ಶ್ರೀನಿಧಿ ನಿರ್ದೇಶನದಲ್ಲಿ ದೀಕ್ಷಿತ್‌ ನಟಿಸುತ್ತಿರುವ ‘ಬ್ಲಿಂಕ್‌’ ಸೈನ್ಸ್‌ ಫಿಕ್ಷನ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಹಗಲುವೇಶ, ವೀರಗಾಸೆ ಸೇರಿದಂತೆ ಒಂದಷ್ಟು ಕಲೆಗಳ ಪರಿಚಯವಿದ್ದು, ಬ್ಲಾಕ್‌ ಅಂಡ್‌ ವೈಟ್‌ನಲ್ಲಿದೆ ಟೀಸರ್‌.

ಉತ್ಸಾಹಿ ಯುವಕರ ತಂಡ ಸೇರಿ ರೂಪಿಸುತ್ತಿರುವ ‘ಬ್ಲಿಂಕ್’ ಕನ್ನಡ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇಡೀ ಟೀಸರ್ ಕಪ್ಪು-ಬಿಳುಪಿನಿಂದ ಕೂಡಿದೆ. ವಿಶಿಷ್ಟ ಪ್ರಯತ್ನದಲ್ಲಿ ಮೂಡಿಬಂದಿರುವ ಟೀಸರ್‌ನಲ್ಲಿ ಹಗಲುವೇಶ, ವೀರಗಾಸೆ ಸೇರಿದಂತೆ ಒಂದಷ್ಟು ಕಲೆಗಳನ್ನು ನಿರ್ದೇಶಕರು ಪರಿಚಯಿಸಿದ್ದಾರೆ. ಇಂಪ್ರೆಸೀವ್‌ ಆಗಿ ಮೂಡಿಬಂದಿರುವ ಟೀಸರ್ ನೋಡುಗರ ಕ್ಯೂರಿಯಾಸಿಟಿ ದುಪ್ಪಟ್ಟು ಮಾಡುತ್ತದೆ. ಐಟಿ ಉದ್ಯೋಗಿ ರವಿಚಂದ್ರ ಎ.ಜೆ. ನಿರ್ಮಾಣದ ಚಿತ್ರವಿದು. ಸಿನಿಮಾ ಮೇಲಿನ ಆಸಕ್ತಿ ಬಣ್ಣದ ಲೋಕಕ್ಕೆ ಅವರನ್ನು ಕರೆತಂದಿದೆ. ಹಾಗೆಂದು ರವಿಚಂದ್ರ ಅವರಿಗೆ ಬಣ್ಣದ ಲೋಕ ಹೊಸದೇನೂ ಅಲ್ಲ. ಎರಡು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ರವಿಚಂದ್ರ ಬ್ಲಿಂಕ್ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

ತಮ್ಮದೇ ಜನನಿ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್‌ನಡಿ ರವಿಚಂದ್ರ ‘ಬ್ಲಿಂಕ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಹೀರೋ ಆಗಿ ನಟಿಸುತ್ತಿರುವ ಬ್ಲಿಂಕ್ ಸಿನಿಮಾಗೆ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಸಿಸುತ್ತಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ಸೈನ್ಸ್ ಫಿಕ್ಷನ್ ಬ್ಲಿಂಕ್ ಸಿನಿಮಾದಲ್ಲಿ ವಜ್ರಧೀರ್ ಜೈನ್, ಸುರೇಶ ಅನಗಳ್ಳಿ, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್, ಯಶಸ್ವಿನಿ ರಾವ್ ಮುಂತಾದವರು ನಟಿಸುತ್ತಿದ್ದಾರೆ. ಅನಿವಾಶ್ ಶಾಸ್ತ್ರೀ ಛಾಯಾಗ್ರಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ, ದೀಕ್ಷಾ ಕೃಷ್ಣ ವಸ್ತ್ರ ವಿನ್ಯಾಸ, ಏಕಾಂತ್ ಪೋಸ್ಟರ್ ಡಿಸೈನ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಬ್ಲಿಂಕ್ ಸಿನಿಮಾ ತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಟೀಸರ್‌ನೊಂದಿಗೆ ಸದ್ದು ಮಾಡಿದೆ.

Previous articleಟ್ರೆಂಡಿಂಗ್‌ನಲ್ಲಿ #boycottRRRinkarnataka; ಪ್ರದರ್ಶಕರ ಮನವೊಲಿಕೆಗೆ ಮುಂದಾದ ಚಿತ್ರತಂಡ
Next articleಬಹುಭಾಷಾ ನಟ ಸುಮನ್‌ರ ಬಂಜಾರ ಭಾಷೆಯ ಸಿನಿಮಾ ‘ಸೇವಾ ದಾಸ್’ ಏಪ್ರಿಲ್‌ 1ಕ್ಕೆ

LEAVE A REPLY

Connect with

Please enter your comment!
Please enter your name here