ನವೆಂಬರ್‌ 2ರಿಂದ ಸ್ಟ್ರೀಮ್‌ ಆಗುತ್ತಿರುವ ‘ಜವಾನ್‌’ ಹಿಂದಿ ಸಿನಿಮಾ Netflixನಲ್ಲಿ (ಭಾರತ) ಅತಿ ಹೆಚ್ಚು ವೀಕ್ಷಿಸಿದ ಚಿತ್ರವಾಗಿ ಗಮನಸೆಳೆದಿದೆ. ಅಟ್ಲೀ ನಿರ್ದೇಶನದಲ್ಲಿ ಶಾರುಖ್‌ ಖಾನ್‌ ನಟಿಸಿರುವ ಸಿನಿಮಾ ಸೆಪ್ಟೆಂಬರ್‌ 7ರಂದು ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು.

ಶಾರುಖ್ ಖಾನ್ ಅಭಿನಯದ ‘ಜವಾನ್’ ಹಿಂದಿ ಸಿನಿಮಾ Netflixನಲ್ಲಿ (ಭಾರತ) ಅತಿ ಹೆಚ್ಚು ವೀಕ್ಷಿಸಿದ ಚಲನಚಿತ್ರವಾಗಿದೆ. ಅಟ್ಲೀ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾಮಣಿ ಇದ್ದಾರೆ. ಶಾರುಖ್ ಖಾನ್ ಈ ಕುರಿತು, ‘Netflixನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಸಿನಿಮಾ ಜವಾನ್ ಎನ್ನುವ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಸಂತಸ ಪಡುತ್ತೇನೆ. ಚಿತ್ರಕ್ಕೆ ಹೆಚ್ಚು ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಕ್ಕಾಗಿ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸುತ್ತೇನೆ. Netflix ಪ್ರೇಕ್ಷಕರಿಂದ ನಾವು ಪಡೆದಿರುವ ಅಗಾಧ ಪ್ರತಿಕ್ರಿಯೆಯಿಂದಾಗಿ ಭಾರತೀಯ ಸಿನಿಮಾದ ಗುಣಮಟ್ಟ ಏನೆಂದು ತಿಳಿದಿದೆ. ಜವಾನ್ ಕೇವಲ ಚಿತ್ರವಲ್ಲ, ಇದೊಂದು ಕಥೆ ಮತ್ತು ಖುಷಿಯ ಆಚರಣೆಯಾಗಿದೆ. ಇದಕ್ಕಾಗಿ ನಾವು ಹೆಮ್ಮೆಪಡುತ್ತೇವೆ’ ಎಂದಿದ್ದಾರೆ.

Red Chillies Entertainment ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಚಿತ್ರ ನಿ‌ರ್ಮಿಸಿದ್ದಾರೆ. ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಯೋಗಿ ಬಾಬು, ಸಾನ್ಯ ಮಲ್ಹೋತ್ರಾ, ಸುನಿಲ್‌ ಗ್ರೋವರ್‌, ರಿದ್ಧಿ ಡೋಗ್ರಾ ಚಿತ್ರದ ಇತರೆ ಪ್ರಮುಖ ಕಲಾವಿದರು. ಮೂಲ ಹಿಂದಿ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ಸೆಪ್ಟೆಂಬರ್‌ 7ರಂದು ಸಿನಿಮಾ ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು. ನವೆಂಬರ್‌ 2ರಿಂದ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here