ಅನೂಪ್‌ ಆಂಟೋನಿ ನಿರ್ದೇಶನದ ‘ಮೆಹಬೂಬಾ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ‘ಬಿಗ್‌ ಬಾಸ್‌’ ಖ್ಯಾತಿಯ ಶಶಿ ಮತ್ತು ಪಾವನಾ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನೈಜ ಘಟನೆ ಆಧರಿಸಿದ ಸಿನಿಮಾ ಮಾರ್ಚ್‌ 15ರಂದು ತೆರೆಕಾಣಲಿದೆ.

‘ಬಿಗ್‌ ಬಾಸ್‌’ ಖ್ಯಾತಿಯ ಶಶಿ ‘ಮೆಹಬೂಬಾ’ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರದ ಟ್ರೇಲರ್‌ ಅನ್ನು ರೈತರು ಬಿಡುಗಡೆ ಮಾಡಿರುವುದು ವಿಶೇಷ. ನಿರ್ದೇಶಕ ಅನೂಪ್ ಆಂಟೋನಿ ಈ ಕುರಿತು, ‘ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಲಿ. ಇದೇ ಮಾರ್ಚ್‌ 15ರಂದು ಸಿನಿಮಾ ಬಿಡುಗಡೆ ಆಗಲಿದೆ. ಸ್ವಲ್ಪ ಭಯ ಇದೆ. ಪರಿಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ’ ಎಂದರು. ಹೀರೋ ಶಶಿ ಮಾತನಾಡಿ, ‘ನಾನು ಇಷ್ಟಪಡುವ ರೈತಾಪಿ ಬಳಗದವರು, ಬಿಗ್‌ಬಾಸ್‌ನಲ್ಲಿ ನನ್ನನ್ನು ನೋಡಿ ಇಷ್ಟಪಟ್ಟ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ. ನೀವು ಚೆನ್ನಾಗಿದೆ ಎಂದು ಬೇರೆಯವರಿಗೆ ಹೇಳಿದರೆ ಸಿನಿಮಾ ಯಶಸ್ವಿಯಾಗುತ್ತದೆ ನಮ್ಮ ಚಿತ್ರದಲ್ಲಿ ಕಂಟೆಂಟೇ ಹೀರೋ’ ಎಂದರು.

ಸರ್ವಧರ್ಮ ಸಾಮರಸ್ಯ ಸಾರುವ ಸಿನಿಮಾದಲ್ಲಿ ಶಶಿಗೆ ಜೋಡಿಯಾಗಿ ಪಾವನ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು Daksh Entertainments ಸಹಯೋಗದಲ್ಲಿ, Balaji Motion Pictures ಬ್ಯಾನರ್ ಅಡಿಯಲ್ಲಿ ಶಶಿ ನಿರ್ಮಾಣ ಮಾಡಿದ್ದು, ಕೇರಳದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಮಾಡಲಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here