ಬಾಲಿವುಡ್‌ ನಟಿ ಕಂಗನಾ ರನಾವತ್‌ ತಾವು ನಿರೂಪಿಸಲಿರುವ ‘Lock Upp’ ರಿಯಾಲಿಟಿ ಶೋನ ಟೀಸರ್‌ ಹಂಚಿಕೊಂಡಿದ್ದಾರೆ. ಹದಿನಾರು ವಿವಾದಾತ್ಮಕ ಸ್ಪರ್ಧಿಗಳನ್ನು 72 ದಿನಗಳ ಕಾಲ ಲಾಕ್‌ ಮಾಡುವ ವಿಶಿಷ್ಟ ಫಾರ್ಮ್ಯಾಟ್‌ ಇದು. ಫೆಬ್ರವರಿ 27ರಿಂದ ಶೋ ALTBalaji ಮತ್ತು MX Playerನಲ್ಲಿ ಸ್ಟ್ರೀಮ್‌ ಆಗಲಿದೆ.

‘Lock Upp’ ರಿಯಾಲಿಟಿ ಶೋ ನಿರೂಪಕಿಯಾಗಿ ಬಾಲಿವುಡ್‌ ನಟಿ ಕಂಗನಾ ರನಾವತ್‌ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊನ್ನೆ ಶೋನಲ್ಲಿನ ತಮ್ಮ ಫಸ್ಟ್‌ ಲುಕ್‌ ಶೇರ್‌ ಮಾಡಿದ್ದ ನಟಿ ಇದೀಗ ಟೀಸರ್‌ ಹಂಚಿಕೊಂಡಿದ್ದಾರೆ. ಈ ಟೀಸರ್‌ ಕಂಗನಾರ ತೆರೆಯಾಚೆಗಿನ ವಿವಾದದ ಹೇಳಿಕೆಗಳು, ನಡವಳಿಕೆಗಳಿಗೆ ಕನ್ನಡಿಯಂತಿದೆ. ಬ್ಲಾಕ್‌ ಮತ್ತು ಸಿಲ್ವರ್‌ ಗೌನ್‌ ತೊಟ್ಟ ನಟಿ, ““Iss duniya mein do type ke log hai. Ek jo mujhe pasand karte hai and dusre woh B-grade strugglers, jo meri burai karke news mein rehte hai” (ಈ ಜಗತ್ತಿನಲ್ಲಿ ಎರಡು ವಿಧದ ಜನ ಇದ್ದಾರೆ. ಒಂದು ವರ್ಗದವರು ನನ್ನನ್ನು ಇಷ್ಟಪಡುತ್ತಾರೆ. ಮತ್ತೊಂದು ವರ್ಗದವರು ನನ್ನ ಬಗ್ಗೆ ಕಾಮೆಂಟ್‌ಗಳನ್ನು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ) ಎಂದು ಡೈಲಾಗ್‌ ಹೇಳುತ್ತಾರೆ. ಕೆಲವರು ತಮ್ಮ ಮೇಲೆ FIR ದಾಖಲಿಸುತ್ತಾ ತಮ್ಮ ಬದುಕನ್ನೇ ರಿಯಾಲಿಟಿ ಶೋ ಮಾಡಿದ್ದಾರೆ ಎನ್ನುವ ಕಂಗನಾ, “ಇದೀಗ ನನ್ನ ಸರದಿ. ನಾನು ರಿಯಾಲಿಟಿ ಶೋಗ ಬಾಪ್‌ ಎನ್ನುವಂತಹ ಶೋ ಮಾಡುತ್ತಿದ್ದೇನೆ. ಇದು ನನ್ನ ಜೈಲು. ಇಲ್ಲಿ ನನ್ನದೇ ರೂಲ್ಸ್‌. ಅದರಲ್ಲಿ ಹದಿನಾರು ವಿವಾದಾತ್ಮಕ ಸೆಲೆಬ್ರಿಟಿಗಳು ಲಾಕ್‌ ಆಗಿರುತ್ತಾರೆ. ಅವರ ಹಣೆಬರಹವನ್ನು ನಾನು ನಿರ್ಧರಿಸುತ್ತೇನೆ” ಎಂದಿದ್ದಾರೆ.

“Mera jail hai aisa, na chalegi bhaigiri na papa ka paisa! Get ready for #LockUpp streaming FREE from 27th Feb on @mxplayer and @altbalaji. Trailer out on 16th Feb,” ಎನ್ನುವ ಕಾಮೆಂಟ್‌ನೊಂದಿಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಟೀಸರ್‌ ಶೇರ್‌ ಮಾಡಿದ್ದಾರೆ. ಹಿಂದಿ ಕಿರುತೆರೆಯ ಜನಪ್ರಿಯ ನಿರ್ಮಾಪಕಿ ಏಕ್ತಾ ಕಪೂರ್‌ ಈ ರಿಯಾಲಿಟಿ ಶೋ ನಿರ್ಮಿಸುತ್ತಿದ್ದು, ಸ್ಪರ್ಧಿಗಳ ಅಂತಿಮ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ನಟ – ನಟಿಯರಾದ ಆದಿತ್ಯ ಸಿಂಗ್‌ ರಜಪೂತ್‌, ಅನುಷ್ಕಾ ಸೇನ್‌, ರೊಹ್ಮನ್‌ ಶಾಲ್‌, ಪೂನಂ ಪಾಂಡೆ, ಹರ್ಷ್‌ ಬೆನಿವಾಲ್‌, ಮಾನವ್‌ ಗೋಹಿಲ್‌ ಮತ್ತಿತರ ಹೆಸರುಗಳ ಸ್ಪರ್ಧಿಗಳ ಪಟ್ಟಿಯಲ್ಲಿವೆ ಎನ್ನಲಾಗಿದೆ. ಈ ಶೋನಲ್ಲಿ ಹದಿನಾರು ಸ್ಪರ್ಧಿಗಳನ್ನು 72 ದಿನಗಳ ಕಾಲ ಲಾಕ್‌ ಮಾಡಲಾಗುತ್ತದೆ. ಬಿಗ್‌ಬಾಸ್‌ ಮಾದರಿಯಲ್ಲೇ ಇಲ್ಲಿಯೂ ವೀಕ್ಷಕರ ವೋಟಿಂಗ್‌ ಇರುತ್ತದೆ. ಫೆಬ್ರವರಿ 27ರಿಂದ ALTBalaji ಮತ್ತು MX Playerನಲ್ಲಿ ಸ್ಟ್ರೀಮ್‌ ಆಗಲಿದೆ.

Previous articleಕಾಮರ್ಸ್ ಮೇಷ್ಟ್ರ ಕಮರ್ಶಿಯಲ್ ಟ್ವಿಸ್ಟಿನ ಮನರಂಜನೆ ‘ಮಹಾನ್’
Next articleವೀಡಿಯೊ | ಅಭಿಷೇಕ್‌ – ಗೌತಮಿ ಜಾಧವ್‌ ಶಾರ್ಟ್‌ಫಿಲ್ಮ್‌ ‘ಪಪ್ಪೆಟ್ಸ್‌’ ಬಿಡುಗಡೆ

LEAVE A REPLY

Connect with

Please enter your comment!
Please enter your name here