‘ಗದರ್‌ 2’ ಹಿಂದಿ ಸಿನಿಮಾದ ಯಶಸ್ಸಿನ ನಂತರ ಸನ್ನಿ ಡಿಯೋಲ್‌ ಸ್ಟಾರ್‌ ವ್ಯಾಲ್ಯೂ ಹೆಚ್ಚಿದೆ. ಖ್ಯಾತ ತೆಲುಗು ನಿರ್ದೇಶಕ ಗೋಪಿಚಂದ್‌ ಮಲಿನೇನಿ ನಿರ್ದೇಶನದ ಹಿಂದಿ ಸಿನಿಮಾದಲ್ಲಿ ಸನ್ನಿ ಡಿಯೋಲ್‌ ನಟಿಸಲಿದ್ದಾರೆ. ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಈ ಚಿತ್ರದ ನಾಯಕಿಯರು.

‘ಕ್ರ್ಯಾಕ್’, ‘ವೀರ ಸಿಂಹ ರೆಡ್ಡಿ’ ಯಶಸ್ವೀ ತೆಲುಗು ಸಿನಿಮಾಗಳ ನಿರ್ದೇಶಕ ಗೋಪಿಚಂದ್ ಮಲಿನೇನಿ ಬಾಲಿವುಡ್‌ ಪ್ರವೇಶಿಸುತ್ತಿದ್ದಾರೆ. ಅವರೀಗ ಸನ್ನಿ ಡಿಯೋಲ್‌ಗೆ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘SDGM’ ಎನ್ನುವ ಶೀರ್ಷಿಕೆಯನ್ನಿಡಲಾಗಿದೆ. ಇದೇ ತಿಂಗಳು 22ರಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವ ಪ್ರಸಾದ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸೈಯಾಮಿ ಖೇರ್ ಮತ್ತು ರೆಜಿನಾ ಕಸ್ಸಂದ್ರ ಚಿತ್ರದ ಇಬ್ಬರು ನಾಯಕಿಯರು. ರಿಷಿ ಪಂಜಾಬಿ ಛಾಯಾಗ್ರಹಣ, ತಮನ್ ಎಸ್ ಸಂಗೀತ, ನವೀನ್ ನೂಲಿ ಸಂಕಲನ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here