ಅಯಾನ್‌ ಮುಖರ್ಜಿ ನಿರ್ದೇಶನದ ಬಹುನಿರೀಕ್ಷಿತ ‘ಬ್ರಹ್ಮಾಸ್ತ್ರ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ರಣಬೀರ್‌ ಕಪೂರ್‌ ಮತ್ತು ಅಲಿಯಾ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದು ಅಮಿತಾಭ್‌ ಬಚ್ಚನ್‌, ನಾಗಾರ್ಜುನ, ಮೌನಿ ರಾಯ್‌ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು CGI, VFX ಸಿನಿಮಾ ಎನ್ನುವುದು ಟ್ರೈಲರ್‌ನಲ್ಲೇ ತೋರುತ್ತದೆ.

‘ಬ್ರಹ್ಮಾಸ್ತ್ರ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮೂರು ನಿಮಿಷಗಳ ಟ್ರೈಲರ್‌ ತುಂಬಾ ಭರ್ಜರಿ VFX ಇದೆ. ನಿರ್ದೇಶಕ ಅಯಾನ್‌ ಮುಖರ್ಜಿ ಇಲ್ಲಿ ಸೂಪರ್‌ಹೀರೋಗಳ ಯೂನಿವರ್ಸ್‌ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಒಂದೆಡೆ ಜಗತ್ತನ್ನು ನಾಶ ಪಡಿಸಲು ಅಸ್ತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಖಳರು, ಮತ್ತೊಂದೆಡೆ ಜಗತ್ತಿನ ರಕ್ಷಣೆಗೆ ನಿಂತ ಹೀರೋಗಳ ಎಂದಿನ ಕತೆಗೆ ನಿರ್ದೇಶಕರು CGI ಮೆರುಗು ನೀಡಿರುವಂತಿದೆ. ಆರಂಭದಲ್ಲಿ ಪಕ್ಕದ್ಮನೆ ಹುಡುಗನಂತೆ ಪರಿಚಯವಾಗುವ ರಣಬೀರ್‌ ಕಪೂರ್‌ ಟ್ರೈಲರ್‌ ಸಾಗುತ್ತಿದ್ದಂತೆ ವಿಶೇಷ ಶಕ್ತಿಯುಳ್ಳ ಯುವಕನಾಗಿ ಕಾಣಿಸುತ್ತಾರೆ. ಅಲಿಯಾ ಭಟ್‌, ಅಮಿತಾಭ್‌ ಬಚ್ಚನ್‌, ನಾಗಾರ್ಜು, ಮೌನಿ ರಾಯ್‌ ಪಾತ್ರಗಳೂ ಪರಿಚಯವಾಗುತ್ತವೆ. ಅತಿಥಿ ಪಾತ್ರವೊಂದಲ್ಲಿ ಶಾರುಖ್‌ ಖಾನ್‌ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆತ್ತು. ಟ್ರೈಲರ್‌ನಲ್ಲಿ ವಿಶೇಷ ಪಾತ್ರವೊಂದರ ಚಿತ್ರಣ ಇದೆಯಾದರೂ, ಮುಖ ಪರಿಚಯ ಸಿಗುವುದಿಲ್ಲ. ಬಹುಶಃ ಇದು ಶಾರುಖ್‌ ಇರಬಹುದು. 3Dಯಲ್ಲಿ ಸಿನಿಮಾ ತೆರೆಕಾಣಲಿದ್ದು, ಟ್ರೈಲರ್‌ ಸಾಕಷ್ಟು ನಿರೀಕ್ಷೆಯನ್ನಂತೂ ಹುಟ್ಟುಹಾಕಿದೆ. ಸೆಪ್ಟೆಂಬರ್‌ 9ರಂದು ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous articleಸಿಬಿಐ‌ ವಿಚಾರಣಾ ವಿಧಾನಕ್ಕೆ ಬದ್ಧವಾಗಿದೆ ‘ಸಿಬಿಐ 5’
Next article‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್‌; ಜೂನ್‌ 23ಕ್ಕೆ ರಿಷಭ್ ಶೆಟ್ಟಿ ಸಿನಿಮಾ ತೆರೆಗೆ

LEAVE A REPLY

Connect withPlease enter your comment!
Please enter your name here