ಚೆನ್ನೈನ ಸ್ಟುಡಿಯೋದಲ್ಲಿ ಕಮಲ ಹಾಸನ್‌ ನಟನೆಯ ‘ಇಂಡಿಯನ್‌ 2’ ಮತ್ತು ರಜನಿ ಅವರ ‘ತಲೈವರ್‌ 170’ ತಮಿಳು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಚಿತ್ರಗಳ ಹೀರೋಗಳಾದ ಕಮಲ ಹಾಸನ್‌ ಮತ್ತು ರಜನೀಕಾಂತ್‌ ಮುಖಾಮುಖಿಯಾಗಿದ್ದಾರೆ.

ತಮಿಳು ಚಿತ್ರರಂಗದ ದಿಗ್ಗಜ ನಟರಾದ ಕಮಲ ಹಾಸನ್‌ ಮತ್ತು ರಜನೀಕಾಂತ್‌ ಚೆನ್ನೈನ ಸ್ಟುಡಿಯೋವೊಂದರಲ್ಲಿ ಮುಖಾಮುಖಿಯಾಗಿದ್ದಾರೆ. ಸ್ಟುಡಿಯೋದಲ್ಲಿ ಕಮಲ ಹಾಸನ್‌ ನಟನೆಯ ‘ಇಂಡಿಯನ್‌ 2’ ಮತ್ತು ರಜನಿ ಅವರ ‘ತಲೈವರ್‌ 170’ ತಮಿಳು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಈ ಸ್ಟುಡಿಯೋದಲ್ಲಿ ಇಬ್ಬರು ನಟರು 21 ವರ್ಷಗಳ ನಂತರ ಭೇಟಿಯಾಗಿದ್ದಾರೆ ಎನ್ನುವುದು ವಿಶೇಷ. ನಟರು ಒಟ್ಟಿಗೆ ಇರುವ ಪೋಟೋಗಳನ್ನು Lyca Productions ತನ್ನ X ನಲ್ಲಿ ಹಂಚಿಕೊಂಡು, ‘ಭಾರತೀಯ ಚಿತ್ರರಂಗದ ಇಬ್ಬರು ಲಿವಿಂಗ್‌ ಲೆಜೆಂಡ್‌ಗಳಾದ ಕಮಲ ಹಾಸನ್‌ ಮತ್ತು ರಜನೀಕಾಂತ್‌ 21 ವರ್ಷಗಳ ನಂತರ ಒಂದೇ ಸ್ಟುಡಿಯೋದಲ್ಲಿ ಭೇಟಿಯಾಗಿದ್ದಾರೆ. ತಮ್ಮ ‘ಇಂಡಿಯನ್-2’, ‘ತಲೈವರ್ 170′ ಚಿತ್ರೀಕರಣ ಸಮಯದಲ್ಲಿ ಈ ಸುಂದರ ಕ್ಷಣ ಹಂಚಿಕೊಳ್ಳುತ್ತಿದ್ದಾರೆ. Lyca Productions ಇವರ ಎರಡೂ ಚಿತ್ರಗಳನ್ನು ನಿರ್ಮಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತದೆ’ ಎಂದಿದೆ.

Lyca ನಿರ್ಮಾಣ ಸಂಸ್ಥೆ ಹಂಚಿಕೊಂಡಿರುವ ಪೋಟೋಗಳಿಗೆ ನಟರ ಅಭಿಮಾನಿಗಳಿಂದ ಮತ್ತು ಅವರ ಸ್ನೇಹಿತರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕಮಲ ಹಾಸನ್‌ ಅವರು ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾಗೆ ‘ಥಗ್ ಲೈಫ್’ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ‘Kalki 2898 AD’ ಚಿತ್ರದಲ್ಲಿಯೂ ಕಮಲ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ, ಮತ್ತು ದಿಶಾ ಪಟಾನಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here