ಸಮುದ್ರಕನಿ ನಿರ್ದೇಶನದ ‘BRO’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದು ಸಮುದ್ರಕನಿ ಅವರೇ ನಿರ್ದೇಶಿಸಿದ್ದ ‘ವಿನೋದಯ ಸೀತಂ’ ರೀಮೇಕಿದು. ಪವನ್‌ ಕಲ್ಯಾಣ್‌ ಮತ್ತು ಸಾಯಿ ಧರಮ್‌ ತೇಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

ನಟರಾದ ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಅಭಿನಯದ ‘BRO’ ಆಕ್ಷನ್‌ – ಥ್ರಿಲ್ಲರ್‌ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನಟ, ನಿರ್ದೇಶಕ ಸಮುದ್ರಕನಿ ರಚಿಸಿ – ನಿರ್ದೇಶಿಸಿರುವ ಈ ಸಿನಿಮಾ ಅವರದ್ದೇ ತಮಿಳು ಚಲನಚಿತ್ರ ‘ವಿನೋದಯ ಸೀತಂ’ ಅಧಿಕೃತ ರಿಮೇಕ್. ಟೀಸರ್‌ ವಿಡಿಯೋ ಪವನ್‌ ಕಲ್ಯಾಣ್‌ ಮತ್ತು ಸಾಯಿ ಧರಮ್‌ ಅವರ ಹಾಸ್ಯ ಸಂಭಾಷಣೆಗಳನ್ನು ಪ್ರಸ್ತುತ ಪಡಿಸುತ್ತದೆ. ಪವನ್‌ ಕಲ್ಯಾಣ್‌ ಪಾತ್ರಕ್ಕೆ ಸೂಪರ್‌ನ್ಯಾಚುರಲ್‌ ಪವರ್‌ ಇದ್ದಂತಿದೆ. ಚಿತ್ರದ ನಟರಾದ ಪವನ್‌ ಕಲ್ಯಾಣ್‌ ಮತ್ತು ಸಾಯಿ ಧರಮ್‌ ತೇಜ್‌ ಟೀಸರ್‌ ಮಾಹಿತಿಯನ್ನು ತಮ್ಮ Instagram ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ತ್ರಿವಿಕ್ರಮ್ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಪ್ರಿಯಾ ಪ್ರಕಾಶ್‌ ವಾರಿಯರ್‌, ಕೇತಿಕಾ ಶರ್ಮ ಚಿತ್ರದ ನಾಯಕಿಯರು. ಬ್ರಹ್ಮಾನಂದಂ, ಸುಬ್ಬರಾಜು ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ZEE ಸ್ಟುಡಿಯೋಸ್ ಸಹಯೋಗದೊಂದಿಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಟಿ ಜಿ ವಿಶ್ವ ಪ್ರಸಾದ್ ಮತ್ತು ವಿವೇಕ್ ಕುಚಿಬೋಟ್ಲ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ತಮನ್ ಎಸ್ ಸಂಗೀತ ಸಂಯೋಜಿಸಿದ್ದು, ಸುಜಿತ್ ವಾಸುದೇವ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನವಿದೆ. ‘BRO’ ಸಿನಿಮಾ ಜುಲೈ 28ರಂದು ತೆರೆಕಾಣಲಿದೆ.

Previous article
Next articleಗಣೇಶ್‌ ನೂತನ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ | ಫಸ್ಟ್‌ಲುಕ್‌ ರಿಲೀಸ್‌ ಮಾಡಿದ ಚಿತ್ರತಂಡ

LEAVE A REPLY

Connect with

Please enter your comment!
Please enter your name here