ಹ್ಯಾಪನಿಂಗ್‌ ಬಾಲಿವುಡ್‌ ಹೀರೋ ಕಾರ್ತೀಕ್‌ ಆರ್ಯನ್‌ ಮತ್ತು ಕೀರಾ ಅಡ್ವಾನಿ ಅಭಿನಯದ ‘ಸತ್ಯಪ್ರೇಮ್‌ ಕಿ ಕಥಾ’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹಾಡು, ನೃತ್ಯ, ತಮಾಷೆಯ ಸನ್ನಿವೇಶಗಳು ಚಿತ್ರದಲ್ಲಿವೆ. ಈ ಮೂಲಕ ಇದೊಂದು ಫೀಲ್‌ ಗುಡ್‌ ಲವ್‌ ಸಿನಿಮಾ ಆಗಿರಲಿದೆ ಎನ್ನುವುದು ಟೀಸರ್‌ನಲ್ಲಿ ತಿಳಿದುಬರುತ್ತದೆ.

ಸಮೀರ್‌ ವಿದ್ವಾನ್ಸ್‌ ನಿರ್ದೇಶನದ ‘ಸತ್ಯಪ್ರೇಮ್‌ ಕಿ ಕಥಾ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾನಿ ಮುಖ್ಯಭೂಮಿಕೆಯ ಕಲಾವಿದರು. ಕಿಯಾರ ವಿವಾಹದ ನಂತರ ತೆರೆಕಾಣುತ್ತಿರುವ ಮೊದಲ ಚಿತ್ರವಿದು. ಕಾರ್ತಿಕ್ ಸಂಭಾಷಣೆಯಿಂದ ಟೀಸರ್‌ ಪ್ರಾರಂಭವಾಗಿ ತನ್ನ ಮನಸ್ಥಿತಿ ತಿಳಿಸುವುದನ್ನು ಕಾಣಬಹುದು. ಕಾರ್ತೀಕ್‌ – ಕಿಯಾರ ಪ್ರೀತಿಯ ಸನ್ನಿವೇಶಗಳು, ಆನಂದಬಾಷ್ಪ, ದುಃಖದ ಕಣ್ಣೀರಿನ ದೃಶ್ಯಗಳು ಟೀಸರ್‌ನಲ್ಲಿವೆ. ಚಿತ್ರದ ‘ಆಜ್‌ ಕೆ ಬಾದ್‌ ತು ಮೇರಿ ರೆಹನಾ’ ಹಾಡಿನ ಟ್ಯೂನ್‌ ಸಹ ಕೇಳಿಬಂದಿದೆ ಹಾಗೂ ಅದ್ಧೂರಿ ಮದುವೆ ದಿಬ್ಬಣದಲ್ಲಿ ನಾಯಕ – ನಾಯಕಿ ಸುಂದರ ಕ್ಷಣಗಳನ್ನು ಆನಂದಿಸಿದ್ದಾರೆ.

Instgram ರೀಲ್ಸ್‌ನಲ್ಲಿ ಕ್ಲಿಪ್ ಹಂಚಿಕೊಂಡ ಕಾರ್ತಿಕ್, ‘ಆನ್ಸೂ ಉಸ್ಕೆ ಹೋ.. ಪಾರ್.. ಆಂಖೇನ್ ಮೇರಿ ಹೋ’ ಎಂದು ಬರೆದಿದ್ದಾರೆ. ಕಾರ್ತಿಕ್ ಮತ್ತು ಕಿಯಾರಾ ಅಡ್ವಾನಿ ಪರ್ವತಗಳಲ್ಲಿ ಬೈಕ್ ರೈಡ್‌ಗೆ ಹೋದಾಗ, ಕಾಶ್ಮೀರದಲ್ಲಿ ಶಿಕಾರಾ (ಸಾಂಪ್ರದಾಯಿಕ ದೋಣಿ) ಮೇಲೆ ಒಟ್ಟಿಗೆ ಪೊಟೋಗೆ ಪೋಸ್ ನೀಡಿರುವ ಕ್ಲಿಪ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದರು. ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳಲ್ಲಿ ಕಾತರತೆ ಸೃಷ್ಟಿಸಿದೆ. ಕರಣ್‌ ಶ್ರೀಕಾಂತ್‌ ಶರ್ಮಾ ಚಿತ್ರಕಥೆ ರಚಿಸಿದ್ದು, ಸಮೀರ್‌ ವಿದ್ವಾನ್ಸ್‌ ಚಿತ್ರ ನಿರ್ದೇಶಿಸಿದ್ದಾರೆ. ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ತಯಾರಾಗಿರುವ ಸಿನಿಮಾ ಜೂನ್ 29ರಂದು ಬಿಡುಗಡೆಯಾಗಲಿದೆ.

Previous articleಬೆಳ್ಳಿತೆರೆ ಮೇಲೆ ಸಾಕಾರಗೊಂಡ ಪೂಚಂತೇ ಆಶಯ
Next article‘Mission Impossible-Dead Reckoning -1’ ಟ್ರೈಲರ್‌ | ಟಾಮ್‌ ಕ್ರ್ಯೂಸ್‌ ಆಕ್ಷನ್‌ – ಥ್ರಿಲ್ಲರ್‌ ಮೂವೀ

LEAVE A REPLY

Connect with

Please enter your comment!
Please enter your name here