ಸ್ಟಾರ್‌ ಸುವರ್ಣ ಚಾನೆಲ್‌ ನಾಳೆ ‘ಗಾನಬಜಾನ’ ಕಾಮಿಡಿ ಶೋನ ಸೆಕೆಂಡ್‌ ಸೀಸನ್‌ ಆರಂಭಿಸುತ್ತಿದೆ. ನಿರಂಜನ್‌ ನಿರೂಪಣೆಯ ಸೆಕೆಂಡ್‌ ಶೋನ ಮೊದಲ ಸಂಚಿಕೆಯಲ್ಲಿ ನಟ ಶರಣ್‌ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ರಿಯಾಲಿಟಿ ಶೋಗಳನ್ನು ಕನ್ನಡಿಗರಿಗೆ ಪರಿಚಯಿಸುವ ಮುಖಾಂತರ ಕನ್ನಡಿಗರಿಗೆ ಹೊಸ ಬಗೆಯ ಮನರಂಜನೆ ಉಣಬಡಿಸಿದ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲಬೇಕು. ಆಗಿಂದಾಗ್ಗೆ ಅಪರೂಪದ ಕಾರ್ಯಕ್ರಮಗಳ ಮೂಲಕ ಪ್ರಯೋಗಗಳಿಗೆ ತೆರೆದುಕೊಳ್ಳುವ ಸುವರ್ಣದ ಜನಪ್ರಿಯ ಶೋಗಳಲ್ಲೊಂದು ‘ಗಾನ ಬಜಾನ’. ಈ ಶೋನ ಮೊದಲ ಸೀಸನ್‌ ಯಶಸ್ಸಿನ ಹಿನ್ನೆಲೆಯಲ್ಲಿ ಎರಡನೇ ಸೀಸನ್‌ಗೆ ಚಾಲನೆ ನೀಡುತ್ತಿದೆ ವಾಹಿನಿ. ಸಿನಿಮಾ ತಾರೆಯರನ್ನು ಆಹ್ವಾನಿಸಿ ವಿವಿಧ ಸೆಗ್‌ಮೆಂಟ್‌ಗಳಲ್ಲಿ ಹಾಸ್ಯದ ಸನ್ನಿವೇಶಗಳನ್ನು ಹೆಣೆಯುವುದು ಈ ಶೋನ ಕಾನ್ಸೆಪ್ಟ್‌. ನಾಳೆ ಜನವರಿ 9ರ ರಾತ್ರಿ 9ಕ್ಕೆ ‘ಗಾನಬಜಾನ ಸೀಸನ್ 2’ ಶುರುವಾಗುತ್ತಿದೆ.

ಸೆಕೆಂಡ್‌ ಸೀಸನ್‌ನ ಮೊದಲ ಸಂಚಿಕೆಯಲ್ಲಿ ನಟ ಶರಣ್‌ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. “ನಮ್ಮ ವಾಹಿನಿಯ ಭಾನುವಾರ ಸಂಜೆಯ ಅವಧಿ ಹಾಸ್ಯಕ್ಕೆ ಮೀಸಲು. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಹ ಆರೋಗ್ಯಕರ ಹಾಸ್ಯ ನೀಡುವುದು ನಮ್ಮ ಗುರಿ. ಈಗಾಗಲೇ ಇಲ್ಲಿಯವರೆಗಿನ ವಿವಿಧ ಶೋಗಳು ಜನರ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿವೆ. ಗಾನ ಬಜಾನ ಎರಡನೇ ಸೀಸನ್‌ ಮತ್ತಷ್ಟು ಮನರಂಜನೆಯ ಸೆಗ್‌ಮೆಂಟ್‌ನೊಂದಿಗೆ ಮೂಡಿಬರಲಿದೆ. ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ನೋವು, ನಲಿವು, ಕಷ್ಟ-ಸುಖಗಳ ಮಾತುಕತೆಯೊಂದಿಗೆ ವೀಕ್ಷಕರನ್ನು ಒಳಗೊಂಡು ಹಾಸ್ಯದೊಂದಿಗೆ ಅವರ ಮನಸುಗಳನ್ನು ಹಗುರಗೊಳಿಸುವುದು ಶೋನ ಕಾನ್ಸೆಪ್ಟ್‌” ಎಂದು ವಾಹಿನಿ ಹೇಳಿಕೊಂಡಿದೆ. ನಿರಂಜನ್‌ ಶೋ ನಿರೂಪಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here