ರಿಷಭ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ಕಾಮಿಡಿ ಸಿನಿಮಾ ಎನ್ನುವ ಪರಿಚಯ ಸಿಗುತ್ತದೆ. ಸಿನಿಮಾ ನಿರ್ದೇಶಕನಾಗುವ ಕನಸು ಕಾಣುವ ಮಧ್ಯಮವರ್ಗದ ಯುವಕನ ಪಡಿಪಾಟಲು ಚಿತ್ರದ ಕಥಾವಸ್ತು.

“ಸಿನಿಮಾ ನಿರ್ದೇಶಕನಾಗುವ ಆಸೆಹೊತ್ತ ಮಧ್ಯಮವರ್ಗದ ಯವಕನೊಬ್ಬನ ಸುತ್ತ ನಡೆಯುವ ಕಥೆಯಿದು. ಇದರಲ್ಲಿ ನಾನು ಗಿರಿಕೃಷ್ಣ ಹೆಸರಿನ ಪಾತ್ರ ಮಾಡಿದ್ದೇನೆ. ಗಿರಿ ಅಂದರೆ ನನ್ನೊಬ್ಬನ ಹೆಸರಲ್ಲ. ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ‘ಗಿರಿ’ಗಳ ಸಂಗಮವಾಗಿದೆ” ಎಂದರು ರಿಷಭ್ ಶೆಟ್ಟಿ. ಅವರ ಸಿನಿಮಾ ‘ಹರಿಕಥೆ ಅಲ್ಲ ಗಿರಿಕಥೆ’ ಮುಂದಿನ ವಾರ ತೆರೆಕಾಣುತ್ತಿದೆ. ಇದೊಂದು ಕಾಮಿಡಿ ಸಿನಿಮಾ ಎನ್ನುವುದು ಟ್ರೈಲರ್‌ನಲ್ಲೇ ಗೊತ್ತಾಗುತ್ತದೆ. ಈ ಹಿಂದೆ ‘ಕಥಾಸಂಗಮ’ ಚಿತ್ರದಲ್ಲಿ ರಿಷಬ್‌ ಅವರೊಂದಿಗೆ ಕೆಲಸ ಮಾಡಿದ್ದ ಅನಿರುದ್ಧ್‌ ಮಹೇಶ್‌ ಮತ್ತು ಕರಣ್‌ ಅನಂತ್‌ ನಿರ್ದೇಶಿಸಿರುವ ಚಿತ್ರವಿದು. ರಚನಾ ಇಂದರ್‌ ಮತ್ತು ತಪಸ್ವಿನಿ ಚಿತ್ರದ ಇಬ್ಬರು ನಾಯಕಿಯರು. ನಿರ್ಮಾಪಕ ಸಂದೇಶ ನಾಗರಾಜ್‌ ಅವರು ಮಾತನಾಡಿ, “ಎಲ್ಲಾ ಜವಾಬ್ದಾರಿಯನ್ನು ರಿಷಬ್‌ ಅವರಿಗೆ ಕೊಟ್ಟಿದ್ದೇನೆ. ಅವರ ಸಹಯೋಗದೊಂದಿಗೆ ಚಿತ್ರ ನಿರ್ಮಾಣವಾಗಿದೆ” ಎನ್ನುತ್ತಾರೆ. ಜಯಣ್ಣ ರಾಜ್ಯಾದ್ಯಂತ ಸಿನಿಮಾ ಹಂಚಿಕೆ ಮಾಡುತ್ತಿದ್ದಾರೆ. ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಮೋದ್‌ ಶೆಟ್ಟಿ, ದಿನೇಶ್‌ ಮಂಗಳೂರು ಇತರೆ ಪ್ರಮುಖ ಪಾತ್ರಧಾರಿಗಳು. ವಾಸುಕಿ ವೈಭವ್ ಸಂಗೀತ, ರಂಗನಾಥ್ – ಚಂದ್ರಶೇಖರ್ ಛಾಯಾಗ್ರಹಣ, ಭರತ್ – ಪ್ರದೀಪ್ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here