ರಣವೀರ್ ಸಿಂಗ್ ಅಭಿನಯದ ಹಿಂದಿ ಸ್ಪೋರ್ಟ್‌ ಡ್ರಾಮಾ ಸಿನಿಮಾ ‘83’ ಟೀಸರ್ ಬಿಡುಗಡೆಯಾಗಿದೆ. ರಣವೀರ್ ಈ ಚಿತ್ರದಲ್ಲಿ ಕ್ರಿಕೆಟರ್‌ ಕಪಿಲ್ ದೇವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್‌ 30ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ.

ಕಬೀರ್ ಖಾನ್‌ ನಿರ್ದೇಶನದ ‘83’ ಹಿಂದಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 1983ರಲ್ಲಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ರೋಚಕ ಕತೆಯಿದು. ಆಗ ತಂಡದ ನಾಯಕನಾಗಿದ್ದ ಕಪಿಲ್ ದೇವ್‌ ರಿಯಲ್ ಹೀರೋ ಆಗಿ ಮಿಂಚಿದ್ದರು. ಟೀಸರ್‌ನಲ್ಲಿ ವರ್ಲ್ಡ್‌ ಕಪ್ ವಿನ್ನಿಂಗ್ ಬಾಲ್‌ನ ಚಿತ್ರಣವಿದೆ. ಮದನ್ ಲಾಲ್ ಮಾಡಿದ ಬಾಲು ವಿವಿಯನ್ ರೆಚರ್ಡ್ಸ್‌ ಬ್ಯಾಟ್‌ನಿಂದ ಮೇಲಕ್ಕೆ ಚಿಮ್ಮುತ್ತದೆ. ಕಪಿಲ್ ದೇವ್‌ ಓಡಿ ಹೋಗಿ ಹಿಡಿದ ಈ ಅದ್ಭುತ ಕ್ಯಾಚ್‌ ಮ್ಯಾಚ್‌ನ ದಿಕ್ಕನ್ನೇ ಬದಲಿಸುತ್ತದೆ. ಈ ತಿರುವು ನೀಡಿದ ಕ್ಷಣವೇ ಟೀಸರ್ ಆಗಿದೆ. ನವೆಂಬರ್‌ 30ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ.

ಆಲ್‌ರೌಂಡರ್ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್‌ ಅಭಿನಯಿಸಿದ್ದಾರೆ. ಸಕೀಬ್ ಸಲೀಂ, ಹ್ಯಾರ್ಡಿ ಸಂಧು, ಅಮ್ಮಿ ವಿರ್ಕ್‌, ಪಂಕಜ್ ತ್ರಿಪಾಠಿ, ಜತಿನ್ ಸರ್ನಾ, ಸಾಹಿಲ್ ಕಟ್ಟರ್‌, ಜೀವಾ ಮತ್ತು ದೀಪಿಕಾ ಪಡುಕೋಣೆ ಚಿತ್ರದ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಸಿನಿಮಾ 2020ರ ಏಪ್ರಿಲ್‌ಗೆ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಸಿನಿಮಾ ವಿಳಂಬವಾಗಿ ಈಗ ಡಿಸೆಂಬರ್‌ 24ಕ್ಕೆ ಥಿಯೇಟರ್‌ಗೆ ಬರುತ್ತಿದೆ.

Previous articleವೀಡಿಯೊ | ‘RRR’ ಜನನಿ ಸಾಂಗ್; ಕಣ್ಮನ ಸೆಳೆಯುವ ವಿಶ್ಯುಯೆಲ್ಸ್, ಭಾವುಕ ಸಾಲುಗಳು
Next articleಟ್ರೈಲರ್ | ಇಶಾನ್‌ – ಆಶಿಕಾ ಜೋಡಿಯ ‘ರೆಮೋ’; ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಸಿನಿಮಾ

LEAVE A REPLY

Connect with

Please enter your comment!
Please enter your name here