ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಬಾಲಿವುಡ್‌ ತಾರೆಯರು ಭರಪೂರ ಅಭಿನಂದನೆ ಸಲ್ಲಿಸಿದ್ದಾರೆ. ನಿರ್ದೇಶಕ ರಾಜಮೌಳಿ, ನಟರಾದ ಅಲ್ಲು ಅರ್ಜುನ್‌, ಶಾಹಿದ್ ಕಪೂರ್, ಕರೀನಾ ಕಪೂರ್, ಅನುಪಮ್ ಖೇರ್, ಕಂಗನಾ ರನಾವತ್‌, Kay Kay ಮೆನನ್‌, ಸಂಜಯ್‌ ದತ್‌ ಮುಂತಾದವರು ಚಿನ್ನ ಗೆದ್ದ ಚೋಪ್ರಾರನ್ನು ಅಭಿನಂದಿಸಿದ್ದಾರೆ.

ಕ್ರೀಡಾಪಟು ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಬಾಲಿವುಡ್‌ ತಾರೆಯರು ಅಭಿನಂದಿಸಿದ್ದಾರೆ. ನಿನ್ನೆ (ಆಗಸ್ಟ್‌ 27, 2023) ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಪಂದ್ಯದ ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದ ನೀರಜ್ ಚೋಪ್ರಾ, 2ನೇ ಸುತ್ತಿನಲ್ಲಿ 88.17 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ನಿರ್ದೇಶಕ ರಾಜಮೌಳಿ, ನಟರಾದ ಅಲ್ಲು ಅರ್ಜುನ್‌, ಶಾಹಿದ್ ಕಪೂರ್, ಕರೀನಾ ಕಪೂರ್, ಅನುಪಮ್ ಖೇರ್, ಕಂಗನಾ ರನಾವತ್‌, Kay Kay ಮೆನನ್‌, ಸಂಜಯ್‌ ದತ್‌ ಸೇರಿದಂತೆ ಇತರೆ ಸೆಲೆಬ್ರಿಟಿಗಳು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ನೀರಜ್‌ ಚೋಪ್ರಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅನುಪಮ್‌ ಖೇರ್‌, ‘ನೀರಜ್ ಚೋಪ್ರಾ ಅವರಿಗೆ ಜಯವಾಗಲಿ ಮತ್ತು ಭಾರತ ಮಾತೆಗೂ ಜಯವಾಗಲಿ’ ಎಂದು ನೀರಜ್‌ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ರಾಜಮೌಳಿ, ‘ನಮ್ಮ ಚಿನ್ನದ ಹುಡುಗ ಮತ್ತೆ ಸಾಧಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ನಿಮ್ಮ ಅಪ್ರತಿಮ ವಿಜಯದ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ’ ಎಂದಿದ್ದಾರೆ. ಶಾಹೀದ್ ಕಪೂರ್, ‘ನಮ್ಮ ವಿಶ್ವ ಚಾಂಪಿಯನ್‌ಗೆ ಅಭಿನಂದನೆಗಳು’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಕಂಗನಾ ರನಾವತ್‌, ‘ಅಭಿನಂದನೆಗಳು ಭಾರತ. ನಿಸ್ಸಂದೇಹವಾಗಿ ಸಾರ್ವಕಾಲಿಕ ಶ್ರೇಷ್ಠ ಸಾಧನೆ ನೀರಜ್‌ ಚೋಪ್ರಾ’ ಎಂದಿದ್ದಾರೆ. ಕರೀನಾ ಕಪೂರ್‌ ಖಾನ್‌, ‘So Proud of ನೀರಜ್‌ ಚೋಪ್ರಾ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

https://www.instagram.com/reel/CweaPe-IvM6/?utm_source=ig_web_copy_link

LEAVE A REPLY

Connect with

Please enter your comment!
Please enter your name here