ಜ್ಯೂಹಿ ಚಾವ್ಲಾ, ಬಾಬಿಲ್‌ ಖಾನ್‌, ಅರ್ಜುನ್‌ ಜಯನ್‌ ಅಭಿನಯದ ‘Friday Night Plan’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವತ್ಸಲ್‌ ನೀಲಕಂಠನ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಸಿನಿಮಾ ಸೆಪ್ಟೆಂಬರ್‌ 1ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ವತ್ಸಲ್‌ ನೀಲಕಂಠನ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘Friday Night Plan’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಜ್ಯೂಹಿ ಚಾವ್ಲಾ, ಬಾಬಿಲ್‌ ಖಾನ್‌, ಅರ್ಜುನ್‌ ಜಯನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಟ್ರೈಲರ್ ಬಾಬಿಲ್ ಸಹೋದರ ಅರ್ಜುನ್‌ನೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿರುವಾಗ ಆರಂಭವಾಗುತ್ತದೆ. ಅವನು ತನ್ನ ಪುಟ್‌ಬಾಲ್‌ ಆಟದ ಮೇಲಿನ ಆಸಕ್ತಿಯನ್ನು ವ್ಯಕ್ತಪಡಿಸುತ್ತಾ ಇದರಿಂದ ಕಾಲೇಜ್‌ ಹುಡುಗಿಯರನ್ನು Impress ಮಾಡಬಹುದು ಎಂದು ಹೇಳುತ್ತಿರುತ್ತಾನೆ. ಆದರೆ ಬಾಬಿಲ್‌, ಇದೇ ಆಸಕ್ತಿ ಓದುವುದರಲ್ಲಿ ಬೆಳೆಸಿಕೊಂಡರೆ ಇನ್ನೂ ಚೆನ್ನಾಗಿರುತ್ತದೆ ಎಂದು ಸಲಹೆ ನೀಡುತ್ತಾನೆ. ಒಂದು ಪುಟ್‌ಬಾಲ್‌ ಪಂದ್ಯವೊಂದರಲ್ಲಿ ಬಾಬಿಲ್‌ ಗೆಲ್ಲುವ ಮೂಲಕ ತನ್ನ ಕಾಲೇಜಿನಲ್ಲಿ ಯಾರಿಗೂ ಗೊತ್ತಿಲ್ಲದಂತ ವ್ಯಕ್ತಿ ಈ ಪಂದ್ಯದಿಂದ ಜನಪ್ರಿಯತೆ ಹೊಂದುತ್ತಾನೆ. ನಂತರ ಶಾಲೆಯ ಎಲ್ಲಾ ಸ್ನೇಹಿತರು ಸೇರಿ ಶುಕ್ರವಾರ ರಾತ್ರಿ ಪಾರ್ಟಿಗೆ ಹೋಗುವುದಾಗಿ ನಿರ್ಧರಿಸುತ್ತಾರೆ. ಇದರ ಜೊತೆಗೆ ಸಹೋದರರ ಮಧ್ಯೆ ಪ್ರೀತಿ, ಮನಸ್ತಾಪ, ಕೋಪ ಇವೆಲ್ಲವೂ ಸಹಜವಾಗಿಯೇ ವ್ಯಕ್ತವಾಗಿವೆ.

ಚಿತ್ರದಲ್ಲಿ ತಾಯಿ ಪಾತ್ರವನ್ನು ಜೂಹಿ ಚಾವ್ಲಾ ಮೆಹ್ತಾ ನಿರ್ವಹಿಸಿದ್ದಾರೆ. Netflix ತನ್ನ ಅಧಿಕೃತ ಖಾತೆಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಎಕ್ಸೆಲ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿ ರಿತೇಶ್ ಸಿಧ್ವಾನಿ, ಕಾಸಿಂ ಜಗ್ಮಗಿಯಾ ಮತ್ತು ಫರ್ಹಾನ್ ಅಖ್ತರ್ ಈ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮೇಧಾ ರಾಣಾ, ಆಧ್ಯಾ ಆನಂದ್ ಮತ್ತು ನಿನಾದ್ ಕಾಮತ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್‌ 1ರಿಂದ Netflix ನಲ್ಲಿ ಸ್ಟ್ರೀಮ್‌ ಆಗಲಿದೆ.

Previous article‘ಕಣ್ಣಪ್ಪ’ನಾಗಿ ವಿಷ್ಣು ಮಂಚು | ಮೋಹನ್‌ ಬಾಬು ನಿರ್ಮಾಣದ ಪೌರಾಣಿಕ ತೆಲುಗು ಸಿನಿಮಾ
Next article‘ಪಡಚೋನೆ ಇಂಗಳು ಕಾಥೋಳೀ’ ಟ್ರೈಲರ್‌ | ಇಂದಿನಿಂದ (ಆಗಸ್ಟ್‌ 22) Saina Playನಲ್ಲಿ ಸಿನಿಮಾ

LEAVE A REPLY

Connect with

Please enter your comment!
Please enter your name here