ಸೂಪರ್‌ಹಿಟ್‌ ‘RX 100’ ತೆಲುಗು ಸಿನಿಮಾ ಖ್ಯಾತಿಯ ನಿರ್ದೇಶಕ ಅಜಯ್‌ ಭೂಪತಿ ಅವರ ‘ಮಂಗಳವಾರಂ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಭಯಾನಕ ದೃಶ್ಯಗಳಿರುವ ಟೀಸರ್‌ ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

‘RX 100’ ಚಿತ್ರದ ನಿರ್ದೇಶಕ ಅಜಯ್ ಭೂಪತಿ ಅವರ ‘ಮಂಗಳವಾರಂ’ PAN ಇಂಡಿಯಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಟಿ ಪಾಯಲ್ ರಜಪೂತ್ ಮುಖ್ಯ ಭೂಮಿಕೆಯಲ್ಲಿದ್ದು, ಟೀಸರ್‌ನಲ್ಲಿನ ಹಳ್ಳಿಗಾಡಿನ ಹಿನ್ನೆಲೆಯ ದೃಶ್ಯಗಳು ಭಯಾನಕವಾಗಿವೆ. ಹಳ್ಳಿಯ ಜನರು ಭಯದಿಂದ ಒಂದೆಡೆ ನೋಡುತ್ತಿರುವ ದೃಶ್ಯದಿಂದ ಆರಂಭವಾಗುತ್ತದೆ ಟೀಸರ್‌. ಅವರೆಲ್ಲರ ಕಣ್ಗಳಲ್ಲಿ ಭಯದ ಛಾಯೆ ಮೂಡಿರುತ್ತದೆ. ಇದಾದ ಮೇಲೆ ಚಿಕ್ಕ ಹುಡುಗನೊಬ್ಬ ಕತ್ತಲೆಯಿಂದ ಹೊರಬರುತ್ತಾನೆ. ಇನ್ನೊಂದೆಡೆ ಕೆಳಗೆ ಬಿದ್ದಿರುವ ವಿಚಿತ್ರ ಮುಖವಾಡವನ್ನು ಒಬ್ಬ ವ್ಯಕ್ತಿ ಕೈಗೆತ್ತಿಕೊಳ್ಳುವಾಗ ಮಹಿಳೆಯೊಬ್ಬಳು ಜೋರಾಗಿ ಕಿರುಚುವ ಸದ್ದು ಮತ್ತು ಭಯಾನಕ ಹಿನ್ನಲೆ ಸಂಗೀತ
ಕೇಳಿಸುತ್ತದೆ.

ಕತೆಯು ಮುಖವಾಡ ಧರಿಸಿರುವ ವ್ಯಕ್ತಿಯ ಸುತ್ತ ಸುತ್ತುತ್ತದೆ. ‘RX 100’ ಚಿತ್ರದಲ್ಲಿ ನಾಯಕಿಯಾಗಿ ನಟಸಿದ್ದ ಪಾಯಲ್ ರಜಪೂತ್ ಭಯಭೀತರಾಗಿರುವಂತೆ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾ ಖ್ಯಾತಿಯ ಅಜನೀಶ್ ಲೋಕನಾಥ್ ಅವರ ಥ್ರಿಲ್ಲಿಂಗ್ ಸಂಗೀತ ಸಂಯೋಜನೆಯು ಚಿತ್ರಕ್ಕಿದೆ. ಕ್ರಿಯೇಟಿವ್ ವರ್ಕ್ಸ್ ಮತ್ತು ಮುದ್ರಾ ಮೀಡಿಯಾ ವರ್ಕ್ಸ್ ಬ್ಯಾನರ್‌ನಡಿ ತಯಾರಾಗಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಂದಿತಾ ಶ್ವೇತಾ, ದಿವ್ಯಾ ಪಿಳ್ಳೈ, ಅಜ್ಮಲ್, ರವೀಂದ್ರ ವಿಜಯ್, ಕೃಷ್ಣ ಚೈತನ್ಯ, ಅಜಯ್ ಗೋಷ್, ಶ್ರವಣ್ ರೆಡ್ಡಿ ಇದ್ದಾರೆ. ಆಗಸ್ಟ್‌ 31ರಂದು ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous article‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ ನಟಿ ರಮ್ಯ ಲೀಗಲ್‌ ನೋಟಿಸ್
Next articleವೀಕ್ಷಕರ ತಾಳ್ಮೆ ಪರೀಕ್ಷಿಸುವ ಸೂಪರ್‌ ನ್ಯಾಚುರಲ್‌ ಹಾರರ್‌ – ಥ್ರಿಲ್ಲರ್‌ ‘ಅಧೂರಾ’

LEAVE A REPLY

Connect with

Please enter your comment!
Please enter your name here