ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ‘ಫೈಟರ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹೃತಿಕ್‌ ರೋಷನ್‌, ದೀಪಿಕಾ ಪಡುಕೋಣೆ, ಅನಿಲ್‌ ಕಪೂರ್‌ ಚಿತ್ರದ ಪ್ರಮುಖ ಪಾತ್ರಧಾರಿಗಳು. 2024ರ ಜನವರಿ 25ರಂದ ಸಿನಿಮಾ ತೆರೆಕಾಣಲಿದೆ.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಫೈಟರ್‌’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಹೃತಿಕ್ ಮತ್ತು ದೀಪಿಕಾ ವಾಯು ಪಡೆಯ ಸಮವಸ್ತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ ಮಿನಲ್ ರಾಥೋಡ್ (ದೀಪಿಕಾ) ಮತ್ತು ‌ಶಂಶೇರ್ ಪಠಾನಿಯಾ (ಹೃತಿಕ್‌ ರೋಷನ್) ತಮ್ಮ ಜೆಟ್‌ಗಳಲ್ಲಿ ಆಕಾಶದೆತ್ತರಕ್ಕೆ ಹಾರುತ್ತಿರುವುದನ್ನು ತೋರಿಸಿದೆ. ಇದರ ಮಧ್ಯೆ ‘ಬೇಷರಮ್ ರಂಗ್’ ಮಾದರಿಯ ಹಾಡಿನ ಗ್ಲಿಂಪ್ಸಸ್ ಕೇಳಿಸುತ್ತದೆ. ಹೃತಿಕ್ ತನ್ನ ಜೆಟ್‌ನಿಂದ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಹಿನ್ನಲೆಯಲ್ಲಿ ಸುಜಲಾಮ್ ಸುಫಲಾಮ್ ಟ್ಯೂನ್ ಕೇಳಿಸುತ್ತದೆ.

ಚಿತ್ರವು ವಾಯು ಪಡೆಯ ಕುರಿತಾಗಿದ್ದು, ಇವರೆಲ್ಲರೂ ಭಾರತೀಯ ವಾಯುಪಡೆಯ ಏರ್ ಡ್ರಾಗನ್ಸ್ ಘಟಕದ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್ ಕಮಾಂಡಿಂಗ್ ಆಫೀಸರ್ ರಾಕಿ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ದೀಪಿಕಾ ಮತ್ತು ಹೃತಿಕ್ ರೋಷನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಲಾತ್ ಅಜೀಜ್ (ಹೃತಿಕ್ ರೋಷನ್ ಅವರ ತಂದೆಯ ಪಾತ್ರ) ಕರಣ್ ಸಿಂಗ್ ಗ್ರೋವರ್, ಮತ್ತು ಅಕ್ಷಯ್
ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಹುಸೇನ್‌ ದಲಾಲ್‌ ರಚಿಸಿದ್ದು, Viacom18 Studious ಮತ್ತು Marflix Pictures ನಿರ್ಮಿಸಿವೆ. ಸಿನಿಮಾ ಗಣರಾಜ್ಯೋತ್ಸವದ ಮುನ್ನಾದಿನ ಜನವರಿ 25, 2024ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here