ಶಬರಿ ಮತ್ತು ಗುರು ಸರವಣನ್‌ ನಿರ್ದೇಶನದ ‘ಗಾರ್ಡಿಯನ್‌’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಟ ವಿಜಯ್‌ ಸೇತುಪತಿ ಟೀಸರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಹನ್ಸಿಕಾ ಮೋಟ್ವಾನಿ ಚಿತ್ರದಲ್ಲಿ ಪ್ರೇತಾತ್ಮವಾಗಿ ಕಾಣಿಸಿಕೊಂಡಿದ್ದಾರೆ.

ಹನ್ಸಿಕಾ ಮೊಟ್ವಾನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಾರರ್‌ ಥ್ರಿಲ್ಲರ್‌ ‘ಗಾರ್ಡಿಯನ್’ ತಮಿಳು ಚಿತ್ರದ ಟೀಸರ್‌ ಅನ್ನು ವಿಜಯ್ ಸೇತುಪತಿ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ‘ಕೂಗ್ಲೆ ಕುಟ್ಟಪ್ಪನ್’ ಚಿತ್ರ ಖ್ಯಾತಿಯ ಶಬರಿ ಮತ್ತು ಗುರು ಸರವಣನ್ ನಿರ್ದೇಶಿಸಿದ್ದಾರೆ. ಕತೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದೆ. ಚಿತ್ರದ ಫೋಸ್ಟರ್ ಅನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡ ವಿಜಯ್‌ ಸೇತುಪತಿ ‘ಗಾರ್ಡಿಯನ್ ಟೀಸರ್ ಹಂಚಿಕೊಳ್ಳಲು ಸಂತೋಷವಾಗಿದೆ. ನಿರ್ಮಾಪಕ ವಿಜಯ್‌ ಮತ್ತು ತಂಡಕ್ಕೆ ಶುಭಾಷಯಗಳು’ ಎಂದು ಬರೆದಿದ್ದಾರೆ. ಟೀಸರ್‌, ಒಂದು ಗುಂಪಿನ ಜನರು ಕಪ್ಪು ವೃತ್ತದ ಸುತ್ತಲೂ ಕುಳಿತು ಅತ್ಯಂತ ಶಕ್ತಿಶಾಲಿ ಭೂತವನ್ನು ಆಹ್ವಾನಿಸುತ್ತಾರೆ. ಆಹ್ವಾನಿತವಾದ ಆತ್ಮವು ಅನೇಕರ ರಕ್ತವನ್ನು ಕುಡಿಯಲು ಕಾಯುತ್ತಿದೆ ಎಂದು ತಿಳಿಯುತ್ತದೆ. ಇದನ್ನು ಅರಿತ ಮಾಂತ್ರಿಕರು ಯಾರೂ ಸಹ ಅವಳ ಹತ್ತಿರ ಹೋಗದಂತೆ ಕೇಳಿಕೊಳ್ಳುತ್ತಾರೆ.

ಹನ್ಸಿಕಾ ರಕ್ತಪಿಶಾಚಿಯಂತಹ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದೇವಸ್ಥಾನದಲ್ಲಿ ಬಚ್ಚಿಟ್ಟರೂ ನಿನ್ನನ್ನು ಕೊಂದು ಹೂತಿಡುತ್ತೇನೆ, ಆ ಜಾಗ ನನಗೆ ಸೇರಿದ್ದು’ ಎಂದು ಪ್ರೇತಾತ್ಮ ಹೇಳುತ್ತದೆ. ಟೀಸರ್‌ನಲ್ಲಿ ಭಯಾನಕ ದೃಶ್ಯಗಳು ಸೆರೆಯಾಗಿವೆ. ‘ಅರಣ್ಮನೈ’ ಸರಣಿಯಲ್ಲಿ ಭೂತದ ಪಾತ್ರವನ್ನು ನಿರ್ವಹಿಸಿದ್ದ ಹಂಸಿಕಾ ಹಾರರ್ ಥ್ರಿಲ್ಲರ್ ‘ಗಾರ್ಡಿಯನ್‌’ನಲ್ಲಿ ಮತ್ತೆ ಭೂತವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುರೇಶ್ ಮೆನನ್, ಶ್ರೀಮನ್, ಮೊಟ್ಟೈ ರಾಜೇಂದ್ರನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಲನಚಿತ್ರಕ್ಕೆ ಸ್ಯಾಮ್‌ C S ಸಂಗೀತ ಸಂಯೋಜಿಸಿದ್ದು, Film Works ಬ್ಯಾನರ್‌ ಅಡಿಯಲ್ಲಿ ಗುರುಶರವಣ ಮತ್ತು ವಿಜಯ್ ಚಂದರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here