ಹಿರಿಯ ನಟ ಕಮಲ ಹಾಸನ್‌ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. “ಕೋವಿಡ್‌ ಇನ್ನೂ ನಮ್ಮಿಂದ ದೂರವಾಗಿಲ್ಲ. ಸಾಧ್ಯವಾದಷ್ಟೂ ಎಚ್ಚರಿಕೆಯಿಂದಿರಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಅಮೆರಿಕಾ ಪ್ರವಾಸದಿಂದ ಹಿಂದಿರುಗಿದ ನಂತರ ನನಗೆ ಕೆಮ್ಮು ಶುರುವಾಯ್ತು. ವೈದ್ಯರ ತಪಾಸಣೆಯ ನಂತರ ಕೋವಿಡ್ ಪಾಸಿಟೀವ್ ದೃಢಪಟ್ಟಿದೆ. ನಾನೀಗ ಆಸ್ಪತ್ರೆಯಲ್ಲಿ ಐಸೋಲೇಟೆಡ್‌ ಆಗಿದ್ದೇನೆ. ಕೋವಿಡ್ ಇನ್ನೂ ಕೂಡ ನಮ್ಮಿಂದ ದೂರವಾಗಿಲ್ಲ. ನಾವು ಎಚ್ಚರಿಕೆಯಿಂದಿರುವುದು ಅವಶ್ಯ, ಹುಷಾರಾಗಿರಿ” ಎಂದು ಹಿರಿಯ ನಟ ಕಮಲ ಹಾಸನ್ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಅವರು ‘ಹೌಸ್ ಆಫ್ ಖದ್ದರ್‌’ ಫ್ಯಾಷನ್ ಬ್ರ್ಯಾಂಡ್‌ ಲಾಂಚ್ ಮಾಡಲು ಅಮೆರಿಕಕ್ಕೆ ತೆರಳಿದ್ದರು. ಪ್ರವಾಸದಿಂದ ವಾಪಸಾದ ನಂತರ ಅವರು ಬಿಗ್‌ಬಾಸ್ ರಿಯಾಲಿಟಿ ಶೋ ನಿರೂಪಣೆಗೆಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ಕೋವಿಡ್‌ ಸೋಂಕಿನ ಯಾವುದೇ ಮುನ್ಸೂಚನೆ ಸಿಕ್ಕಿರಲಿಲ್ಲ. ಮರುದಿನ ಅವರಿಗೆ ಕೆಮ್ಮು ಶುರುವಾದಾಗ ವೈದ್ಯರಲ್ಲಿ ತಪಾಸಣೆಗೆ ತೆರಳಿದಾಗ ಕೋವಿಡ್ ಪಾಸಿಟೀವ್ ದೃಢಪಟ್ಟಿದೆ.

ಕಮಲ ಹಾಸನ್ ಅವರಿಗೆ ಕೋವಿಡ್‌ ಎರಡೂ ಡೋಸ್‌ ವ್ಯಾಕ್ಸಿನೇಷನ್ ಆಗಿದೆ. ಮೊನ್ನೆ ನವೆಂಬರ್‌ 7ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅವರು ‘ವಿಕ್ರಂ’ ನೂತನ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾಗೆ ಅವರು ನಿರ್ಮಾಪಕರೂ ಹೌದು. ಫಹಾದ್ ಫಾಸಿಲ್‌ ಮತ್ತು ವಿಜಯ್ ಸೇತುಪತಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here