ವೈಶಾಖ್‌ ನಿರ್ದೇಶನದಲ್ಲಿ ಮಮ್ಮೂಟಿ ನಟಿಸುತ್ತಿರುವ ‘ಟರ್ಬೋ’ ಚಿತ್ರದ ವಿಶೇಷ ಪಾತ್ರದಲ್ಲಿ ಕನ್ನಡಿಗ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಆಕ್ಷನ್‌ – ಕಾಮಿಡಿ ಚಿತ್ರದ ಪ್ರಮುಖ ಪಾತ್ರದಲ್ಲಿ ತೆಲುಗು ನಟ ಸುನಿಲ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಮಮ್ಮುಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಟರ್ಬೋ’ ಆಕ್ಷನ್ – ಕಾಮಿಡಿ ಮಲಯಾಳಂ ಚಿತ್ರದಲ್ಲಿ ಕನ್ನಡಿಗ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಧುನ್ ಮ್ಯಾನುಯೆಲ್ ಥಾಮಸ್ ಚಿತ್ರಕಥೆ ರಚಿಸಿರುವ ಚಿತ್ರವು ವೈಶಾಖ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ರಾಜ್‌ ಮಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ. ಮಮ್ಮೂಟಿ ನಿರ್ಮಾಣ ಕಂಪನಿಯು ತನ್ನ Instagram ಖಾತೆಯಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ಒಳಗೊಂಡ ಅಧಿಕೃತ ಪೋಸ್ಟರ್ ಹಂಚಿಕೊಂಡು, ‘Welcome Onboard Highly Talented Raj B Shetty’ ಎಂದು ಕ್ಯಾಪ್ಶನ್‌ ನೀಡಿದೆ. ಇತ್ತೀಚೆಗೆ ‘ಟರ್ಬೊ’ ಪಾತ್ರವರ್ಗದ ಭಾಗವಾಗಿರುವ ಪ್ರಶಾಂತ್ ಅಲೆಕ್ಸಾಂಡರ್ ಅವರು ಅಧಿಕೃತ ಪ್ರಕಟಣೆಯ ಮೂಲಕ ರಾಜ್ ಬಿ ಶೆಟ್ಟಿ ಅವರು ಚಿತ್ರದಲ್ಲಿ ನಟಿಸುವ ಕುರಿತು ದೃಢಪಡಿಸಿದ್ದರು.

ಈ ಚಿತ್ರದಲ್ಲಿ ಟಾಲಿವುಡ್ ನಟ ಸುನಿಲ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಮತ್ತು ‘ಗರುಡ ಗಮನ ವೃಷಭ ವಾಹನ’ ಚಿತ್ರಗಳ ನಂತರ ರಾಜ್‌ ಬಿ ಶೆಟ್ಟಿ ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನವೆಂಬರ್‌ 24ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ತೆರೆಕಂಡ ಮಮ್ಮೂಟಿ ಅಭಿನಯದ ‘ಕಣ್ಣೂರ್ ಸ್ಕ್ವಾಡ್’ ಮಲಯಾಳಂ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಅವರ ‘ಕಾತಲ್-ದಿ ಕೋರ್’ ಇಂದು (ನವೆಂಬರ್ 23) ತೆರೆಕಾಣುತ್ತಿದೆ. ರಾಹುಲ್ ಸದಾಶಿವನ್ ನಿರ್ದೇಶನದ ‘ಬ್ರಮಯುಗಂ’, ಗೌತಮ್ ವಾಸುದೇವ್ ಮೆನನ್ ನಟಿಸುತ್ತಿರುವ ‘ಬಾಜೂಕಾ’ ಚಿತ್ರೀಕರಣದಲ್ಲಿರುವ ಮಮ್ಮೂಟಿ ಪ್ರಮುಖ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here