ಪ್ರಥಮ್‌ ನಟನೆಯ ನೂತನ ಸಿನಿಮಾ ‘ಫಸ್ಟ್‌ ನೈಟ್‌ ವಿಥ್‌ ದೆವ್ವ’ ಸೆಟ್ಟೇರಿದೆ. ಪಿ ವಿ ಆರ್‌ ಸ್ವಾಮಿ ನಿರ್ದೇಶನದ ಕಾಮಿಡಿ – ಹಾರರ್‌ ಜಾನರ್‌ ಚಿತ್ರವಿದು. ನಿಖಿತಾ, ಮಾನ್ಯ ಸಿಂಗ್‌ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

‘ಬಿಗ್ ಬಾಸ್’ ಖ್ಯಾತಿಯ ಪ್ರಥಮ್‌ ನಾಯಕನಾಗಿ ನಟಿಸುತ್ತಿರುವ ‘ಫಸ್ಟ್ ನೈಟ್ ವಿಥ್‌ ದೆವ್ವ’ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಚಿತ್ರದ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಹಿರಿಯ ನಟ ಶ್ರೀನಿವಾಸಮೂರ್ತಿ ಸಿನಿಮಾಗೆ ಚಾಲನೆ ನೀಡಿದ್ದಾರೆ. ಈ ಚಿತ್ರವನ್ನು ಪಿ ವಿ ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ಪ್ರಥಮ್, ‘ಫಸ್ಟ್ ನೈಟ್ ವಿತ್ ದೆವ್ವ’ ಹಾರರ್ ವಿತ್ ಕಾಮಿಡಿ ಜಾನರ್. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನಾನು ಚಿತ್ರಕ್ಕೆ ಕಥೆ ಬರೆಯಲು ‘ವಿಕ್ರಮ್ ಮತ್ತು ಬೇತಾಳ’ ಕಥೆ ಸ್ಪೂರ್ತಿ. ಸಾಕಷ್ಟು ಹಾರರ್ ಚಿತ್ರ ಬಂದಿದೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ತೋರಿಸುತ್ತಿದ್ದೇವೆ‌’ ಎನ್ನುತ್ತಾರೆ.

ಪ್ರಥಮ್‌ರಿಗೆ ಜೋಡಿಯಾಗಿ ನಿಖಿತಾ ನಟಿಸುತ್ತಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ಸಂಗೀತಾ, ಹರೀಶ್ ರಾಜ್, ತನುಜಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾನ್ಯ ಸಿಂಗ್ ಪ್ರೇತಾತ್ಮದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಥಮ್‌ ಅವರ ಸ್ನೇಹಿತ ನವೀನ್ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಪಿ ವಿ ಆರ್‌ ಸ್ವಾಮಿ ನಿರ್ದೇಶನ ಇರಲಿದೆ. ನಿರ್ದೇಶಕರೇ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಬೆಂಗಳೂರಿನಲ್ಲಿ ಚಿತ್ರೀಕರಣ ಶುರುವಾಗಿದ್ದು ಹೊರದೇಶದಲ್ಲಿ ಹಾಡುಗಳನ್ನು ಚಿತ್ರಿಸುವ ಯೋಜನೆ ಚಿತ್ರತಂಡದ್ದು. ಅದ್ವಿಕ್ ವರ್ಮ ಸಂಗೀತ, ನಾಗೇಶ್‌ ಸಂಕಲನ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here