ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣ ನಿರ್ವಾಹಕರಾಗಿ ಗುರುತಿಸಿಕೊಂಡಿರುವ ಗಂಗು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ಹತ್ಯ’. ನೈಜ ಕ್ರೈಂ ಘಟನೆಗಳನ್ನು ಆಧರಿಸಿದ ಕಥಾವಸ್ತು. ಇದೇ ತಿಂಗಳ ಕೊನೆಗೆ ಸಿನಿಮಾ ತೆರೆಕಾಣಲಿದೆ.

ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ನಿರ್ಮಾಣ ನಿರ್ವಾಹಕರಾಗಿ ದುಡಿದವರು ಗಂಗಾಧರ್‌. ಸಿನಿಮಾ ವಲಯದಲ್ಲಿ ಅವರು ‘ಗಂಗು’ ಎಂದೇ ಪರಿಚಿತರು. ಈ ಹಿಂದೆ ಕೆಲವು ಸಿನಿಮಾಗಳನ್ನೂ ಅವರು ನಿರ್ಮಿಸಿದ್ದರು. ರಮೇಶ್‌ ಅರವಿಂದ್‌ ಅಭಿನಯದ ‘ತುಂತುರು’ ಸಿನಿಮಾಗೆ ಚಿತ್ರಕಥೆ ರಚಿಸಿದ್ದಾರೆ. ಇದೀಗ ‘ಹತ್ಯ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಮಾನಮನಸ್ಕ ಸ್ನೇಹಿತರು ಜೊತೆಗೂಡಿ ಈ ಸಿನಿಮಾ ನಿರ್ಮಿಸಿದ್ದಾರೆ. ತಮ್ಮ ಪುತ್ರ ‘ವರುಣ್‌’ ಹೆಸರಿನಡಿ ನಿರ್ದೇಶಿಸಿ, ನಿರ್ಮಿಸಿ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ‘ಇದು ನನ್ನ ನಿರ್ದೇಶನದ ಮೊದಲ ಚಿತ್ರ. ದೇಶದ ವಿವಿಧೆಡೆ ನಡೆದ ಕ್ರೈಂ ಘಟನೆಗಳನ್ನು ಆಧರಿಸಿ ಕತೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದೇನೆ. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಹತ್ತಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ಮಾಣ ನಿರ್ವಹಣೆ ಮಾಡಿದ್ದೇನೆ. ಹತ್ತಿರದಿಂದ ಅವರ ನಿರ್ದೇಶನ ನೋಡಿದ್ದೇನೆ. ನಿರ್ದೇಶಕನಾಗಲು ಅವರೇ ಸ್ಪೂರ್ತಿ’ ಎನ್ನುತ್ತಾರೆ ಗಂಗು. ವಿಕಾಸ್‌ ಗೌಡ ನಾಯಕನಟನಾಗಿ ಅಭಿನಯಿದ್ದು, ಮುಂಬೈ ಮೂಲದ ನಟಿ ಕೊಮಿಕಾ ಆಂಚಲ್‌ ಚಿತ್ರದ ಹಿರೋಯಿನ್‌. ಸಂತೋಷ್ ಮೇದಪ್ಪ, ಸೋಮನ್ , ವರುಣ್ ಇತರೆ ಪ್ರಮುಖ ಕಲಾವಿದರು. ಪಿ ಕೆ ಹೆಚ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ. ಇದೇ ತಿಂಗಳ ಕೊನಗೆ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

LEAVE A REPLY

Connect with

Please enter your comment!
Please enter your name here