Route to EL-DORADO! ಶೀರ್ಷಿಕೆಯೊಂದಿಗೆ ‘KGF2’ ಸಿನಿಮಾದ ಛಾಯಾಗ್ರಹಣ ವಿಭಾಗದ BTS ವೀಡಿಯೋ ಬಿಡುಗಡೆಯಾಗಿದೆ. ಛಾಯಾಗ್ರಾಹಕ ಭುವನ್‌ ಗೌಡ ಅವರ ಸಹಾಯಕರ ಅನುಭವಗಳೊಂದಿಗಿನ ಈ ವೀಡಿಯೋ ಗಮನ ಸೆಳೆಯುತ್ತದೆ.

ಪ್ರಶಾಂತ್‌ ನೀಲ್‌ ಅವರ ‘KGF2’ ಕನಸಿಗೆ ಹೆಗಲುಕೊಟ್ಟ ಪ್ರಮುಖ ವಿಭಾಗ ಛಾಯಾಗ್ರಹಣ. ತೆರೆಯ ಮೇಲೆ ನರಾಚಿಯಂತಹ ಸೆಟ್‌ ಹಾಗೂ ಇತರೆ ಸನ್ನಿವೇಶಗಳನ್ನು ಕನ್ವಿನ್ಸಿಂಗ್‌ ಆಗಿ ತೋರಿಸುವುದು, ಸಿನಿಮಾದ ಪಾತ್ರಗಳನ್ನು ಪ್ರಭಾವಶಾಲಿಯಾಗಿ ಕಟ್ಟಿಕೊಡುವುದು ದೊಡ್ಡ ಸವಾಲು. ನೈಸರ್ಗಿಕ ವಿಕೋಪಗಳನ್ನು ಮೀರಿ ಕೆಲಸ ಮಾಡುವ ಸವಾಲನ್ನು ಖುಷಿಖುಷಿಯಾಗಿಯೇ ಸ್ವೀಕರಿಸಿದೆವು ಎನ್ನುತ್ತಾರೆ ಭುವನ್‌ ಅವರ ಸಹಾಯಕರು. ಇಂದು ಸಂಜೆ ಹೊಂಬಾಳೆ ಫಿಲ್ಮ್ಸ್‌ Route to EL-DORADO ಶೀರ್ಷಿಕೆಯೊಂದಿಗೆ DOP ವಿಭಾಗದ ಕೆಲಸಿದೆ. ಇದು ಮೊದಲ ಎಪಿಸೋಡು. ಮುಂದಿನ ದಿನಗಳಲ್ಲಿ ಎರಡನೇ ಎಪಿಸೋಡು ರಿಲೀಸ್‌ ಮಾಡುವುದು ಚಿತ್ರತಂಡದ ಯೋಜನೆ. ಈ ವೀಡಿಯೋದಲ್ಲಿ ಚಿತ್ರೀಕರಣ ಸಂದರ್ಭದ ಸಂಕಷ್ಟಗಳು, ತಂತ್ರಜ್ಞರು ಹಾಗೂ ಕಲಾವಿದರ ಶ್ರಮ, ಬದ್ಧತೆ ಕಾಣಿಸುತ್ತದೆ. ‘KGF2’ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಈ ವೀಡಿಯೋ ಮೆಚ್ಚಿ ಸಾವಿರಾರು ಸಂಖ್ಯೆಯಲ್ಲಿ ಹಂಚಿಕೊಂಡಿದ್ದಾರೆ.

Previous article‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಮೋಷನ್‌ ಪೋಸ್ಟರ್‌; ಮೇ 5ಕ್ಕೆ ಪ್ರೈಮ್‌ನಲ್ಲಿ
Next articleಗಾಳಿವಾನ: ಸಾಯಿಕುಮಾರ್ ಮನೋಜ್ಞ ಅಭಿನಯದ ಥ್ರಿಲ್ಲರ್‌ ಸರಣಿ

LEAVE A REPLY

Connect with

Please enter your comment!
Please enter your name here