ಬಾಲಿವುಡ್‌ಗೆ 2024, ಮಿಶ್ರಫಲ ದಾಖಲಿಸಿದ ವರ್ಷ. ಕೆಲವು ಸಿನಿಮಾಗಳು ಉತ್ತಮ storytelling ನಿಂದಾಗಿ ಗಮನ ಸೆಳೆದರೆ, ಮತ್ತೆ ಕೆಲವು ಪ್ರಯೋಗಗಳು ಉತ್ತಮ ಗ್ರಾಫಿಕ್ಸ್‌ ಮತ್ತು VFXನಿಂದಾಗಿ ಗುರುತಿಸಿಕೊಂಡವು. ಬಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ ಐದು ಸಿನಿಮಾಗಳ ಪಟ್ಟಿ ಇಲ್ಲಿದೆ.

ಕಲ್ಕಿ 2898 AD | ನಿರ್ಮಾಣ – ವೈಜಯಂತಿ ಮೂವೀಸ್‌ | ನಾಗ್‌ ಅಶ್ವಿನ್‌ ನಿರ್ದೇಶನದ ಪೌರಾಣಿಕ ಸೈಂಟಿಫಿಕ್‌ – ಫಿಕ್ಷನ್‌ ಸಿನಿಮಾ. ಅಮಿತಾಭ್‌ ಬಚ್ಚನ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. VFX ಮತ್ತು CGI ಗುಣಮಟ್ಟದಿಂದ ಗಮನ ಸೆಳೆದ ಪ್ರಯೋಗ. ಚಿತ್ರದ ಒಟ್ಟಾರೆ ವಹಿವಾಟು 1,100 ಕೋಟಿ ರೂಪಾಯಿ ದಾಟಿದೆ ಎನ್ನುವ ಅಂದಾಜಿದೆ. ವಿದೇಶಗಳಲ್ಲಿ ಸಿನಿಮಾ ಉತ್ತಮ ಗಳಿಕೆ ಮಾಡಿತು. ಅತಿ ಹೆಚ್ಚು ಗಳಿಕೆ ದಾಖಲಿಸಿದ ಏಳನೇ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ.

ಸ್ತ್ರೀ 2 | Maddock Films | ರಾಜಕುಮಾರ್‌ ರಾವ್‌ ಮತ್ತು ಶ್ರದ್ಧಾ ಕಪೂರ್‌ ನಟನೆಯ ‘ಸ್ತ್ರೀ 2’ 2024ರಲ್ಲಿ ಬಾಲಿವುಡ್‌ನ ದೊಡ್ಡ ಅಚ್ಚರಿ. ನೂರು ಕೋಟಿ ಆಸುಪಾಸಿನ ಬಜೆಟ್‌ನಲ್ಲಿ ತಯಾರಾದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಡೆಸಿದ್ದು 875 ಕೋಟಿ ರೂಪಾಯಿ ವಹಿವಾಟು. ಸರಳ ಕತೆಯ ಹಾರರ್‌ – ಕಾಮಿಡಿ ಚಿತ್ರವನ್ನು ಹಿಂದಿ ಭಾಷಿಕರು ಮಾತ್ರವಲ್ಲದೆ ದಕ್ಷಿಣ ಭಾರತದ ಪ್ರೇಕ್ಷಕರೂ ಮೆಚ್ಚಿಕೊಂಡರು. 2018ರಲ್ಲಿ ತೆರೆಕಂಡ ‘ಸ್ತ್ರೀ’ ಸಿನಿಮಾದ ಸರಣಿಯಿದು. Maddock ಬ್ಯಾನರ್‌ supernatural universeನ ನಾಲ್ಕನೇ ಚಿತ್ರವಾಗಿ ಇದು ಗಮನ ಸೆಳೆಯಿತು. ಪಂಕಜ್‌ ತ್ರಿಪಾಠಿ, ಅಭಿಷೇಕ್‌ ಬ್ಯಾನರ್ಜಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಭೂಲ್‌ ಭುಲಯ್ಯಾ 3 | T-Series | ‘ಭೂಲ್‌ ಭುಲಯ್ಯಾ 2’ ಸಿನಿಮಾದ ಸರಣಿಯಾದ ಪಾರ್ಟ್‌ 3 ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡಲಿಲ್ಲ. ಅನೀಸ್‌ ಬಝ್ಮಿ ನಿರ್ದೇಶನದ ಈ ಸಿನಿಮಾದ ಹೀರೋ ಕಾರ್ತೀಕ್‌ ಆರ್ಯನ್‌. ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 422 ಕೋಟಿ ರೂಪಾಯಿ ವಹಿವಾಟು ನಡೆಸಿತು. ಮಾಧುರಿ ದೀಕ್ಷಿತ್‌, ವಿದ್ಯಾ ಬಾಲನ್‌, ತ್ರಿಪ್ತಿ ದಿಮ್ರಿ ಚಿತ್ರದ ಇತರೆ ಪ್ರಮುಖ ಕಲಾವಿದರು.

