ರಾಜವರ್ಧನ್‌ ಅಭಿನಯದ ‘ಗಜರಾಮ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹೀರೋ ರಾಜವರ್ಧನ್‌ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದಾರೆ. ಸುನೀಲ್‌ ಕುಮಾರ್‌ ವಿ ಎ ನಿರ್ದೇಶನದ ಈ ಸಿನಿಮಾದ ನಾಯಕಿ ತಪಸ್ವಿನಿ ಪೂಣಚ್ಚ.

‘ಬಿಚ್ಚುಗತ್ತಿ’ ಖ್ಯಾತಿಯ ರಾಜವರ್ಧನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗಜರಾಮ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಸುನೀಲ್ ಕುಮಾರ್ ವಿ ಎ ನಿರ್ದೇಶಿಸುತ್ತಿದ್ದಾರೆ. ಇದೊಂದು ಕ್ರೀಡಾ ಆಧಾರಿತ ಚಿತ್ರವಾಗಿದ್ದು, ಕುಸ್ತಿ ಪಟುವಿನ ಜೀವನ ಆಧರಿಸಿದೆ. ಟೀಸರ್‌ನಲ್ಲಿ ಕುಸ್ತಿಪಟುವಾಗಿ ರಾಜವರ್ಧನ್‌ ಕಾಣಿಸಿಕೊಂಡಿದ್ದು, ತನ್ನ ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಕುಸ್ತಿ ಮೂಲಕವೇ ಎದುರಿಸುವ ಧೈರ್ಯಶಾಲಿಯಾಗಿ ಅಭಿನಯಿಸಿದ್ದಾರೆ. ತಪಸ್ವಿನಿ ಪೂಣಚ್ಚ ಚಿತ್ರದ ನಾಯಕಿ.

ಪಾತ್ರ, ಚಿತ್ರದ ಬಗ್ಗೆ ಮಾತನಾಡುವ ರಾಜವರ್ಧನ್‌, ‘ಚಿತ್ರದಲ್ಲಿ ಕೆಲಸ ಮಾಡಿರುವುದು ನನಗೆ ಭಾವನಾತ್ಮಕ ಪ್ರಯಾಣವಾಗಿತ್ತು. ನಾನು ಗಜರಾಮರಂತಹ ಅನೇಕ ನಾಯಕರನ್ನು ಒಳಗೊಂಡ ಕಮರ್ಷಿಯಲ್ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ. ಈಗ ಅದೇ ಪಾತ್ರದಲ್ಲಿ ನನನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ. ಈ ಚಿತ್ರವು ಕಂಡ ಕನಸುಗಳು ಹಾಗೂ ಅವುಗಳನ್ನು ನನಸಾಗಿಸಲು ಹೊರಾಡುವ ಕಥಾನಕ’ ಎನ್ನುತ್ತಾರೆ. ‘ಶಿಷ್ಯ’ ದೀಪಕ್‌, ಕಬೀರ್ ಸಿಂಗ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಟಿ ರಾಗಿಣಿ ದ್ವಿವೇದಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನೋಮೂರ್ತಿಯವರ ಸಂಗೀತ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here