ಖಂಡಿತವಾಗಿ ಈ ಸುದ್ದಿಯನ್ನು ಇದನ್ನು ರಘು ದೀಕ್ಷಿತ್‌ ಅವರ ‘ಹವಾ’ ಎನ್ನಬಹುದು. ಯಾಕಂದ್ರೆ ಇದು ಗಾಯಕ ರಘು ದೀಕ್ಷಿತ್ ಅವರು ‘ವಾಯು’ ಪುತ್ರ ಆಂಜನೇಯನ ಬಗ್ಗೆ ಹಾಡಿರುವ ಹಾಡಿನ ಬಗೆಗಿನ ಸುದ್ದಿ.

“ನನ್ನ ಸಂಗೀತದ ಜರ್ನಿಯಲ್ಲೇ ಉತ್ತಮವಾದ ಹಾಗೂ ಕಠಿಣವಾದ ಹಾಡು ಇದು. ಎಲ್ಲರಿಗೂ ಖಂಡಿತಾ ಇಷ್ಟವಾಗುತ್ತದೆ. ಹನುಮ ಜಯಂತಿ ಮೊದಲಾದ ಆಂಜನೇಯನನ್ನು ಸ್ಮರಿಸುವ ಹಬ್ಬಗಳಿಗೆ ಹೇಳಿ ಮಾಡಿಸಿದ ಹಾಗಿದೆ ಈ ಹಾಡು. ಇಂತಹ ಹಾಡು ಕೊಟ್ಟ ಸಂಗೀತ ನಿರ್ದೇಶಕರಿಗೆ ವಂದನೆಗಳು. ಇಡೀ ತಂಡಕ್ಕೆ ಶುಭಾಶಯಗಳು” ಎಂದಿದ್ದಾರೆ ಗಾಯಕ ರಘು ದೀಕ್ಷಿತ್. ಅವರು ಹೇಳುತ್ತಿರುವುದು ‘ಅವಲಕ್ಕಿ ಪವಲಕ್ಕಿ’ ಚಿತ್ರದಲ್ಲಿನ ಆಂಜನೇಯ ಸ್ಮರಣೆಯ ‘ವೀರಶೂರನೇ ಹನುಮ’ ಹಾಡಿನ ಕುರಿತಾಗಿ. ರಂಜಿತಾ ಸುಬ್ರಹ್ಮಣ್ಯ ನಿರ್ಮಿಸಿರುವ “ಅವಲಕ್ಕಿ ಪವಲಕ್ಕಿ” ಚಿತ್ರದ ಹಾಡು ನವರಾತ್ರಿಯ ಈ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

ಸಂದೀಪ್ ಎಸ್. ಅಯ್ಯರ್ ರಚನೆಯ ಈ ಹಾಡಿಗೆ ಜುಬಿನ್ ಪಾಲ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್‌ಗೆ ಅಪಾರ ಮೆಚ್ಚುಗೆ ದೊರಕಿದೆ. ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ‘ಅವಲಕ್ಕಿ ಪವಲಕ್ಕಿ’ ಅನಾವರಣಗೊಳ್ಳಲಿದೆ. ದುರ್ಗಾ ಪ್ರಸಾದ್ ನಿರ್ದೇಶನ, ನಿರೀಕ್ಷಿತ್ ಛಾಯಾಗ್ರಹಣ, ಶಾಂತ ಕುಮಾರ್ ಸಂಕಲನ ಹಾಗೂ ಮಂಜುನಾಥ್ ಶಿಂಧೆ ಕಲಾ ನಿರ್ದೇಶನ ಚಿತ್ರಕ್ಕಿದೆ. ದೀಪಕ್ ಪಟೇಲ್, ಸಮರ್ಥ್ ರಾಮಪುರ, ಭಾರಧ್ವಾಜ, ಶ್ರೇಯಾ, ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯಕುಮಾರ್, ನಾಗರಾಜ್ ಭಂಡಾರಿ  ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Previous article‘ತೆರೆ’ಯ ತೀರಕ್ಕೆ‘ಕಡಲ ತೀರದ ಭಾರ್ಗವ’; ಇದೇ 18ಕ್ಕೆ ಟೀಸರ್ ರೆಡಿ
Next articleಟ್ರೈಲರ್ | ‘ಇಂಟು ದಿ ವೈಲ್ಡ್’; ಬೇರ್ ಗ್ರಿಲ್ಸ್ ಜೊತೆ ಅಜಯ್ ದೇವಗನ್ ಸಾಹಸ

LEAVE A REPLY

Connect with

Please enter your comment!
Please enter your name here