ಅಮೆರಿಕ ಪ್ರವಾಸದಲ್ಲಿರುವ ನಟ ಯಶ್‌ ಅಲ್ಲಿ ಫ್ಯಾರ್ಮುಲಾ 1 ಚಾಂಪಿಯನ್‌ ಲೆವಿಸ್‌ ಹ್ಯಾಮಿಲ್ಟನ್‌, ಹಾಲಿವುಡ್‌ ಅಕ್ಷನ್‌ ಡೈರೆಕ್ಟರ್‌ JJ Perry ಮತ್ತು ಹಾಲಿವುಡ್‌ ನಟಿ ಎಲ್ಲಾ ಬಲಿನ್‌ಸ್ಕಾ ಅವರನ್ನು ಭೇಟಿ ಮಾಡಿದ್ದಾರೆ. ಇದು ನಟನ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

‘KGF 2’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ಯಶ್‌ ಮುಂದಿನ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ಸಿಗುತ್ತಿಲ್ಲ. ತಮಿಳು ನಿರ್ದೇಶಕ ಶಂಕರ್‌ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿಯೇನೋ ಇತ್ತು. ಆದರೆ ಇದು ಅಧಿಕೃತಗೊಂಡಿಲ್ಲ. ಈ ಮಧ್ಯೆ ಅಮೆರಿಕದಲ್ಲಿ F1 ಚಾಂಪಿಯನ್‌ ಲೆವಿಸ್‌ ಹ್ಯಾಮಿಲ್ಟನ್‌ ಅವರೊಂದಿಗಿನ ಯಶ್‌ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಫೋಟೊದಲ್ಲಿ ಹಾಲಿವುಡ್‌ ಅಕ್ಷನ್‌ ಡೈರೆಕ್ಟರ್‌ JJ Perry ಮತ್ತು ‘ರೆಸಿಡೆಂಟ್‌ ಎವಿಲ್‌’, ‘ಚಾರ್ಲ್ಸ್‌ ಏಂಜಲ್ಸ್‌’ ಸಿನಿಮಾ ಖ್ಯಾತಿಯ ಹಾಲಿವುಡ್‌ ನಟಿ ಎಲ್ಲಾ ಬಲಿನ್‌ಸ್ಕಾ ಕೂಡ ಇದ್ದಾರೆ.

ಮೊನ್ನೆ ನಟ ಯಶ್‌ ಸೋಷಿಯಲ್‌ ಮೀಡಿಯಾದಲ್ಲಿ Taran Tactical ನಲ್ಲಿನ ಶೂಟಿಂಗ್‌ ವೀಡಿಯೋ ಪೋಸ್ಟ್‌ ಮಾಡಿದ್ದರು. ಈ ವೀಡಿಯೋವನ್ನು, “There is always a way to reach the target, the challenge is to spot it!! Thank you my man @jjlocoperry , what a fantastic day!! Next time it’s gotta be Kalashnikov.” ಎನ್ನುವ ಕ್ಯಾಪ್ಶನ್‌ನೊಂದಿಗೆ ಹಾಲಿವುಡ್‌ ಆಕ್ಷನ್‌ ಡೈರೆಕ್ಟರ್‌ JJ Perry ಅವರಿಗೆ ಟ್ಯಾಗ್‌ ಮಾಡಿದ್ದರು. ಹಾಲಿವುಡ್ ಆಕ್ಷನ್‌ ಡೈರೆಕ್ಟರ್‌ Taran Butler ಒಡೆತನದ Taran Tactical ನಲ್ಲಿ ಆಕ್ಷನ್‌ ಸೀನ್‌ಗಳಲ್ಲಿ ಪಾಲ್ಗೊಳ್ಳುವ ನಟರಿಗೆ ತರಬೇತಿ ನೀಡಲಾಗುತ್ತದೆ. ಈ ಫೋಟೊ, ವೀಡಿಯೋ ಯಶ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ‘KGF’ ನಟ ಹಾಲಿವುಡ್‌ ಸಿನಿಮಾದಲ್ಲಿ ನಟಿಸಲಿದ್ದಾರೆಯೇ ಎನ್ನುವ ವದಂತಿಗಳು ಹರಡಿವೆ.

Previous articleಪೋಲಿ ಮಾತು ಮತ್ತು ಸಾಮಾಜಿಕ ಸಂದೇಶ
Next articleಗಂಧದ ಗುಡಿ ‘ಟ್ರೈಲರ್‌’ | ಅಪ್ಪು ಡ್ರೀಮ್‌ ಪ್ರಾಜೆಕ್ಟ್‌ ಅಕ್ಟೋಬರ್‌ 28ಕ್ಕೆ ತೆರೆಗೆ

LEAVE A REPLY

Connect with

Please enter your comment!
Please enter your name here