ಮೃಗ್‌ದೀಪ್‌ ಸಿಂಗ್‌ ಲಂಬಾ ನಿರ್ದೇಶನದ ‘ಫುಕ್ರೆ 3’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪುಲ್ಕಿತ್‌ ಸಾಮ್ರಾಟ್‌, ವರುಣ್‌ ಶರ್ಮಾ, ರಿಚಾ ಚಡ್ಡಾ, ಮನ್ಜೋತ್‌ ಸಿಂಗ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾ ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ.

ಪುಲ್ಕಿತ್ ಸಾಮ್ರಾಟ್, ವರುಣ್ ಶರ್ಮಾ, ಮನ್ಜೋತ್ ಸಿಂಗ್ ಮತ್ತು ರಿಚಾ ಚಡ್ಡಾ ಪ್ರಮುಖ ಪಾತ್ರಗಳಲ್ಲಿರುವ ‘ಫುಕ್ರೆ 3’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ವಿಫುಲ್‌ ವಿಗ್‌ ಕತೆ ಬರೆದಿದ್ದು, ಮೃಗ್‌ ದೀಪ್‌ ಸಿಂಗ್‌ ಲಂಬಾ ನಿರ್ದೇಶಿಸಿದ್ದಾರೆ. ‘ಭೋಲಿ’ ಪಾತ್ರದಲ್ಲಿರುವ ರಿಚಾ ಚಡ್ಡಾ ರಾಜಕಾರಣಿಯಾಗಲು ಬಯಸುತ್ತಿರುತ್ತಾಳೆ. ಹಾಗೂ ಆಕೆ ದೆಹಲಿಯನ್ನು ಆಳುವ ಗುರಿ ಹೊಂದಿದ್ದು, ತನ್ನ ರಾಜಕೀಯ ಜರ್ನಿಯಲ್ಲಿ ಎಲ್ಲಾ ಅಡೆತಡೆಗಳನ್ನು ಎದುರಿಸುವ ಛಾತಿಯುಳ್ಳವಳು. ಆದರೆ ಪುಲ್ಕಿತ್ ಸಾಮ್ರಾಟ್, ವರುಣ್ ಶರ್ಮಾ ಮತ್ತು ಮನ್ಜೋತ್‌ ಸಿಂಗ್ ಒಡ್ಡಿದ ಅಡೆತಡೆಗಳನ್ನು ಎದುರಿಸಲು ವಿಫಲಳಾಗುತ್ತಾಳೆ. ಟ್ರೇಲರ್‌ನಲ್ಲಿ ಕಾಲೇಜು, ಕ್ಯಾಂಪಸ್‌, ಹಾಸ್ಯ ಸಂಭಾಷಣೆಗಳನ್ನು ತೋರಿಸಲಾಗಿದೆ. Excel Entertainment ಬ್ಯಾನರ್‌ ಅಡಿಯಲ್ಲಿ ರತೇಶ್‌ ಸಿದ್ವಾನಿ ಮತ್ತ ಫರ್ಹಾನ್‌ ಅಖ್ತರ್‌ ಸಿನಿಮಾ ನಿರ್ಮಿಸಿದ್ದಾರೆ. ತನಿಷ್ಕ್‌ ಭಗ್ಚಿ, ಸುಮಿತ್‌ ಬಳ್ಳಾರಿ ಮತ್ತು ಗಂರ್ಧವ್‌ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here