ಸೂರಿ ಕುಂದರ್‌ ನಿರ್ದೇಶನದ ‘ಜಿಗರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಪ್ರವೀಣ್‌ ತೇಜ್‌ ಆಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿರುವ ಚಿತ್ರದ ನಾಯಕಿಯಾಗಿ ವಿಜಯಶ್ರೀ ಕಲಬುರ್ಗಿ ನಟಿಸಿದ್ದಾರೆ. ರಿತ್ವಿಕ್‌ ಮುರಳೀಧರ್‌ ಸಂಗೀತ ಚಿತ್ರಕ್ಕಿದೆ.

ಪ್ರವೀಣ್‌ ತೇಜ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಜಿಗರ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಹಿಂದೆ ಕ್ಲಾಸ್‌ ಲವರ್‌ ಬಾಯ್‌ ಆಗಿ ಕಾಣಿಸಿಕೊಂಡಿದ್ದ ಪ್ರವೀಣ್‌, ಇದೀಗ ಮಾಸ್‌ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದಾರೆ. ಇದು ಸೂರಿ ಕುಂದರ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಈಗಾಗಲೇ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಸಿನಿಮಾ ತಂಡ, ಇದೀಗ ಟೀಸರ್ ಬಿಡುಗಡೆ ಮಾಡಿದೆ. ಕರಾವಳಿ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ‘ಜಿಗರ್’ ಚಿತ್ರವು ಸಂಪೂರ್ಣ ಆಕ್ಷನ್ ಸಿನಿಮಾ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರವೀಣ್ ಈ ಚಿತ್ರದಲ್ಲಿ ಚಾಕು ಚೂರಿಯಿಂದ ರಕ್ತ ಹರಿಸಿದ್ದಾರೆ.

UK Productions ಬ್ಯಾನರ್‌ ಅಡಿಯಲ್ಲಿ ಪೂಜಾ ವಸಂತ್ ಕುಮಾರ್‌ ಚಿತ್ರ ನಿರ್ಮಿಸಿದ್ದಾರೆ. ಪ್ರವೀಣ್‌ ಅವರಿಗೆ ನಾಯಕಿಯಾಗಿ ವಿಜಯಶ್ರೀ ಕಲಬುರ್ಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದು, ಶಿವಸೇನ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸಮುದ್ರ ತೀರದ ದಡವೊಂದರಲ್ಲಿ, ಹಡಗುಗಳಲ್ಲಿ ನಡೆಯುವ ಸಂಪೂರ್ಣ ಆಕ್ಷನ್‌ ದೃಶ್ಯಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಸಿನಿಮಾವು ಮಲ್ಪೆ, ಮರವಂತೆ, ಮಂಗಳೂರು ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಟೀಸರ್‌ನಂತೆ ಸಂಪೂರ್ಣ ಸಿನಿಮಾ ಇದೇ ಕಾನ್ಸೆಪ್ಟ್‌ನಲ್ಲಿ ಇರಲಿದೆ ಎಂದಿದೆ ಚಿತ್ರತಂಡ. ಪ್ರವೀಣ್ ಈ ಹಿಂದೆ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here