ನಟ ಗಣೇಶ್‌ ಜನ್ಮದಿನಕ್ಕೆಂದು (ಜುಲೈ 2) ‘ಗಾಳಿಪಟ 2’ ಚಿತ್ರತಂಡ ಚಿತ್ರದ ‘ನಾನಾಡದ ಮಾತೆಲ್ಲವ’ ಲಿರಿಕಲ್‌ ಸಾಂಗ್‌ ಬಿಡುಗಡೆ ಮಾಡಿದೆ. ಜಯಂತ ಕಾಯ್ಕಿಣಿ ರಚನೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ಹಾಡನ್ನು ಸೋನು ನಿಗಮ್‌ ಹಾಡಿದ್ದಾರೆ. ಉತ್ತಮ ಪಿಕ್ಚರೈಸೇಷನ್‌ನಿಂದಲೂ ಈ ಹಾಡು ಇಷ್ಟವಾಗುತ್ತದೆ.

ಮೊನ್ನೆ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’ ಸಿನಿಮಾದ ‘ನಾನಾಡದ ಮಾತೆಲ್ಲವ’ ಹಾಡಿನ ಪುಟ್ಟ ಝಲಕ್‌ ಬಿಡುಗಡೆಯಾಗಿತ್ತು. ಇಂದು ನಟ ಗಣೇಶ್‌ ಹುಟ್ಟುಹಬ್ಬ. ‘ಗಾಳಿಪಟ 2’ ಸಿನಿಮಾದ ಪ್ರಮುಖ ನಟರೊಲ್ಲಬ್ಬರಾದ ಗಣೇಶ್‌ ಜನ್ಮದಿನಕ್ಕೆಂದು ಚಿತ್ರತಂಡ ‘ನಾನಾಡದ ಮಾತೆಲ್ಲವ’ ಲಿರಿಕಲ್‌ ಸಾಂಗ್‌ ಬಿಡುಗಡೆ ಮಾಡಿದೆ. ಎಂದಿನಂತೆ ಜಯಂತ ಕಾಯ್ಕಿಣಿ ಅವರ ಸಾಲುಗಳು ಗಮನ ಸೆಳೆದರೆ ಅರ್ಜುನ್‌ ಜನ್ಯ ಈ ಸಾಲುಗಳಿಗೆ ಮಧುರವಾದ ಸಂಗೀತ ಸಂಯೋಜಿಸಿದ್ದಾರೆ. ಜಯಂತ ಕಾಯ್ಕಿಣಿ ಅವರ ಹಲವಾರು ಹಾಡುಗಳನ್ನು ಜನಪ್ರಿಯಗೊಳಿಸಿರುವ ಗಾಯಕ ಸೋನು ನಿಗಮ್‌ ಮತ್ತೊಮ್ಮೆ ಇಲ್ಲಿ ಅದೇ ಮ್ಯಾಜಿಕ್‌ ಸೃಷ್ಟಿಸಿದ್ದಾರೆ. ಇನ್ನು ನಿರ್ದೇಶಕ ಯೋಗರಾಜ ಭಟ್ಟರು ಹಾಡಿನ ಪಿಕ್ಚರೈಸೇಷನ್‌ಗೆಂದು ವಿಶಿಷ್ಟ ಪ್ರಾಪರ್ಟಿಗಳನ್ನು ಸೃಷ್ಟಿಸಿರುವುದು ಲಿರಿಕಲ್‌ ವೀಡಿಯೋ ಸಾಂಗ್‌ನಲ್ಲಿ ಕಾಣಿಸುತ್ತದೆ. ನಿರ್ಮಾಪಕ ರಮೇಶ್‌ ರೆಡ್ಡಿಯವರು ಅವರ ಕಲ್ಪನೆ ಸಾಕಾರಗೊಳಿಸಲು ಸಾಕಷ್ಟು ಹಣ ವ್ಯಯಿಸಿದ್ದಾರೆ. ಗಣೇಶ್‌ ಮತ್ತು ವೈಭವಿ ಶಾಂಡಿಲ್ಯ ಜೋಡಿಯ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ. ಇವರೆಲ್ಲರ ಪರಿಶ್ರಮದಿಂದಾಗಿ ‘ನಾನಾಡದ ಮಾತೆಲ್ಲವ’ ಹಾಡು ಬಹುಕಾಲ ನೆನಪಿನಲ್ಲಿ ಉಳಿಯುವಂತೆ ತಯಾರಾಗಿರುವ ಸೂಚನೆ ಸಿಗುತ್ತದೆ.

Previous articleಮನರಂಜನೆ ಜೊತೆ ಸಂದೇಶ ದಾಟಿಸುವ ಜವಾಬ್ದಾರಿ
Next articleಕಾಲ ಬರೆದ ಒಲವಿನೋಲೆ; ನಟಿ ‘ಮಧುಬಾಲ’ ಜೀವನ ಕಥನ

LEAVE A REPLY

Connect with

Please enter your comment!
Please enter your name here