ಭುವನೇಶ್ ಅರ್ಜುನನ್ ನಿರ್ದೇಶನದಲ್ಲಿ ಜಯಂ ರವಿ ನಟಿಸುತ್ತಿರುವ ನೂತನ ತಮಿಳು ಸಿನಿಮಾ ‘ಜೀನಿ’ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿರುವ ಈ ಸಿನಿಮಾದ ನಾಯಕಿಯರಾಗಿ ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್ ಮತ್ತು ವಾಮಿಕಾ ಗಬ್ಬಿ ನಟಿಸುತ್ತಿದ್ದಾರೆ.
ಜಯಂ ರವಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಜೀನಿ’ ತಮಿಳು ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಆಸ್ಕರ್ ಪುರಸ್ಕೃತ ಎ ಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿರುವ ಚಿತ್ರದಲ್ಲಿ ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್ ಮತ್ತು ವಾಮಿಕಾ ಗಬ್ಬಿ ನಾಯಕಿಯರಾಗಿ ನಟಿಸಲಿದ್ದಾರೆ. ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ನಲ್ಲಿ ಜಯಂ ರವಿ ಜಾದೂಗಾರನಂತೆ ಕಾಣಿಸಿಕೊಂಡಿದ್ದಾರೆ. ಅವರ ಸುತ್ತಲೂ ಕಬ್ಬಿಣದ ಸರಪಳಿ, ಬಂಗಾರದ ನಾಣ್ಯಗಳು, ನಗದು ಹಣ, ಐಸ್ ಕ್ರೀಮ್, ಇತರೆ ವಸ್ತುಗಳನ್ನು ಕಾಣಬಹುದು. ಈ ಕುರಿತು ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯಂ ರವಿ, ‘ಒಂದು ವಿಭಿನ್ನ ಮ್ಯಾಜಿಕ್ ಅನುಭವಕ್ಕಾಗಿ ಸಿದ್ದರಾಗಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಚಿತ್ರವನ್ನು ಭುವನೇಶ್ ಅರ್ಜುನನ್ ನಿರ್ದೇಶಿಸುತ್ತಿದ್ದು, ಮಹೇಶ್ ಮುತ್ತು ಸ್ವಾಮಿ ಅವರ ಛಾಯಾಗ್ರಹಣ, ಪ್ರದೀಪ್ ಇ ರಾಘವ್ ಅವರ ಸಂಕಲನವಿದೆ. ಚಿತ್ರವನ್ನು Vels Film International ಬ್ಯಾನರ್ ಅಡಿಯಲ್ಲಿ ಈಶಾರಿ ಕೆ ಗಣೇಶ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ಸೈರನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜಯಂ ರವಿ ಅವರು ಕಮಲ್ ಹಾಸನ್ ಮತ್ತು ಮಣಿರತ್ನಂ ಅವರ ‘ಥಗ್ ಲೈಫ್’ ಮತ್ತು ಅವರದೇ ನಟನೆಯ 2015ರ ಹಿಟ್ ಕ್ರೈಮ್ ಡ್ರಾಮಾದ ಮುಂದುವರಿದ ಭಾಗವಾದ ‘ಥಾನಿ ಒರುವನ್ 2’ ಮತ್ತು ‘ಕದಲಿಕ್ಕುಂ ನೆರಮಿಲ್ಲೈ’ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಿತ್ಯಾ ಮೆನೆನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.