆಯು ಹೊಸ ವರ್ಷದ ಮುನ್ನಾ ದಿನದಂದು ಪ್ರಾರಂಭವಾಗುತ್ತದೆ. ಅವರ ಕುಟುಂಬದ ಛೂ ಐ ಎಂಬುವವಳು ‘ಓನ್ಲಿ ಸೆಕ್ಸ್, ನೋ ಲವ್’ ಎಂಬ ಧ್ಯೇಯವಾಕ್ಯದೊಂದಿಗೆ ಲೈಂಗಿಕ ಶಿಕ್ಷಣ ವ್ಲಾಗ್ (Vlog) ನಡೆಸುತ್ತಾಳೆ. ಸರಣಿಯನ್ನು Machi Xcelsior Studios ಮತ್ತು Lucky Sparks Films ಸಹ-ನಿರ್ಮಾಣ ಮಾಡಿವೆ. ರೆಮಿ ಹುವಾಂಗ್ ನಿರ್ದೇಶಿಸಿದ್ದಾರೆ. ಸರಣಿಯಲ್ಲಿ Kimi Hsia, Chan Tzu-hsuan, Ko Chen-tung, JC Lin, Ke-Li Miao, Wu Jian-He ಮತ್ತು Umin Boya ಪ್ರಮುಖ ಪಾತ್ರಗಳಲ್ಲಿದ್ದಾರೆ. ಸರಣಿ ಇಂದಿನಿಂದ (ಫೆಬ್ರವರಿ 2) Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Orion and the Dark | ಇಂಗ್ಲೀಷ್ | ಸರಣಿ | ಇದೊಂದು ಆನಿಮೇಟೆಡ್ ಸಿನಿಮಾವಾಗಿದ್ದು, ಓರಿಯನ್ ಎಂಬ ಬಾಲಕ ಕತ್ತಲೆಗೆ ಹೆಚ್ಚು ಭಯ ಪಡುತ್ತಿರುತ್ತಾನೆ. ಅವನು ಕತ್ತಲೆಯಲ್ಲಿ ಕುಳಿತುಕೊಳ್ಳಲು ಮತ್ತು ಓಡಾಡಲೂ ಸಹ ಅತೀ ಹೆಚ್ಚು ಹೆದರುವುದನ್ನು ಕಾಣಬಹುದು. ಕತ್ತಲೆ ಒಂದು ಭಾರಿ ಭೂತದ ರೂಪದಲ್ಲಿ ಅವನ ಹತ್ತಿರ ಬಂದು ರಾತ್ರಿಯಲ್ಲಿ ಭಯಪಡಲು ಏನೂ ಇಲ್ಲ ಎಂದು ಸಾಬೀತುಪಡಿಸುತ್ತದೆ. ದೈತ್ಯ ರೂಪದಲ್ಲಿರುವ ಕತ್ತಲೆ ಎಂಬ ಭೂತವು ಓರಿಯನ್ ಅನ್ನು ರೋಲರ್-ಕೋಸ್ಟರ್ ರೈಡ್‌ನಲ್ಲಿ ಪ್ರಪಂಚದಾದ್ಯಂತ ಕತ್ತಲೆಯಲ್ಲಿಯೇ ಓಡಾಡಿಸಿ ಅವನ ಭಯವನ್ನು ಹೋಗಲಾಡಿಸುತ್ತದೆ. ಸರಣಿಯನ್ನು ಸೀನ್ ಚಾರ್ಮಾಟ್ಜ್ ನಿರ್ದೇಶಿಸಿದ್ದಾರೆ. ಜಾಕೋಬ್ ಟ್ರೆಂಬ್ಲೇ, ಪಾಲ್ ವಾಲ್ಟರ್ ಹೌಸರ್, ವರ್ನರ್ ಹೆರ್ಜೋಗ್, ಚೆಲ್ಸಿಯಾ ಪೆರೆಟ್ಟಿ ಮತ್ತು ರಾಬ್ ಡೆಲಾನಿ ಪ್ರಮುಖ ಪಾತ್ರಗಳಿಗೆ ದನಿ ನೀಡಿದ್ದಾರೆ. ಸರಣಿಯು ಇಂದಿನಿಂದ (ಫೆಬ್ರವರಿ 2) Netflixನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
Dee & Friends in Oz | ಇಂಗ್ಲೀಷ್ | ಸರಣಿ | ಇದೊಂದು ಆನಿಮೇಟೆಡ್ ಸರಣಿಯಾಗಿದ್ದು, ಒಂದು ನಿಗೂಢ ಕೀಲಿಯೊಂದಿಗೆ ಡೀಳನ್ನು ಕೈ ಓಜ್‌ಳೊಟ್ಟಿಗೆ ಭೂಮಿಗೆ ಕಳುಹಿಸಲಾಗುತ್ತದೆ. ಡೀ ಎಂಬ ಸಾಮಾನ್ಯ ಮಗು ಮ್ಯಾಜಿಕ್ ಅನ್ನು ಉಳಿಸಲು ಮತ್ತು ಕಥೆಯ ನಾಯಕನಾಗಲು ಸಂಗೀತದ ಮೂಲಕ ರಂಜಿಸುತ್ತಾಳೆ. ಇದೊಂದು ಮಕ್ಕಳ ಸರಣಿಯಾಗಿದೆ. ಸರಣಿಯನ್ನು ಕೀಯಾನ್ ಜಾಕ್ಸನ್, ಹ್ಯಾಲಿಕಾನ್ ಪರ್ಸನ್ ಮತ್ತು ಏಂಜೆಲೋ ಸಾಂಟೋಮೇರೋ ರಚಿಸಿದ್ದಾರೆ. ಲಾಚಾಂಜೆಲೈಲಾ, ಕ್ಯಾಪರ್ಸ್ ಸಿದ್ ಮತ್ತು ಕಾಮತ್ ಸರಣಿಗೆ ದನಿ ನೀಡಿದ್ದಾರೆ. ಸರಣಿ ಫೆಬ್ರವರಿ 5ರಿಂದ Netflixನಲ್ಲಿ ಸ್ಟ್ರೀಮ್ ಆಗಲಿದೆ.