ಶಕ್ತಿ ಚಿದಂಬರಂ ನಿರ್ದೇಶನದ ನೂತನ ತಮಿಳು ಚಿತ್ರದಲ್ಲಿ ನಟ, ನೃತ್ಯನಿರ್ದೇಶಕ ಪ್ರಭುದೇವ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಅವರು ‘ಡೆಡ್‌ ಬಾಡಿ’ ಪಾತ್ರ ನಿರ್ವಹಿಸಿದ್ದಾರೆ! ಮಡೋನಾ ಸೆಬಾಸ್ಟಿಯನ್, ಅಭಿರಾಮಿ, ಯೋಗಿ ಬಾಬು ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು.

ಪ್ರಭುದೇವ ಅವರು ವಿಭಿನ್ನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೆಸರಿಡದ ಈ ತಮಿಳು ಚಿತ್ರದಲ್ಲಿ ‘ಡೆಡ್ ಬಾಡಿ’ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾವನ್ನು ಶಕ್ತಿ ಚಿದಂಬರಂ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಡೆಡ್ ಬಾಡಿಯೇ ಹೀರೋ! ಪ್ರಭುದೇವ ಈ ಪಾತ್ರ ನಿರ್ವಹಿಸಿದ್ದಾರೆ. ಚಿತ್ರವಿಡೀ ಡೆಡ್ ಬಾಡಿಯಾಗಿರುವುದು ಒಂದು ರೀತಿ ಸವಾಲೇ ಅನ್ನಬಹುದು. ಈ ಪಾತ್ರವನ್ನು ನಿರ್ವಹಿಸುವಾಗ ಮೊದಲು ಉಸಿರು ಬಿಗಿ ಹಿಡಿಯುವ ಕಲೆ ತಿಳಿದಿರಬೇಕು. ಸತ್ತಂತೆಯೇ ಅಭಿನಯಿಸಬೇಕು. ಇಡೀ ಸಿನಿಮಾದಲ್ಲಿ ಬರುವ ಪ್ರಭುದೇವ (ಪೊಲೀಸ್‌ ಪಾತ್ರ) ಡೆಡ್ ಬಾಡಿಯ ಅಂತ್ಯಕ್ರಿಯೆ ಮಾಡುವುದೇ ಚಿತ್ರದ ಪ್ರಮುಖ ಅಂಶವಾಗಿದೆ. ‘ಪ್ರಭುದೇವ ಅವರ ದೇಹ ಹೆಚ್ಚು ಫ್ಲೆಕ್ಸಿಬಲ್ ಆಗಿದೆ. ಈ ಕಲೆಯನ್ನು ನಿರ್ದೇಶಕರು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಚಿತ್ರವನ್ನು ಶಕ್ತಿ ಚಿದರಂಬರಂ ಅವರ ಸ್ನೇಹಿತ ಹೇಳಿದ ನೈಜ ಕತೆ ಅಳವಡಿಸಿ ಹೆಣೆಯಲಾಗಿದೆ’ ಎಂದಿದ್ದಾರೆ ನಿರ್ದೇಶಕರು.

ನಿರ್ದೇಶಕರಾದ ಶಕ್ತಿ ಚಿದಂಬರಂ ಅವರು ಪ್ರಭುದೇವ ಅವರೊಟ್ಟಿಗೆ Charlie Chaplin (2019) ಮತ್ತು Charlie Chaplin 2 (2022)ಚಿತ್ರಗಳನ್ನು ಮಾಡಿದ್ದಾರೆ. ಚಿತ್ರದಲ್ಲಿ ಮಡೋನಾ ಸೆಬಾಸ್ಟಿಯನ್, ಅಭಿರಾಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಯೋಗಿ ಬಾಬು, ರೆಡಿನ್ ಕಿಂಗ್‌ಸ್ಲೀ, ರೋಬೋ ಶಂಕರ್, ಜಾನ್ ವಿಜಯ್, ಸಾಯಿ ಧೀನಾ, ಮಧುಸೂಧನ್ ರಾವ್ ಮತ್ತು ಯಶಿಕಾ ಆನಂದ್ ಚಿತ್ರದ ಇತರೆ ಕಲಾವಿದರು. ಸಿನಿಮಾಗೆ ಇನ್ನೂ ಶೀರ್ಷಿಕೆ ನಿಗಧಿಯಾಗಿಲ್ಲ. ಜನರ ಅಭಿಪ್ರಾಯ ಸಂಗ್ರಹಿಸಿ ಶೀರ್ಷಿಕೆ ಇಡಬೇಕೆಂಬುದು ನಿರ್ದೇಶಕರ ತೀರ್ಮಾನ. ಚಿತ್ರದ ಚಿತ್ರಿಕರಣ ಸಹ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿವೆ. ಚಿತ್ರಕ್ಕೆ ಅಶ್ವಿನ್ ವಿನಾಯಕಮೂರ್ತಿ ಸಂಗೀತ, ಎಂಸಿ ಗಣೇಶ್ ಚಂದ್ರ ಛಾಯಾಗ್ರಹಣ, ರಾಮರ್ ಸಂಕಲನವಿದೆ. Transindia Media and Entertainment ಚಿತ್ರ ನಿರ್ಮಿಸಿದೆ.

LEAVE A REPLY

Connect with

Please enter your comment!
Please enter your name here