ಈಶ್ವರ್‌ ಕಾರ್ತೀಕ್‌ ನಿರ್ದೇಶನದ ‘Zebra’ ಕನ್ನಡ ಮತ್ತು ತೆಲುಗು ದ್ವಿಭಾಷಾ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದೆ. ಡಾಲಿ ಧನಂಜಯ್‌ ಮತ್ತು ತೆಲುಗು ನಟ ಸತ್ಯದೇವ್‌ ಚಿತ್ರದ ಇಬ್ಬರು ನಾಯಕರು. ‘KGF’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಧನಂಜಯ್‌ ಮತ್ತು ತೆಲುಗು ನಟ ಸತ್ಯದೇವ್‌ ನಟನೆಯ ‘ಝೀಬ್ರಾ’ ಶೂಟಿಂಗ್‌ ಮುಕ್ತಾಯವಾಗಿದೆ. ಈಶ್ವರ್‌ ಕಾರ್ತೀಕ್‌ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಮಾಸ್‌ ಎಂಟರ್‌ಟೇನರ್‌ ಇದು. ಚಿತ್ರದಲ್ಲಿ ಧನಂಜಯ್‌ ನೆಗೆಟೀವ್‌ ಶೇಡ್‌ ಪಾತ್ರದಲ್ಲಿಲ್ಲ. ಸತ್ಯದೇವ್ ಮತ್ತು ಧನಂಜಯ್‌ ಇಬ್ಬರೂ ಚಿತ್ರದ ನಾಯಕರಾಗಿದ್ದು, ಈ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಕುತೂಹಲವಿದೆ. ಇಬ್ಬರಿಗೂ ಇದು 26ನೇ ಸಿನಿಮಾ ಎನ್ನುವುದು ವಿಶೇಷ! ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌ , ಸುರೇಶ್‌ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಸದ್ಯ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿದೆ.

LEAVE A REPLY

Connect with

Please enter your comment!
Please enter your name here