ರಜನೀಕಾಂತ್‌ ಅಭಿನಯದ ಬಹುನಿರೀಕ್ಷಿತ ‘ಜೈಲರ್‌’ ಸಿನಿಮಾದ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಹಾಡಿನಲ್ಲಿ ರಜನಿ ಅವರು ತಮನ್ನಾ ಭಾಟಿಯಾ ಜೊತೆ ಕುಣಿದಿದ್ದಾರೆ. ಅನಿರುದ್ಧ ರವಿಚಂದ್ರನ್‌ ಸಂಯೋಜನೆಯ ಹಾಡಿಗೆ ಶಿಲ್ಪಾ ರಾವ್‌ ದನಿಯಾಗಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲೊಂದು ರಜನೀಕಾಂತ್‌ ಅವರ ‘ಜೈಲರ್‌’. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ಹೀರೋಗಳಾದ ಶಿವರಾಜಕುಮಾರ್‌, ಮೋಹನ್‌ ಲಾಲ್‌ ಮತ್ತು ಬಾಲಿವುಡ್‌ನ ಜಾಕಿಶ್ರಾಫ್‌ ನಟಿಸುತ್ತಿದ್ದಾರೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಸಿನಿಮಾ ‘ಕಾವಾಲಾ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆ ಮಾಡುವುದರೊಂದಿಗೆ ಪ್ರೊಮೋಷನ್‌ಗೆ ಚಾಲನೆ ನೀಡಿದೆ. ರಜನೀಕಾಂತ್‌ ಮತ್ತು ತಮನ್ನಾ ಭಾಟಿಯಾ ಹೆಜ್ಜೆ ಹಾಕಿರುವ ಹಾಡಿನಲ್ಲಿ ರಜನೀಕಾಂತ್‌ರನ್ನು ಹೆಚ್ಚು ತೋರಿಸಿಲ್ಲ ಎನ್ನುವುದು ಅವರ ಅಭಿಮಾನಿಗಳ ಅಳಲು. ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ಬೇಕೆಂದೇ ರಜನೀ ಅವರ ಪಾತ್ರವನ್ನು ಹೆಚ್ಚು ರಿವೀಲ್‌ ಮಾಡಿಲ್ಲ ಎನ್ನಲಾಗುತ್ತಿದೆ.

ಅರುಣ್‌ ರಾಜಾ ಕಾಮರಾಜ್‌ ರಚನೆಯ ಈ ಹಾಡಿಗೆ ಅನಿರುದ್ಧ ಸಂಗೀತ ಸಂಯೋಜಿಸಿದ್ದು, ಶಿಲ್ಪಾ ರಾವ್‌ ಹಾಡಿದ್ದಾರೆ. ಈ ಹಿಂದೆ ಶಿಲ್ಪಾ ಹಾಡಿದ್ದ ‘ನಾನ್‌ ಮಹಾನ್‌ ಅಲ್ಲಾ’ ತಮಿಳು ಸಿನಿಮಾದ ‘ಒರು ಮಾಲೈ ನೇರಂ’ ಹಾಡು ದೊಡ್ಡ ಜನಪ್ರಿಯತೆ ಗಳಿಸಿತ್ತು. ಹಾಡಿನಲ್ಲಿ ತಮನ್ನಾರ ವಿಶೇಷ ಸ್ಟೆಪ್‌ಗಳ ಜೊತೆ ರಜನೀಕಾಂತ್‌ರ ಎಂದಿನ ಸ್ಟೈಲ್‌ ಕಾಣಿಸುತ್ತದೆ. ಜೊತೆಗೆ ಸಿನಿಮಾದ ಮೇಕಿಂಗ್‌ ವೀಡಿಯೋ ತುಣುಕುಗಳಿವೆ. ರಮ್ಯ ಕೃಷ್ಣ ಮತ್ತು ಸುನೀಲ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆಗಸ್ಟ್‌ 10ರಂದು ಸಿನಿಮಾ ತೆರೆಕಾಣಲಿದೆ. ಈ ಚಿತ್ರವಲ್ಲದೆ ತಮ್ಮ ಪುತ್ರಿ ಸೌಂದರ್ಯ ನಿರ್ದೇಶಿಸುತ್ತಿರುವ ‘ಲಾಲ್‌ ಸಲಾಂ’ ವಿಶೇಷ ಪಾತ್ರದಲ್ಲಿ ರಜನಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ನಂತರ ‘ಜೈ ಭೀಮ್‌’ ಸಿನಿಮಾ ಖ್ಯಾತಿಯ ಟಿ ಜೆ ಜ್ಞಾನವೇಲ್‌ ನಿರ್ದೇಶನದ ಚಿತ್ರದಲ್ಲಿ ರಜನಿ ತೊಡಗಿಸಿಕೊಳ್ಳಲಿದ್ದಾರೆ.

Previous articleರಕ್ಷಿತ್‌ ಶೆಟ್ಟಿಯಿಂದ ರಿಷಭ್‌ರಿಗೆ ಹೃದಯಪೂರ್ವಕ ಬರ್ತ್‌ಡೇ ಶುಭಾಶಯ
Next articleಜೆನಿಲಿಯಾ – ಮಾನವ್‌ ಕೌಲ್‌ ‘ಟ್ರೈಯಲ್‌ ಪೀರಿಯಡ್‌’ | ಜುಲೈ 21ರಿಂದ JioCinemaದಲ್ಲಿ

LEAVE A REPLY

Connect with

Please enter your comment!
Please enter your name here