60, 70ರ ದಶಕಗಳ ಜನಪ್ರಿಯ ಹಾಲಿವುಡ್ ನಟಿ, UK ಮಾಜಿ ಸಂಸದೆ ಗ್ಲೆಂಡಾ ಜಾಕ್ಸನ್ ನಿಧನರಾಗಿದ್ದಾರೆ. ರಂಗಭೂಮಿ ಮೂಲಕ ನಟನಾ ಬದುಕಿಗೆ ಪ್ರವೇಶಿಸಿದ ಗ್ಲೆಂಡಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ.
ಹಾಲಿವುಡ್ ನಟಿ, UK ಮಾಜಿ ಸಂಸದೆ Glenda Jackson (87) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಎರಡು ಬಾರಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದಿದ್ದ ನಟಿ ರಾಜಕಾರಣದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹುಟ್ಟಿದ್ದು 1936ರ ಮೇ 9ರಂದು ಇಂಗ್ಲೆಡ್‌ನ Birkenheadನಲ್ಲಿ. 1957ರ ಸುಮಾರಿಗೆ ರಂಗಭೂಮಿ ಮೂಲಕ ನಟನಾ ಬದುಕಿಗೆ ಪದಾರ್ಪಣೆ ಮಾಡಿದ ಗ್ಲೆಂಡಾ ಪ್ರಸಿದ್ಧ ನಿರ್ದೇಶಕ ಪೀಟರ್ ಬ್ರೂಕ್ ಅವರ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೆಚ್ಚಾಗಿ ಗಂಭೀರ ಪಾತ್ರಗಳಲ್ಲಿ ಅಭಿನಯಿಸಿರುವ ನಟಿ ಮೂರು ಬಾರಿ Emmy ಪ್ರಶಸ್ತಿ, Tony ಪ್ರಶಸ್ತಿ, ಅಮೇರಿಕಾದ Triple crown of Acting ಗೌರವಕ್ಕೆ ಪಾತ್ರರಾಗಿದ್ದಾರೆ.
‘ಸಂಡೆ ಬ್ಲಡಿ ಸಂಡೆ’ (1971) ಚಿತ್ರದ ಪ್ರಮುಖ ಪಾತ್ರಕ್ಕಾಗಿ ಗ್ಲೆಂಡಾ ಅತ್ಯುತ್ತಮ ನಟಿ BAFTA ಪ್ರಶಸ್ತಿ ಪಡೆದಿದ್ದಾರೆ. ‘ಮೇರಿ, ಕ್ವೀನ್ ಆಫ್ ಸ್ಕಾಟ್ಸ್'(1971), ‘ಹೆಡ್ಡಾ’ (1975), ‘ದಿ ಇನ್‌ಕ್ರೆಡಿಬಲ್ ಸಾರಾ’ (1976), ‘ಹಾಪ್‌ಸ್ಕಾಚ್’ (1980) ಅವರ ಕೆಲವು ಮಹತ್ವದ ಸಿನಿಮಾಗಳು. BBC ಚಾನಲ್‌ನ ರಾಣಿ ಎಲಿಜಬೆತ್‌ರ ಪಾತ್ರಕ್ಕಾಗಿ ಅವರು ಪ್ರೈಮ್‌ಟೈಮ್ Emmy ಪ್ರಶಸ್ತಿ ಹಾಗೂ ‘ಎಲಿಜಬೆತ್ ಆರ್’ (1971), ‘ಎಲಿಜಬೆತ್ ಈಸ್ ಮಿಸ್ಸಿಂಗ್’ (2019) ಸರಣಿಗಳಲ್ಲಿನ ಅಭಿನಯಕ್ಕಾಗಿ, ಬ್ರಿಟಿಷ್ ಅಕಾಡೆಮಿ ಟೆಲಿವಿಷನ್ – ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟನೆಗಾಗಿ Emmy ಪ್ರಶಸ್ತಿ ಸಹ ಪಡೆದರು.
ಗ್ಲೆಂಡಾ ಜಾಕ್ಸನ್ 1960 – 70ರ ದಶಕಗಳ ಖ್ಯಾತ ಬ್ರಿಟಿಷ್ ತಾರೆಗಳಲ್ಲೊಬ್ಬರು. DH ಲಾರೆನ್ಸ್’ನ ‘ವುಮೆನ್ ಇನ್ ಲವ್’ ಮತ್ತು ‘ಎ ಟಚ್ ಆಫ್ ಕ್ಲಾಸ್’ ಚಿತ್ರಗಳಿಗಾಗಿ ಎರಡು ಬಾರಿ ಆಸ್ಕರ್ ಮುಡಿಗೇರಿಸಿಕೊಂಡಿದ್ದರು. ತದನಂತರ ರಾಜಕೀಯಕ್ಕೆ ತೆರಳಿ, ಸಂಸತ್ತಿಗೆ ಆಯ್ಕೆಯಾಗಿ, ಲೇಬರ್ ಪಕ್ಷದ ಶಾಸಕಿಯಾದ ಇವರು 23 ವರ್ಷಗಳ ಕಾಲ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಇದಾದ ಮೇಲೆ ಪುನಃ ನಟನೆಯತ್ತ ನಡೆದು ವಿಲಿಯಂ ಷೇಕ್ಸ್‌ಪಿಯರ್‌ನ ‘ಕಿಂಗ್ ಲಿಯರ್’ ಟ್ರಾಜೆಡಿಯಲ್ಲಿ ಶೀರ್ಷಿಕೆ ಪಾತ್ರವನ್ನು ಒಳಗೊಂಡಂತೆ ಕೆಲವು ಪ್ರಸಿದ್ದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ‘ದಿ ಗ್ರೇಟ್ ಎಸ್ಕೇಪರ್’ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ಗ್ಲೆಂಡಾ, ಮೈಕೆಲ್ ಕೇನ್‌ರೊಟ್ಟಿಗೆ ನಟಿಸಿದ್ದರು. ನಟಿಯ ಅಗಲಿಕೆಗೆ ಸಿನಿಮಾರಂಗ ಹಾಗೂ ರಾಜಕೀಯ ಕ್ಷೇತ್ರದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
“All men are fools and what makes them so is having beauty like what I have got”
— The Morecambe & Wise Archive 👓🌞♥️ (@eric_ernie_col) June 15, 2023
Glenda Jackson CBE
The Morecambe and Wise Show
1971 pic.twitter.com/jDyG208c07