ಸತ್ಯ ಹೆಗಡೆ ನಿರ್ಮಾಣ, ಅಭಿಷೇಕ್‌ ಕಾಸರಗೋಡು ನಿರ್ದೇಶನದ ‘ಪಪ್ಪೆಟ್ಸ್‌’ ಶಾರ್ಟ್‌ಫಿಲ್ಮ್‌ ಇಂದು ಬಿಡುಗಡೆಯಾಗಿದೆ. ಕಿರುತೆರೆ ನಟಿ, ‘ಸತ್ಯ’ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್‌ ನಟನೆಯ ಶಾರ್ಟ್‌ಫಿಲ್ಮ್‌ ತನ್ನ ವಿಶಿಷ್ಟ ಕಥಾವಸ್ತು, ಛಾಯಾಗ್ರಹಣದಿಂದ ಗಮನ ಸೆಳೆಯುತ್ತದೆ.

ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಸತ್ಯ ಹೆಗಡೆ ಸ್ಟುಡಿಯೋ ನಿರ್ಮಾಣದ ‘ದಿ ಕ್ರಿಟಿಕ್‌’ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಗಿತ್ತು. ಮಂಸೋರೆ ನಿರ್ದೇಶನದ ಶಾರ್ಟ್‌ಫಿಲ್ಮ್‌ಗೆ ಜನರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇಂದು ಅವರ ನಿರ್ಮಾಣದ ಮತ್ತೊಂದು ಶಾರ್ಟ್‌ಫಿಲ್ಮ್‌ ‘ಪಪ್ಪೆಟ್ಸ್‌’ ಬಿಡುಗಡೆಯಾಗಿದೆ. ಯುವ ಛಾಯಾಗ್ರಾಹಕ ಅಭಿಷೇಕ್‌ ಕಾಸರಗೋಡು ನಿರ್ದೇಶನ, ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಫಿಲ್ಮ್‌ನಲ್ಲಿ ಅವರ ತಾರಾಪತ್ನಿ ಗೌತಮಿ ಜಾಧವ್‌ ನಟಿಸಿದ್ದಾರೆ. ಹತ್ತು ನಿಮಿಷಗಳ ಕಿರುಚಿತ್ರ ತನ್ನ ಕಥಾವಸ್ತು, ಛಾಯಾಗ್ರಹಣ ಮತ್ತು ನಿರೂಪಣೆ ಶೈಲಿಯಿಂದ ಗಮನ ಸೆಳೆಯುತ್ತದೆ. ಮಿಥುನ್‌ ಮುಕುಂದನ್‌ ಸಂಗೀತ ಸಂಯೋಜನೆ ಇದ್ದು ಮನು ಶೆಡ್ಗರ್‌ ಸಂಕಲನವಿದೆ.

ನಟಿ ಮತ್ತು ಪುಸ್ತಕಗಳನ್ನು ಮಾರಾಟ ಮಾಡುವ ಸೇಲ್ಸ್‌ ಗರ್ಲ್‌ ಮಧ್ಯೆ ನಡೆಯುವ ಡ್ರಾಮಾ ‘ಪಪ್ಪೆಟ್ಸ್‌’. ಇವರಿಬ್ಬರ ಮಧ್ಯೆಯ ಮಾತುಕತೆಯಲ್ಲಿ ಕತೆ ಸಾಗುತ್ತದೆ. ನಟಿ ಹೇಗೆ ತಾನು ಸಮಾಜದ ವಿವಿಧ ಪಾತ್ರಗಳನ್ನು ಅಭಿವ್ಯಕ್ತಿಸುತ್ತೇನೆ ಎನ್ನುವ ಮಾತಿನೊಂದಿಗೆ ಫಿಲ್ಮ್‌ ಕೊನೆಗೊಳ್ಳುತ್ತದೆ. ಈ ಎರಡೂ ಪಾತ್ರಗಳಲ್ಲಿ ಗೌತಮ ಜಾಧವ್‌ ಕಾಣಿಸಿಕೊಂಡಿರುವುದು ವಿಶೇಷ. ಇದೊಂದು ರೀತಿ ಕಿರುಚಿತ್ರ ಮಾದರಿಯಲ್ಲಿ ಸಂಕೀರ್ಣವಾದ ಕತೆ ಎಂದು ಹೇಳಬಹುದು. ಇನ್ನು ಅಭಿಷೇಕ್‌ ಅವರಿಗೆ ಇದು ಮೊದಲ ನಿರ್ದೇಶನ. ‘ಆಪರೇಷನ್‌ ಅಲಮೇಲಮ್ಮ’, ‘ಮಾಯಾಬಜಾರ್‌’, ‘ಅನಂತು ವರ್ಸಸ್‌ ನುಸ್ರತ್‌’, ‘ಕೃಷ್ಣ ಟಾಕೀಸ್‌’, ‘ಕಿನಾರೆ’ ಮುಂತಾದ ಚಿತ್ರಗಳಿಗೆ ಅವರು ಛಾಯಾಗ್ರಹಣ ಮಾಡಿದ್ದಾರೆ.

Previous articleಟೀಸರ್‌ | ನಟಿ ಕಂಗನಾ ರನಾವತ್‌ ‘Lock Upp’ ರಿಯಾಲಿಟಿ ಶೋ
Next articleನಿನ್ನ ಪ್ರೀತಿಗೆ, ಅದರ ರೀತಿಗೆ…

LEAVE A REPLY

Connect with

Please enter your comment!
Please enter your name here