ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ಅಭಿನಯದ ತೆಲುಗು ಸಿನಿಮಾ ‘ಗುಡ್‌ಲಕ್‌ ಸಖಿ’ ನವೆಂಬರ್‌ 26ಕ್ಕೆ ತೆರೆಕಾಣಲಿದೆ. ನಟಿ ಕೀರ್ತಿ ಸುರೇಶ್ ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳ ಆಶೀರ್ವಾದ ಕೋರಿದ್ದಾರೆ.

ಖ್ಯಾತ ನಿರ್ದೇಶಕ ನಾಗೇಶ್ ಕುಕುನೂರ್ ನಿರ್ದೇಶನದಲ್ಲಿ ಕೀರ್ತಿ ಸುರೇಶ್ ನಟಿಸಿರುವ ‘ಗುಡ್‌ಲಕ್ ಸಖಿ’ ತೆಲುಗು ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಈ ಸಿನಿಮಾ ನವೆಂಬರ್ 26ರಂದು ತೆರೆಕಾಣಲಿದ್ದು, ನಟಿ ಕೀರ್ತಿ ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಈ ಸಿನಿಮಾ ನೇರವಾಗಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ನಿರ್ಮಾಪಕರ ನಿರ್ಧಾರದ ಬಗ್ಗೆ ಕೀರ್ತಿ ಅಸಮಾಧಾನ ಹೊಂದಿದ್ದರು. ಇದೀಗ ನಟಿಯ ಆಸೆಯಂತೆ ಚಿತ್ರಮಂದಿರಗಳ ದೊಡ್ಡ ಪರದೆಗಳಲ್ಲೇ ಸಿನಿಮಾ ತೆರೆಕಾಣಲಿದೆ.

ವಿಶಿಷ್ಟ ಶೀರ್ಷಿಕೆಯ ‘ಗುಡ್‌ಲಕ್‌ ಸಖಿ’ ಕ್ರೀಡಾಪ್ರಧಾನ ರೊಮ್ಯಾಂಟಿಕ್‌ ಡ್ರಾಮಾ ಸಿನಿಮಾ ಎನ್ನಲಾಗಿದೆ. ಆದಿ ಪಿನಿಸೆಟ್ಟಿ ಮತ್ತು ಜಗಪತಿ ಬಾಬು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳ್ಳಿಯ ಯುವತಿಯೊಬ್ಬಳು ಶೂಟರ್‌ ಆಗುವ ಕಥಾನಕ. ತೆರೆಯ ಮೇಲೆ ಜಗಪತಿ ಬಾಬು ನಾಯಕನಟಿಗೆ ಮೆಂಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕೀರ್ತಿ ಸುರೇಶ್‌ ‘ಸರ್ಕಾರು ವಾರಿ ಪಾಟ’ ತೆಲುಗು ಚಿತ್ರದಲ್ಲಿ ಮಹೇಶ್ ಬಾಬು ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ಭೋಳಾ ಶಂಕರ್‌’ ತೆಲುಗು ಚಿತ್ರದಲ್ಲಿ ಅವರು ಚಿರಂಜೀವಿ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here