ಯಶಸ್ವೀ ಮಲಯಾಳಂ ಸಿನಿಮಾ ‘Forensic’ ಇದೇ ಶೀರ್ಷಿಕೆಯಡಿ ಹಿಂದಿಗೆ ರೀಮೇಕಾಗುತ್ತಿದೆ. ವಿಶಾಲ್‌ ಫುರಿಯಾ ನಿರ್ದೇಶನದ ಸಿನಿಮಾ ZEE5ನಲ್ಲಿ ಸ್ಟ್ರೀಮ್‌ ಅಗಲಿದೆ.

‘ಲವ್‌ ಹಾಸ್ಟೆಲ್‌’ ಸಿನಿಮಾ ನಂತರ ನಟ ವಿಕ್ರಾಂತ್‌ ಮೆಸ್ಸೀ ZEE5ನ ಮತ್ತೊಂದು ಇಂಟೆನ್ಸ್‌ ಡ್ರಾಮಾ ‘Forensic’ ಮೂಲಕ ತೆರೆಗೆ ಮರಳುತ್ತಿದ್ದಾರೆ. ವಿಶಾಲ್‌ ಫುರಿಯಾ ನಿರ್ದೇಶನದ ಈ ಸೈಕಾಲಾಜಿಕಲ್‌ ಥ್ರಿಲ್ಲರ್‌ನ ಇತರೆ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ಆಪ್ಟೆ, ಪ್ರಾಚಿ ದೇಸಾಯಿ, ವಿಂದು ಧಾರಾ ಸಿಂಗ್‌, ರೋಹಿತ್‌ ರಾಯ್‌ ನಟಿಸುತ್ತದಾರೆ. ಇದೇ ಶೀರ್ಷಿಕೆಯಡಿ ತಯಾರಾಗಿ ಯಶಸ್ಸು ಕಂಡಿದ್ದ ಮಲಯಾಳಂ ಸಿನಿಮಾದ ರೀಮೇಕಿದು. ಚಿತ್ರದಲ್ಲಿ ವಿಕ್ರಾಂತ್‌ ಫೊರೆನ್ಸಿಕ್‌ ಅಫೀಸರ್‌ ಪಾತ್ರ ನಿರ್ವಹಿಸುತ್ತಿದ್ದರೆ, ರಾಧಿಕಾ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. “ವಿಕ್ರಾಂತ್‌ ಮತ್ತು ರಾಧಿಕಾ ಅವರಂತಹ ಪ್ರತಿಭಾವಂತ ಕಲಾವಿದರಿಂದಾಗಿ ಈ ಸಿನಿಮಾ ಚೆನ್ನಾಗಿ ರೂಪುಗೊಳ್ಳಲಿದೆ. ಈ ಥ್ರಿಲ್ಲರ್‌ ಕತೆಯಲ್ಲಿ ವೀಕ್ಷಕರ ಕುತೂಹಲ ಕೆರಳಿಸುವಂತಹ ಸಾಕಷ್ಟು ಅಂಶಗಳಿರುತ್ತವೆ” ಎಂದಿದ್ದಾರೆ ನಿರ್ದೇಶಕ ವಿಶಾಲ್‌ ಫುರಿಯಾ. ಮಾನಸಿ ಬಾಗ್ಲಾ, ವರುಣ್‌ ಬಾಗ್ಲಾ ಮತ್ತು ದೀಪಕ್‌ ಮುಕುಟ್‌ ನಿರ್ಮಾಣದ ಸಿನಿಮಾ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

‘Forensic’ ಮಲಯಾಳಂ ಸಿನಿಮಾದ ಟ್ರೈಲರ್‌

LEAVE A REPLY

Connect with

Please enter your comment!
Please enter your name here