ಪ್ರಸಿದ್ಧ್‌ ನಿರ್ದೇಶನದಲ್ಲಿ ಕಿರಣ್‌ ರಾಜ್‌ ನಟಿಸಿರುವ ‘ಭರ್ಜರಿ ಗಂಡು’ ಸಿನಿಮಾದ ‘ಹುಯ್ಯೋ ಹುಯ್ಯೋ ಮಳೆರಾಯ’ ಹಾಡು ಬಿಡುಗಡೆಯಾಗಿದೆ. ವಿ ನಾಗೇಂದ್ರಪ್ರಸಾದ್‌ ರಚನೆಯ ಈ ಹಾಡಿಗೆ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜಿಸಿದ್ದು, ರಘು ದೀಕ್ಷಿತ್‌ ಹಾಡಿದ್ದಾರೆ. ಸಿನಿಮಾ ಇದೇ ಏಪ್ರಿಲ್‌ 5ಕ್ಕೆ ತೆರೆಕಾಣಲಿದೆ.

ಕಿರಣ್‌ ರಾಜ್‌ ನಟನೆಯ ‘ಭರ್ಜರಿ ಗಂಡು’ ಸಿನಿಮಾದ ಮತ್ತೊಂದು ಹಾಡು ‘ಹುಯ್ಯೋ ಹುಯ್ಯೋ ಮಳೆರಾಯ’ ಬಿಡುಗಡೆಯಾಗಿದೆ. ವಿ ನಾಗೇಂದ್ರಪ್ರಸಾದ್‌ ರಚನೆಯ ಈ ಹಾಡಿಗೆ ಗುಮ್ಮಿನೇನಿ ವಿಜಯ್‌ ಸಂಗೀತ ಸಂಯೋಜಿಸಿದ್ದು, ರಘು ದೀಕ್ಷಿತ್‌ ಹಾಡಿದ್ದಾರೆ. ಪ್ರಸಿದ್ಧ್‌ ನಿರ್ದೇಶನದ ಈ ಸಿನಿಮಾ ಇದೇ ಏಪ್ರಿಲ್‌ 5ಕ್ಕೆ ತೆರೆಕಾಣಲಿದೆ. ‘ಬಿಸಿಲು ಹೆಚ್ಚಾಗಿದ್ದು, ನೀರಿನ ಬವಣೆ ಹೆಚ್ಚಿದೆ. ಈ ಸಂದರ್ಭದಲ್ಲಿ ಉತ್ತಮ ಮಳೆಯಾಗಿ ನೀರಿನ ಬವಣೆ ದೂರಾಗಲಿ ಎನ್ನುವ ಆಶಯ ಈ ಹಾಡಿನಲ್ಲಿದೆ. ದೊಡ್ಡ ಸಂಖ್ಯೆಯ ನೃತ್ಯ ಕಲಾವಿದರೊಂದಿಗೆ ಕುಣಿದಿರುವ ಈ ಹಾಡು ಪ್ರೇಕ್ಷಕರ ಕಣ್ಮನ ತಣಿಸಲಿದೆ’ ಎನ್ನುತ್ತಾರೆ ಚಿತ್ರದ ಹೀರೋ ಕಿರಣ್‌ ರಾಜ್‌.

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಕಿರಣ್‌ ರಾಜ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರ ‘ರಾನಿ’ ಚಿತ್ರೀಕರಣದಲ್ಲಿದೆ. ವಿವಿಧ ಕಾರಣಗಳಿಂದ ತಡವಾಗಿ ಚಿತ್ರೀಕರಣ ಪೂರ್ಣಗೊಳಿಸಿಕೊಂಡ ‘ಭರ್ಜರಿ ಗಂಡು’ ಇದೀಗ ಬಿಡುಗಡೆಯಾಗುತ್ತಿದೆ. ಯಶ ಶಿವಕುಮಾರ್‌ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಪ್ರಸಿದ್ಧ್‌ ಸಿನಿಮಾಸ್, ಮದನ್ ಗೌಡ ಹಾಗೂ ಅನಿಲ್ ಕುಮಾರ್ ಈ ಚಿತ್ರ ನಿರ್ಮಿಸಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗೂ ವೆಂಕಿ ಯುಡಿವಿ ಸಂಕಲನವಿರುವ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ರಮೇಶ್ ಭಟ್ , ರಾಕೇಶ್ ರಾಜ್, ಸುರೇಖ, ವೀಣಾ ಸುಂದರ್, ಜಯಶ್ರೀ, ಸೌರಭ್ ಕುಲಕರ್ಣಿ, ಮಡೆನೂರು ಮನು, ಗೋವಿಂದೇ ಗೌಡ ಚಿತ್ರದ ತಾರಾಬಳಗದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here