ಅಬ್ದುಲ್‌ ಕರೀಂ ತೆಲಗಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಹನ್ಸಲ್‌ ಮೆಹ್ತಾ ರೂಪಿಸುತ್ತಿರುವ ವೆಬ್‌ ಸರಣಿಯಲ್ಲಿ ಗಗನ್‌ ದೇವ್‌ ರಿಯಾರ್‌ ಆಯ್ಕೆಯಾಗಿದ್ದಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದ ಗಗನ್‌ ದೇವ್‌ ಸರಣಿಯಲ್ಲಿ ತೆಲಗಿ ಪಾತ್ರ ನಿರ್ವಹಿಸಲಿದ್ದಾರೆ.

‘Scam 1992: ದಿ ಹರ್ಷದ್‌ ಮೆಹ್ತಾ ಸ್ಟೋರಿ’ ಯಶಸ್ಸಿನ ನಂತರ ಹನ್ಸಲ್‌ ಮೆಹ್ತಾ ‘Scam 2003: The Telgi Story’ ಸರಣಿ ಕೈಗೆತ್ತಿಕೊಂಡಿದ್ದರು. ತೊಂಬತ್ತರ ದಶಕದಲ್ಲಿ ಛಾಪಾ ಕಾಗದ ಹಗರಣದ ಮೂಲಕ ದೊಡ್ಡ ಸದ್ದು ಮಾಡಿದ್ದ ಅಬ್ದುಲ್‌ ಕರೀಂ ತೆಲಗಿ ಕತೆಯಿದು. ಈ ಸರಣಿಗೆ ಸಂಬಂಧಿಸಿದಂತೆ ಪ್ರೀ ಪ್ರೊಡಕ್ಷನ್‌ ಕೆಲಸಗಳು ಮುಗಿದಿವೆ. ತೆಲಗಿ ಪಾತ್ರಕ್ಕಾಗಿ ಕಲಾವಿದರ ಹುಡುಕಾಟ ನಡೆದಿತ್ತು. ಅಂತಿಮವಾಗಿ ರಂಗಭೂಮಿ ಕಲಾವಿದ ಗಗನ್‌ ದೇವ್‌ ರಿಯಾರ್‌ ಈ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಪಾತ್ರ ಪರಿಚಯಕ್ಕಾಗಿ ತಂಡದವರು ಒಂದು ಟೀಸರ್‌ ಬಿಡುಗಡೆ ಮಾಡಿದ್ದಾರೆ. “Telgi has been found. Starring Gagan Dev Riar as Telgi, Produced by Applause Entertainment in association with StudioNext, Scam 2003: The Telgi Story will be helmed by show runner Hansal Mehta and director Tushar Hiranandani. Casting by Mukesh Chhabra.” ಎನ್ನುವ ಸಂದೇಶದೊಂದಿಗೆ ಬಂದಿರುವ ಟೀಸರ್‌ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಕರ್ನಾಟಕದ ಖಾನಾಪುರದ ಅಬ್ದುಲ್‌ ಕರೀಂ ತೆಲಗಿ ಛಾಪಾ ಕಾಗದ ಹಗರಣ ದೇಶದ ಹಲವು ರಾಜ್ಯಗಳಿಗೆ ವ್ಯಾಪಿಸಿತ್ತು. ಪತ್ರಕರ್ತ ಸಂಜಯ್‌ ಸಿಂಗ್‌ ಅವರ ‘Reporter ki Dairy’ ಕೃತಿಯನ್ನು ಆಧರಿಸಿ ಈ ವೆಬ್ ಸರಣಿ ರೂಪಿಸಲಾಗುತ್ತಿದೆ. “Scam 1992 ಸರಣಿಯ ಯಶಸ್ಸಿನಿಂದ ಪ್ರೇರೇಪಿತನಾಗಿ ತೆಲಗಿ ಕತೆ ನಿರೂಪಿಸುತ್ತಿದ್ದೇನೆ. ದೇಶದ ಗಮನ ಸೆಳೆದ ಛಾಪಾ ಕಾಗದ ಹರಣದ ಸುತ್ತ ಈ ಬಾರಿ ಕತೆ ಹೇಳುತ್ತಿದ್ದೇವೆ” ಎಂದಿದ್ದಾರೆ ನಿರ್ದೇಶಕ ಹನ್ಸಲ್‌ ಮೆಹ್ತಾ. SonyLIVನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here