ಸಿಂಗಂ ಎಗೈನ್‌ | Jio Platforms | ರೋಹಿತ್‌ ಶೆಟ್ಟಿ ನಿರ್ದೇಶನದ ‘cop universe’ ಸಿನಿಮಾ ‘ಸಿಂಗಂ ಎಗೈನ್‌’ ಬಾಕ್ಸ್‌ ಅಫೀಸ್‌ನಲ್ಲಿ ಸದ್ದು ಮಾಡಿತು. ‘ಬಾಜಿರಾವ್‌ ಸಿಂಗಂ’ ಪಾತ್ರದಲ್ಲಿ ಅಜಯ್‌ ದೇವಗನ್‌ ಆಕ್ಷನ್‌ ಸನ್ನಿವೇಶಗಳಲ್ಲಿ ಮಿಂಚಿದರು. ಈ ಆಕ್ಷನ್‌ – ಪಾಕ್ಡ್‌ ಮೂವೀ ಬಾಕ್ಸ್‌ ಆಫೀಸ್‌ನಲ್ಲಿ 300 ಕೋಟಿಗೂ ಹೆಚ್ಚು ವಹಿವಾಟು ದಾಖಲಿಸಿತು. ಕರೀನಾ ಕಪೂರ್‌, ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ರಣ್ವೀರ್‌ ಸಿಂಗ್‌, ದೀಪಿಕಾ ಪಡುಕೋಣೆ ಚಿತ್ರದ ಇತರೆ ಪ್ರಮುಖ ಕಲಾವಿದರು. ರೋಹಿತ್‌ ಶೆಟ್ಟಿಯವರ ‘larger-than-life cop universe’ ಸಿನಿಮಾ ‘ಭೂಲ್‌ ಭುಲಯ್ಯಾ 3’ಗೆ ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಪೈಪೋಟಿ ನೀಡಿತು.

ಪುಷ್ಪ 2 | Mythri Movie Makers | ಸುಕುಮಾರ್‌ ನಿರ್ದೇಶನದ ತೆಲುಗು ಸಿನಿಮಾ ‘ಪುಷ್ಪ 2’ ಹಿಂದಿ ಅವತರಣಿಕೆ ಗಳಿಸಿದ್ದು ಬರೋಬ್ಬರಿ 750 ಕೋಟಿ ರೂಪಾಯಿ. ಇದು ಈ ವರ್ಷದ ಬಾಲಿವುಡ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯ್ತು. ಉತ್ತರ ಭಾರತದ ಪ್ರೇಕ್ಷಕರು ಚಿತ್ರವನ್ನು ಮುಗಿಬಿದ್ದು ವೀಕ್ಷಿಸಿದರು. ಇಲ್ಲಿಯವರೆಗೆ ಈ ಚಿತ್ರದ ಒಟ್ಟಾರೆ ವಹಿವಾಟು 1750 ಕೋಟಿ ದಾಟಿದೆ ಎನ್ನಲಾಗಿದೆ. ಅಲ್ಲು ಅರ್ಜುನ್‌ ನಟನೆಯ ‘ಪುಷ್ಪ2’ ಸಿನಿಮಾ ಹಿಂದಿ ಪ್ರೇಕ್ಷಕರ ನಿರೀಕ್ಷೆಯನ್ನು ಸರಿಗಟ್ಟಿತು. ಈ ಮೂಲಕ ದಕ್ಷಿಣ ಮಾಸ್‌ ಸಿನಿಮಾಗಳಿಗೆ ಉತ್ತರದಲ್ಲಿ ಬಹು ಬೇಡಿಕೆಯಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಯ್ತು.

LEAVE A REPLY

Connect with

Please enter your comment!
Please enter your name here