ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್‌’ ಹಿಂದಿ ಸಿನಿಮಾ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಜಾಗತಿಕ ವಹಿವಾಟು 500 ಕೋಟಿ ರೂಪಾಯಿ ದಾಟಿದೆ ಎನ್ನುವುದು ಅಂದಾಜು. ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರುತ್ತಿರುವ ದಿನಗಳಲ್ಲೇ ನಿರ್ಮಾಪಕರು ಚಿತ್ರದ OTT ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್‌’ ಸಿನಿಮಾದ OTT ಸ್ಟ್ರೀಮಿಂಗ್‌ ದಿನಾಂಕ ನಿಗಧಿಯಾಗಿದೆ. ರಣ್‌ಬೀರ್‌ ಕಪೂರ್‌, ಅನಿಲ್‌ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್‌, ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಇದೇ ಡಿಸೆಂಬರ್‌ 1ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನಕ್ಕೆ 66.27 ಕೋಟಿ ರೂ., ಎರಡನೇ ದಿನ 71.46, ಮೂರನೇ ದಿನಕ್ಕೆ 43.96, ನಾಲ್ಕನೇ ದಿನಕ್ಕೆ 37.47 ಮತ್ತು ಐದನೇ ದಿನಕ್ಕೆ 37.47, 30 ಕೋಟಿ ರೂ. ಗಳಿಸಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು 312.96 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ. ಗಡಿ ದಾಟಿದ್ದು, ಸದ್ಯ ಚಿತ್ರಮಂದಿರಗಳಲ್ಲಿ ಮೂಲ ಹಿಂದಿ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ಚಿತ್ರವನ್ನು T-Series Present, A T-Series Films, St Film Ltd ಮತ್ತು Bhadrakali Pictures Production ಬ್ಯಾನರ್‌ ಅಡಿಯಲ್ಲಿ ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗ, ಮುರಾದ ಖೇತಾನಿ, ಕೃಷ್ಣ ಕುಮಾರ್ ನಿರ್ಮಿಸಿದ್ದಾರೆ. ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್ ಮತ್ತು ಗುರಿಂದರ್ ಸೀಗಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ OTT ಬಿಡುಗಡೆ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೊನೆಗೆ ಜನವರಿ 26, 2024ರ ಗಣರಾಜ್ಯೋತ್ಸವದಂದು ಸಿನಿಮಾ Netflixನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

LEAVE A REPLY

Connect with

Please enter your comment!
Please enter your name here