ಇಬ್ಬರು ವ್ಯತಿರಿಕ್ತ ಸ್ವಭಾವದ ವಕೀಲರ ಸುತ್ತ ಹೆಣೆದ ಕತೆ ‘Guilty Minds’. ಸರಣಿ ಏಪ್ರಿಲ್‌ 22ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಅಮೇಜಾನ್‌ ಪ್ರೈಮ್‌ ವೀಡಿಯೋ ‘Guilty Minds’ ಶೀರ್ಷಿಕೆಯಡಿ ನೂತನ ಸರಣಿಯನ್ನು ಘೋಷಿಸಿದೆ. ಇದೊಂದು ಲೀಗಲ್‌ ಡ್ರಾಮಾ ಆಗಿದ್ದು, ಶ್ರಿಯಾ ಪಿಲಗಾಂವಕರ್‌, ವರುಣ್‌ ಮಿತ್ರಾ, ನಮ್ರತಾ ಸೇಠ್‌, ಸುಗಂಧ ಗಾರ್ಗ್‌, ಕುಲಭೂಷಣ್‌ ಕರಬಂಧ, ಸತೀಶ್‌ ಕೌಶಿಕ್‌, ಬೆಂಜಮಿನ್‌ ಗಿಲಾನಿ ಸೇರಿದಂತೆ ಹತ್ತಾರು ಚಿರಪರಿತ ನಟ – ನಟಿಯರು ಸರಣಿಯಲ್ಲಿ ನಟಿಸಿದ್ದಾರೆ. ನಿರ್ಮಾಪಕರ ಮಾಹಿತಿ ಪ್ರಕಾರ ಇದು ಹತ್ತು ಎಪಿಸೋಡ್‌ಗಳ ಸರಣಿಯಾಗಿದ್ದು, ಮಹತ್ವಾಕಾಂಕ್ಷೆಯ ಇಬ್ಬರು ಯುವ ವಕೀಲರ ಸುತ್ತ ಹೆಣೆದ ಕತೆ. ಇಬ್ಬರ ಆದರ್ಶ, ನಿಲುವುಗಳು ಸಂಪೂರ್ಣ ಭಿನ್ನ. “You won’t be able to turn a blind eye to this one Hearings begin soon. #GuiltyMindsOnPrime.” ಎನ್ನುವ ಸಂದೇಶದೊಂದಿಗೆ ನಿರ್ಮಾಪಕರು ಫಸ್ಟ್‌ಲುಕ್‌ ಶೇರ್‌ ಮಾಡಿದ್ದಾರೆ. ಕರಣ್‌ ಗ್ರೋವರ್‌, ಅಂತರ ಬ್ಯಾನರ್ಜಿ ಮತ್ತು ನವೀದ್‌ ಫಾರೂಕಿ ನಿರ್ಮಾಣದ ಸರಣಿಯನ್ನು Shefali Bhsuhan ನಿರ್ದೇಶಿಸಿದ್ದಾರೆ. ಏಪ್ರಿಲ್‌ 22ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here