14 ವರ್ಷಗಳ ಹಿಂದೆ ಚಿತ್ರೀಕರಣಗೊಂಡಿದ್ದ ಇರ್ಫಾನ್‌ ಖಾನ್‌ ಅಭಿನಯದ ‘ಮರ್ಡರ್‌ ಅಟ್‌ ತೀಸ್ರಿ ಮನ್ಸಿಲ್‌ 302’ ಹಿಂದಿ ಸಿನಿಮಾ ಡಿ.31ರಂದು ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ನವ್‌ನೀತ್‌ ಸೈನಿ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಣವೀರ್‌ ಶೌರಿ, ಲಕ್ಕಿ ಅಲಿ ದೀಪಾಲ್‌ ಷಾ ನಟಿಸಿದ್ದಾರೆ.

ಬಾಲಿವುಡ್‌ ಕಂಡ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ 2020, ಏಪ್ರಿಲ್‌ 29ರಂದು ನಮ್ಮನ್ನು ಅಗಲಿದರು. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅಪರೂಪದ ಪಾತ್ರ, ಸಿನಿಮಾಗಳ ಮೂಲಕ ಸಿನಿಪ್ರಿಯರಿಗೆ ನೆನಪಾಗುತ್ತಾರೆ. ಬಹುತೇಕರು ಮರೆತೇ ಹೋಗಿದ್ದ ದಶಕದ ಹಿಂದಿನ ಅವರ ಚಿತ್ರವೊಂದು ಈಗ ಸುದ್ದಿಯಾಗಿದೆ. ಹದಿನಾಲ್ಕು ವರ್ಷಗಳ ಹಿಂದೆ ನವ್‌ನೀತ್‌ ಸೈನಿ ನಿರ್ದೇಶನದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಮರ್ಡರ್‌ ಅಟ್‌ ತೀಸ್ರಿ ಮನ್ಸಿಲ್‌ 302’ ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ನನೆಗುದಿಗೆ ಬಿದ್ದಿದ್ದ ಚಿತ್ರಕ್ಕೀಗ ಮರುಜೀವ ಬಂದಿದೆ. ಚಿಕ್ಕಪುಟ್ಟ ಪೊಸ್ಟ್‌ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ನಿರ್ದೇಶಕರು ಸಿನಿಮಾ ಹೊರತರುತ್ತಿದ್ದಾರೆ. ಟ್ರೈಲರ್‌ ಬಿಡುಗಡೆಯಾಗಿದ್ದು, ನಾಡಿದ್ದು ಡಿ.31ರಿಂದ ZEE5ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಮ್ಯೂಸಿಕ್‌ ವೀಡಿಯೋಗಳನ್ನು ಚಿತ್ರಿಸುತ್ತಿದ್ದ ನವ್‌ನೀತ್‌ ಸೈನಿ ‘ವಿವಶ್‌’ ಚಿತ್ರದೊಂದಿಗೆ ಸಿನಿಮಾರಂಗ ಪ್ರವೇಶಿಸಿದ್ದರು. ಅವರ ‘ಮರ್ಡರ್‌ ಅಟ್‌ ತೀಸ್ರಿ ಮನ್ಸಿಲ್‌ 302’ ಶೀರ್ಷಿಕೆಯೇ ಹೇಳುವಂತೆ ಮರ್ಡರ್‌ ಮಿಸ್ಟರಿ. ಪ್ರಮುಖ ಪಾತ್ರದಲ್ಲಿ ಇರ್ಫಾನ್‌ ಖಾನ್‌ ಇದ್ದರೆ, ರಣವೀರ್‌ ಶೌರಿ, ಲಕ್ಕಿ ಅಲಿ ದೀಪಾಲ್‌ ಷಾ ಚಿತ್ರದ ಇತರೆ ಕಲಾವಿದರು. ವಿವಿಧ ಕಾರಣಗಳಿಂದಾಗಿ ಸಿನಿಮಾ ನಿಂತುಹೋಗಿತ್ತು. ಇದೀಗ ಇರ್ಫಾನ್‌ ಅಗಲಿ ಒಂದೂವರೆ ವರ್ಷದ ನಂತರ ಸಿನಿಮಾ ಬರುತ್ತಿದೆ. ಚಿತ್ರ ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದ್ದು, ಇರ್ಫಾನ್‌ ಅಭಿಮಾನಿಗಳು ಚಿತ್ರವನ್ನು ಎದುರು ನೋಡುತ್ತಿದ್ಧಾರೆ.

LEAVE A REPLY

Connect with

Please enter your comment!
Please enter your name here