‘ಬಾಹುಬಲಿ’ ಖ್ಯಾತಿಯ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘RRR ಸಿನಿಮಾದ ಕರ್ನಾಟಕ ವಿತರಣೆ ಹಕ್ಕುಗಳನ್ನು ಕೆವಿಎನ್‌ ಖರೀದಿಸಿದೆ. ಈಗಾಗಲೇ ಪೋಸ್ಟರ್, ಮೇಕಿಂಗ್, ಟೀಸರ್ ಹಾಗೂ ಸಾಂಗ್‌ಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವನ್ನು ಬೆಳ್ಳಿತೆರೆಯ ಮೇಲೆ ನೋಡಲು ಸಿನಿಪ್ರಿಯರು ಉತ್ಸುಕರಾಗಿದ್ದಾರೆ.

ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಬಾಲಿವುಡ್ ತಾರೆಯರಾದ ಅಜಯ್ ದೇವಗನ್, ಅಲಿಯಾ ಭಟ್… ದೊಡ್ಡ ತಾರಾಬಳಗದ ‘RRR’ ಮೂಲ ತೆಲುಗು ಸೇರಿದಂತೆ ಕನ್ನಡ, ಹಿಂದಿ,‌ತಮಿಳು ಹಾಗೂ‌ ಮಾಲಯಾಳಂ ಭಾಷೆಯಲ್ಲಿ‌ ತೆರೆಕಾಣಲಿದೆ. ಪಂಚ ಭಾಷೆಯಲ್ಲಿ ತೆರೆಗೆ ಬರುತ್ತಿರುವ ಸಿನಿಮಾದ‌ ಕರ್ನಾಟಕ ಡಿಸ್ಟ್ರಿಬ್ಯೂಷನ್ ಹಕ್ಕು‌ ಕೆವಿಎನ್ ಪ್ರೊಡಕ್ಷನ್ ಹೌಸ್‌ ತೆಕ್ಕೆಗೆ ಸೇರ್ಪಡೆಯಾಗಿದೆ. ರಾಜ್ಯಾದ್ಯಂತ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ಕೆವಿಎನ್ ಪ್ರೊಡಕ್ಷನ್ ಹೊತ್ತುಕೊಂಡಿದೆ. ಈಗಾಗಲೇ ಕೆವಿಎನ್ ಪ್ರೊಡಕ್ಷನ್ ಹೌಸ್‌ನಿಂದ ‘ಸಖತ್’, ‘ಬೈ‌ ಟು‌‌ ಲವ್’ ಸಿನಿಮಾಗಳಲ್ಲದೆ ನಿಖಿಲ್ ಕುಮಾರಸ್ವಾಮಿ ಮತ್ತು ಧ್ರುವ ಸರ್ಜಾರ ಒಂದೊಂದು ಸಿನಿಮಾ ತಯಾರಾಗುತ್ತಿವೆ. ಈ ಸಿನಿಮಾಗಳ ನಿರ್ಮಾಣದ‌ ಜೊತೆಗೆ ವಿತರಣೆಯಲ್ಲೂ ಕೆವಿಎನ್‌ ಪ್ರಾಬಲ್ಯ ಸಾಧಿಸಿದೆ.

ಇನ್ನು ಮೊನ್ನೆಯಷ್ಟೇ ಬಿಡುಗಡೆಯಾದ ‘RRR’ ಚಿತ್ರದ ‘ನಾಟ್ಟು ನಾಟ್ಟು’ ಸಾಂಗ್ ಸಾಕಷ್ಟು ಸುದ್ದಿ ಮಾಡಿದೆ. ರಾಮ್ ಚರಣ್ ಹಾಗೂ ತಾರಕ್ ಭರ್ಜರಿ ಸ್ಟೆಪ್ಸ್ ಜೊತೆಗೆ ಕೀರವಾಣಿ‌ ಮ್ಯೂಸಿಕ್‌ಗೆ ವೀಕ್ಷಕರು ತಲೆದೂಗಿದ್ದಾರೆ. ಮುನ್ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಬ್ರಿಟಿಷ್‌ ನಟಿ ಒಲಿವಿಯಾ ಮೊರಿಸ್, ಹಾಲಿವುಡ್ ನಟ ರೇ ಸ್ಟೀವನ್‌ಸನ್‌, ಐರಿಷ್ ನಟ ಅಲಿಸನ್ ಡೂಡಿ ನಟಿಸಿದ್ದಾರೆ. ತೆಲುಗು ಬುಡಕಟ್ಟು ನಾಯಕರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮಾರಂ ಭೀಮ್‌ ಅವರ ಕತೆಗಳಿಗೆ ಕಲ್ಪನೆ ಬೆರೆಸಿ ಮಾಡುತ್ತಿರುವ ಸಿನಿಮಾ ‘RRR’. ರಾಮ್ ಚರಣ್ ಅವರು ಅಲ್ಲೂರಿ ಸೀತಾರಾಮ ಪಾತ್ರದಲ್ಲಿದ್ದರೆ ಜ್ಯೂನಿಯರ್ ಎನ್‌ಟಿಆರ್ ಕೊಮಾರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. 2022ರ ಜನವರಿ 7ರಂದು ಸಿನಿಮಾ ತೆರೆಕಾಣಲಿದೆ.

Previous articleಥಿಯೇಟರ್‌ನಲ್ಲಿ ಮೋಹನ್‌ ಲಾಲ್‌ ‘ಮರಕ್ಕರ್’ ಸಿನಿಮಾ; ಕೇರಳ ಸಚಿವ ಸಾಜಿ ಚೆರಿಯನ್ ಸಂಧಾನ ಯಶಸ್ವಿ
Next articleಟೀಸರ್ | ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ‘ಆರ್ಯ2’; ರಾಮ್ ಮಾಧ್ವಾನಿ ನಿರ್ದೇಶನದಲ್ಲಿ ಸುಷ್ಮಿತಾ ಸೇನ್

LEAVE A REPLY

Connect withPlease enter your comment!
Please enter your name here