ನೈನಾರ್‌ ಗೋಪಿ ನಿರ್ದೇಶನದಲ್ಲಿ ಜೈ ಮತ್ತು ಐಶ್ವರ್ಯ ರಾಜೇಶ್‌ ನಟಿಸುತ್ತಿರುವ ಚಿತ್ರಕ್ಕೆ ‘ಕರುಪ್ಪರ್‌ ನಗರಂ’ ಶೀರ್ಷಿಕೆ ನಿಗದಿಯಾಗಿದೆ. ನಟ, ನಿರ್ದೇಶಕ ಜೆ ಡಿ ಚಕ್ರವರ್ತಿ ಈ ಸಿನಿಮಾದ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ.

ಜೈ, ಐಶ್ವರ್ಯ ರಾಜೇಶ್, ಜೆ ಡಿ ಚಕ್ರವರ್ತಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ತಮಿಳು ಚಿತ್ರಕ್ಕೆ ‘ಕರುಪ್ಪರ್ ನಗರಂ’ ಎಂದು ಶೀರ್ಷಿಕೆ ನಿಗದಿಯಾಗಿದೆ. ಗೋಪಿ ನೈನಾರ್ ನಿರ್ದೇಶನದ ಸಿನಿಮಾ RR Filmmakers ಮತ್ತು AGL productions ಬ್ಯಾನರ್‌ ಅಡಿಯಲ್ಲಿ ತಯಾರಾಗುತ್ತಿದೆ. ಎನ್‌ ಕೆ ಎಳಂಬರಂ ಛಾಯಾಗ್ರಹಣ, ಗೋಪಿಕೃಷ್ಣ ಸಂಕಲನ, ಕೆಎಸ್ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಈಶ್ವರಿ ರಾವ್, ಜಾನ್ ವಿಜಯ್, ಶ್ರೀಜಿತ್ ರವಿ, ಸುಬ್ಬು ಪಂಚು ಮತ್ತು ಡೇನಿಯಲ್ ಆನಿ ಪೋಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಐಶ್ವರ್ಯಾ ರಾಜೇಶ್ ನಟಿಸಿದ್ದ ‘ತೀರಾ ಕಾದಲ್‌’ನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಜೈ, ‘ಲೇಬಲ್‌’ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ‘ಬ್ರೇಕಿಂಗ್ ನ್ಯೂಸ್’, ನೀಲೇಶ್ ಕೃಷ್ಣ ನಿರ್ದೇಶನದ ನಯನತಾರಾ ಅವರ ‘ಅನ್ನಪೂರ್ಣಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಶ್ವರ್ಯಾ ರಾಜೇಶ್ ಇತ್ತೀಚೆಗೆ ‘ಪುಲಿಮಾಡ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ಅರ್ಜುನ್ ಜೊತೆ ‘ತೀಯವರ್ ಕುಲೈಗಲ್ ನಡುಂಗ’ ಚಿತ್ರದಲ್ಲಿ, ವಿಷ್ಣು ವಿಶಾಲ್ ಅಭಿನಯದ ‘ಮೋಹನ್ ದಾಸ್’ ಮತ್ತು ಟೊವಿನೋ ಥಾಮಸ್ ಅವರ ‘ಅಜಯಂತೇ ರಂದಮ್ ಮೋಷನಂ’ ಸೇರಿದಂತೆ ಇತರ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಜೆ ಡಿ ಚಕ್ರವರ್ತಿ ಅವರು ಈ ಹಿಂದೆ ತೆಲುಗು ವೆಬ್ ಸರಣಿ ‘ದಯಾ’ ಮತ್ತು ಹಿಂದಿ ವೆಬ್ ಸರಣಿ ‘ತಾಜಾ ಖಬರ್‌’ನಲ್ಲಿ ಕಾಣಿಸಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here