‘ಇಂಟು ದಿ ವೈಲ್ಡ್‌ ವಿಥ್‌ ಬೇರ್ ಗ್ರಿಲ್ಸ್‌ ಅಂಡ್ ಅಜಯ್ ದೇವಗನ್‌’ ಟ್ರೈಲರ್ ಬಿಡುಗಡೆಯಾಗಿದೆ. ಮಾಲ್ಡೀವ್ಸ್‌ನಲ್ಲಿ ಸಾಗರದ ಸಾಹಸಗಳಲ್ಲಿ ಪಾಲ್ಗೊಂಡಿರುವ ಇವರಿಬ್ಬರ ಅಡ್ವೆಂಚರ್ ಡಿಸ್ಕವರಿ ಪ್ಲಸ್‌ನಲ್ಲಿ ಅಕ್ಟೋಬರ್‌ 22ರಂದು ಸ್ಟ್ರೀಮ್ ಆಗಲಿದೆ.

ಡಿಸ್ಕವರಿಯ ಜನಪ್ರಿಯ ‘ಇಂಟು ದಿ ವೈಲ್ಡ್‌’ ಶೋನದಲ್ಲಿ ಈ ಬಾರಿ ಬಾಲಿವುಡ್ ನಟ ಅಜಯ್ ದೇವಗನ್ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಕಳೆದ ತಿಂಗಳು ಬೇರ್‌ಗ್ರಿಲ್ಸ್‌ ಜೊತೆ ಮಾಲ್ಡೀವ್ಸ್‌ನಲ್ಲಿ ಅವರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಇದೀಗ ಟ್ರೈಲರ್ ಬಿಡುಗಡೆಯಾಗಿದ್ದು ಸಾಹಸಿಗರು ಶೋ ನಿರೀಕ್ಷೆಯಿಂದ ಕಾಯುವಂತಾಗಿದೆ. ಟ್ರೈಲರ್‌ನ ಆರಂಭದಲ್ಲಿ “ಇದು ನಮ್ಮ ಇಲಾಖಾ! ಖಂಡಿತ ಇದು ಮಕ್ಕಳಾಟವಲ್ಲ ಬ್ರೊ!” ಎಂದು ಅಜಯ್‌ ದೇವಗನ್‌ರಿಗೆ ಹೇಳುವ ಬೇರ್ ಗ್ರಿಲ್ಸ್‌ ಸಾಗರದಲ್ಲಿ ಶಾರ್ಕ್‌ಗಳು ಎದುರಾದಾಗ ಏನು ಮಾಡಬೇಕೆಂದು ಟಿಪ್ಸ್‌ ಕೊಡುತ್ತಾರೆ. ಡಿಸ್ಕವರಿ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್‌ ಸಾಗರದಲ್ಲಿ ಹುಟ್ಟುಹಾಕುತ್ತಾ ಸಾಗುವ ಚಿತ್ರವಿದೆ.

ಶೋನಲ್ಲಿ ನೀರಿನಾಳದ ಸಾಹಸಗಳ ಸಂದರ್ಭದಲ್ಲಿ ಬೇರ್ ಗ್ರಿಲ್ಸ್‌ ಅವರು ದೇವಗನ್‌ರ ಸಿನಿಮಾ, ಬದುಕು, ಫ್ಯಾಮಿಲಿ ಕುರಿತು ಪ್ರಶ್ನಿಸುತ್ತಾ ಹೋಗುತ್ತಾರೆ. “ಇಂಟ್‌ ದು ವೈಲ್ಡ್‌ನಲ್ಲಿ ಇದು ನನಗೆ ಮೊದಲ ಅನುಭವ. ನನ್ನ ತಂದೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಳೆದ ಮೂರು ದಶಕಗಳಿಂದ ನಾನು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದೇನೆ. ಹಲವು ಆಕ್ಷನ್ ಸನ್ನಿವೇಶಗಳನ್ನು ಡ್ಯೂಪ್ ಇಲ್ಲದೆಯೂ ನಿಭಾಯಿಸಿದ್ದೇನೆ. ಆದರೆ ಇಲ್ಲಿನ ಅನುಭವ ತೀರಾ ವಿಶಿಷ್ಟ. ಕಂಫರ್ಟ್‌ ಜೋನ್‌ನಿಂದ ಆಚೆಗೆ ತಿರುಗಿ ನೋಡುವಂತೆ ಮಾಡಿದ ಈ ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ” ಎಂದಿದ್ದಾರೆ ನಟ ಅಜಯ್‌. ಸಾಹಸಿಗ ಬೇರ್ ಗ್ರಿಲ್ಸ್‌ ಅವರ ಬಗ್ಗೆ ಅಜಯ್‌ ಅಪಾರ ಮೆಚ್ಚುಗೆಯಿಂದ ಮಾತನಾಡುತ್ತಾರೆ. “ಪ್ರಕೃತಿಯ ಜೊತೆಗಿನ ಸಂಬಂಧವನ್ನು ಇಷ್ಟೊಂದು ಆಪ್ತವಾಗಿ ಕಟ್ಟಿಕೊಡುವ, ಪ್ರಕೃತಿಯ ಬಗ್ಗೆ ಪ್ರೀತಿ ಮೂಡಿಸುವ ಬೇರ್ ಗ್ರಿಲ್ಸ್‌ ಅವರಿಗೆ ದೊಡ್ಡ ಸೆಲ್ಯೂಟ್. ದಟ್ಟಕಾಡು, ಸಾಗರದಾಳದ ಸಾಹಸಗಳ ಮೂಲಕ ಅವರು ನಮ್ಮೆಲ್ಲರಿಗೆ ಪ್ರಕೃತಿಯ ವೈಭವವನ್ನು ಪರಿಚಯಿಸುತ್ತಿದ್ದಾರೆ” ಎನ್ನುತ್ತಾರೆ ಅಜಯ್‌. ಈ ಎಪಿಸೋಡ್‌ ಅಕ್ಟೋಬರ್ 22ರಿಂದ ಡಿಸ್ಕವರಿ ಪ್ಲಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here