ಹದಿಮೂರನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ತೆರೆಬಿದ್ದಿದೆ. 2020 ಮತ್ತು 2021ನೇ ಸಾಲಿನಲ್ಲಿ ವಿವಿಧ ವಿಭಾಗಗಳಿಗೆ ಸ್ಪರ್ಧಿಸಿ ಆಯ್ಕೆಯಾದ ಸಿನಿಮಾಗಳಿಗೆ ಇಂದಿನ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಪ್ರಶಸ್ತಿ ಪಟ್ಟಿ ಇಲ್ಲಿದೆ.

ಮಾರ್ಚ್‌ 3ರಿಂದ ಇಂದು ಮಾರ್ಚ್‌ 10ರವರೆಗೆ ನಡೆದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆಬಿದ್ದಿತು. ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚಿತ್ರೋತ್ಸವದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದ ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಯಿತು. ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಬಾರಿ 2020 ಮತ್ತು 2021ನೇ ಸಾಲಿನಲ್ಲಿ ತಯಾರಾಗಿ ಸಿನಿಮೋತ್ಸವಕ್ಕೆ ಆಯ್ಕೆಯಾದ ಸಿನಿಮಾಗಳಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿ ಪಟ್ಟಿ ಈ ಕೆಳಕಂಡಂತಿದೆ.

ಕನ್ನಡ ಸಿನಿಮಾ ಸ್ಪರ್ಧೆ – 2020 | ಪಿಂಕಿ ಎಲ್ಲಿ? (ಪ್ರಥಮ), ದಾರಿ ಯಾವುದಯ್ಯ ವೈಕುಂಠಕೆ (ದ್ವಿತೀಯ), ಓ ನನ್ನ ಚೇತನಾ (ತೃತೀಯ), ಮಸಣದ ಹೂವು (ಜ್ಯೂರಿ ಪ್ರಶಸ್ತಿ)
ಕನ್ನಡ ಸಿನಿಮಾ ಸ್ಪರ್ಧೆ – 2021 | ದೊಡ್ಡಹಟ್ಟಿ ಬೋರೇಗೌಡ (ಪ್ರಥಮ), ದಂಡಿ (ದ್ವಿತೀಯ), ದೇವಡ ಕಾಡ್‌ (ತೃತೀಯ), ಕೇಕ್‌ (ಜ್ಯೂರಿ ಪ್ರಶಸ್ತಿ)

ಕನ್ನಡ ಜನಪ್ರಿಯ – ಮನರಂಜನೆ ವಿಭಾಗ – 2020 | ದಿಯಾ (ಪ್ರಥಮ), ಶಿವಾಜಿ ಸುರತ್ಕಲ್‌ (ದ್ವಿತೀಯ), ಲವ್‌ ಮಾಕ್‌ಟೇಲ್‌ (ತೃತೀಯ),
ಕನ್ನಡ ಜನಪ್ರಿಯ – ಮನರಂಜನೆ ವಿಭಾಗ – 2021 | ಯುವರತ್ನ (ಪ್ರಥಮ), ರಾಬರ್ಟ್‌ (ದ್ವಿತೀಯ), ಕೋಟಿಗೊಬ್ಬ 3 (ತೃತೀಯ), ಪೊಗರು (ಜ್ಯೂರಿ ಪ್ರಶಸ್ತಿ)

ಚಿತ್ರಭಾರತಿ (ಭಾರತೀಯ ಸಿನಿಮಾ ವಿಭಾಗ) – 2020 | ಸೆಮ್‌ಖೋರ್‌ (ಪ್ರಥಮ), ತಾಹೀರಾ (ದ್ವಿತೀಯ), ಬ್ರಿಡ್ಜ್‌ (ತೃತೀಯ)
ಚಿತ್ರಭಾರತಿ (ಭಾರತೀಯ ಸಿನಿಮಾ ವಿಭಾಗ) – 2021 | ಮೆಪ್ಪಡಿಯಾನ್‌ (ಪ್ರಥಮ), ಗಾಂಧಿ ಅಂಡ್‌ ಕಂ. (ದ್ವಿತೀಯ), ಅಡೀ ಗೊಡಾರ್ಡ್‌ (ತೃತೀಯ)

ಏಷ್ಯನ್‌ ಸಿನಿಮಾ ಸ್ಪರ್ಧೆ – 2020 | ದಿ ನ್ಯೂಸ್‌ ಪೇಪರ್‌ (ಪ್ರಥಮ), ಗಾಡ್‌ ಆನ್‌ ದಿ ಬಾಲ್ಕನಿ (ದ್ವಿತೀಯ), ದಿ ವಾಂಡರ್‌ಲಸ್ಟ್‌ ಆಫ್‌ ಅಪು (ಜ್ಯೂರಿ ಪ್ರಶಸ್ತಿ)
ಏಷ್ಯನ್‌ ಸಿನಿಮಾ ಸ್ಪರ್ಧೆ – 2021 | ನಾಟ್‌ ಟುಡೇ (ಪ್ರಥಮ), ಆಬ್ಸೆನ್ಸ್‌ (ದ್ವಿತೀಯ), ಟೂ ಡಾಗ್ಸ್‌ (ಜ್ಯೂರಿ ಪ್ರಶಸ್ತಿ)

Previous articleಮತ್ತೆ ‘RRR’ ಪ್ರಮೋಷನ್ ಶುರು; ಮಾರ್ಚ್ 14ಕ್ಕೆ ‘ಜಂಡಾ’ ಸಾಂಗ್‌
Next article‘ಜೇಮ್ಸ್‌’ ಲಿರಿಕಲ್‌ ವೀಡಿಯೋ | ಮಾರ್ಚ್‌ 17ಕ್ಕೆ ಪುನೀತ್‌ ರಾಜಕುಮಾರ್‌ ಸಿನಿಮಾ

LEAVE A REPLY

Connect with

Please enter your comment!
Please enter your name here