ವಿಜಯ ಪ್ರಸಾದ್‌ ನಿರ್ದೇಶನದಲ್ಲಿ ತಿಂಗಳುಗಳ ಹಿಂದೆ ತೆರೆಕಂಡ ‘ತೋತಾಪುರಿ 1’ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಗಿತ್ತು. ನಿರ್ಮಾಪಕ ಸುರೇಶ್‌ ಇದೀಗ ‘ತೋತಾಪುರಿ 2’ ಸಿನಿಮಾ ಬಿಡುಗಡೆ ತಯಾರಿಯಲ್ಲಿದ್ದಾರೆ. ನಟ ಶಿವರಾಜಕುಮಾರ್‌ ಅವರಿಂದ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.

ಜಗ್ಗೇಶ್‌, ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ತೋತಾಪುರಿ 2’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಶಿವರಾಜ್​ಕುಮಾರ್ ಅವರು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ವಿಜಯ ಪ್ರಸಾದ್‌ ನಿರ್ದೇಶನದ ಈ ಸಿನಿಮಾದ ಭಾಗ 2ರಲ್ಲಿ ಧನಂಜಯ್‌ ಮತ್ತು ಸುಮನ್‌ ರಂಗನಾಥ್‌ ಅವರ ಪ್ರೇಮಕತೆ ಇರುವುದು ಟ್ರೈಲರ್‌ನಿಂದ ತಿಳಿದುಬರುತ್ತದೆ. ಜೊತೆಗೆ ಜಗ್ಗೇಶ್ – ಅದಿತಿ ಪ್ರಭುದೇವ ಜೋಡಿಯ ಕತೆಯೂ ಇರಲಿದೆ. ಧರ್ಮದ ಹೆಸರಲ್ಲಿ ಕಲಹಗಳು ನಡೆಯುವುದು ಹೊಸದೇನಲ್ಲ, ಅವುಗಳನ್ನು ಮೀರಿ ಬದುಕಬೇಕು. ಸಮಾಜದಲ್ಲಿ ಸಾಮರಸ್ಯ ತರಬೇಕು ಎನ್ನುವ ಸಂದೇಶವನ್ನು ‘ತೋತಾಪುರಿ 2’ ಸಿನಿಮಾ ಹೇಳಲಿದೆ.

ಟ್ರೈಲರ್‌ನಲ್ಲಿ ಸಾಕಷ್ಟು ದ್ವಂದ್ವಾರ್ಥದ ಸಂಭಾಷಣೆಗಳಿವೆ. ‘ತೋತಾಪುರಿ 1’ ಚಿತ್ರದಲ್ಲಿ ಪಾತ್ರಗಳು ಪರಿಚಯವಾಗಿದ್ದವು. ಈರೇಗೌಡ (ಜಗ್ಗೇಶ್) ಕೃಷಿಕ ಹಾಗೂ ಟೈಲರ್‌. ಆತನಿಗೆ ಶಕೀಲಾ (ಅದಿತಿ ಪ್ರಭುದೇವ) ಬಾನು ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಇದೇ ಕಥೆ ಮುಂದುವರಿದಿದೆ. Suresh Arts Pvt Ltd ಮತ್ತು Moniflix Studios ಬ್ಯಾನರ್‌ ಅಡಿಯಲ್ಲಿ ಕೆ ಎ ಸುರೇಶ್‌ ಸಿನಿಮಾ ನಿರ್ಮಿಸಿದ್ದಾರೆ. ವೀಣಾ ಸುಂದರ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ.

Previous articleUI ಟೀಸರ್‌ | ನಟ – ನಿರ್ದೇಶಕ ಉಪೇಂದ್ರ ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆ
Next articleನಟಿ ತೇಜಸ್ವಿನಿ ಶರ್ಮ ಬರ್ತ್‌ಡೇಗೆ ‘ಫುಲ್‌ಮೀಲ್ಸ್‌’ ಸಿನಿಮಾ ತಂಡದ ವಿಶೇಷ ಪೋಸ್ಟರ್‌

LEAVE A REPLY

Connect with

Please enter your comment!
Please enter your name here